Dhammayana - Beetle Book Shop

ಧಮ್ಮಾಯಣ

Rs. 484.00
Sale price  Rs. 484.00 ಸಾಮಾನ್ಯ ಬೆಲೆ  Rs. 550.00
ಉತ್ಪನ್ನದ ಮಾಹಿತಿಗೆ ತೆರಳಿ
Dhammayana - Beetle Book Shop

ಧಮ್ಮಾಯಣ

Rs. 484.00
Sale price  Rs. 484.00 ಸಾಮಾನ್ಯ ಬೆಲೆ  Rs. 550.00

ಮಾರಾಟಗಾರರು : BEETLE BOOK SHOP

ಓಘತರಣಕ್ಕೆ ಧಮ್ಮಯಾನವನ್ನು ಓದಿ

'ಧಮ್ಮಯಾನ'ವು ನಾಲ್ಕು ವರ್ಷಗಳ ತಪಸ್ಸಿನ ದೆಸೆಯಿಂದಾಗಿ ಇಂದು ಒಂದು ಬೃಹತ್ ಗ್ರಂಥವಾಗಿ ಹೊರಬರುತ್ತಿದೆ. ಅದಕ್ಕಾಗಿ ಮಿತ್ರ ಮೂಡ್ನಾಕೂಡು ಚಿನ್ನಸ್ವಾಮಿಯವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ. ತಪಸ್ಸು ಎನ್ನುವ ಪದವನ್ನು ಕೇವಲ ಅಲಂಕಾರಿವಾಗಿ ಪ್ರಯೋಗಮಾಡಿಲ್ಲ. 'ಸಂವಾದ' ಸಂಚಿಕೆಯಲ್ಲಿ ಬರುತ್ತಿದ್ದ 'ಧಮ್ಮಯಾನ' ಧಾರಾವಾಹಿಯನ್ನು ನಿರಂತರವಾಗಿ ಓದಿಕೊಂಡು ಬಂದಿದ್ದೇನೆ. ಧಮ್ಮಯಾನವು ಅಷ್ಟೇನು ಸುಲಭದ ಯಾನ (ಪ್ರಯಾಣ)ವಲ್ಲ, ಧಮ್ಮವನ್ನು ಹೊತ್ತ ಯಾನವು (ದೋಣಿಯು )ಭದ್ರವಾಗಿದ್ದರೇನೆ ಓಘತರಣವು (ಪ್ರವಾಹ ದಾಟುವುದು) ಸಾಧ್ಯ (ಸಂಯುಕ್ತ ನಿಕಾಯದ ಸಗಾತಾ ವಗ್ಗದ ಓಘತರಣವನ್ನು ನೋಡಿ). ಧಮ್ಮಯಾನದ ಪ್ರಯಾಣವು ಸುಖಕರವಾಗಿರಬೇಕಾದರೆ ಮತ್ತು ಧಮ್ಮದೋಣಿಯು ಭದ್ರವಾಗಿರಬೇಕಾದರೆ ಕೃತಿಕಾರನು ತಪಸ್ಸು ಮಾಡಲೇಬೇಕು. ಕೃತಿಕಾರನು ಸಮರ್ಪಣಾಭಾವದಿಂದ ತಪಸ್ಸು ಮಾಡಿದ್ದರಿಂದಾಗಿ ದೋಣಿಯೂ ಭದ್ರವಾಗಿದೆ. ಪ್ರಯಾಣವೂ ಸುಖಕರವಾಗಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ.

ಚಿನ್ನಸ್ವಾಮಿಯವರು ವಿಪಸ್ಸನ ಧ್ಯಾನಿಗಳು. ಪಾಲಿ ಮೂಲಗ್ರಂಥಗಳನ್ನು (ಅವುಗಳ ಇಂಗ್ಲಿಷ್ ರೂಪದಲ್ಲಿ) ಓದಿಕೊಂಡವರು. ಯಾವ ಮಹನೀಯರು ಪಾಲಿ ಮೂಲದ ತ್ರಿಪಿಟಕಗಳನ್ನು ಓದಿ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೋ ಅಂತಹ ಪೂಜ್ಯರಾದ ಭಿಕ್ಕು ಬೋಧಿಯವರನ್ನು, ಪರಮಪೂಜ್ಯ ಆಚಾರ್ಯ ಬುದ್ಧರಕ್ಷಿತ ಥೇರಾ ಇನ್ನೂ ಮುಂತಾದವರೊಡನೆ ಬೆರೆತವರು. ಹೀಗಾಗಿ ಇವರು ತಿಲಕ್ಷಣ ಬಗ್ಗೆ ಬರೆಯುವಾಗಾಗಲಿ, ಆರ್ಯಸತ್ಯಗಳ ಬಗ್ಗೆ ಟಿಪ್ಪಣೆ ಮಾಡುವಾಗಾಗಲಿ ಅತ್ಯಂತ ಎಚ್ಚರದಿಂದ ಮೂಲಕ್ಕೆ ಲೋಪ ಬರದಂತೆ, ಕಠಿಣ ಸಂಗತಿಗಳನ್ನು ಸರಳ ಕನ್ನಡ ಪದಗಳಲ್ಲಿ ಮತ್ತು ಸುತ್ತಗಳನ್ನು ಆಧರಿಸಿಯೇ ಸಾಮಾನ್ಯ ಓದುಗನೂ ಪರಿಗ್ರಹಿಸುವ ರೀತಿಯಲ್ಲಿ ಮಂಡಿಸುತ್ತಾರೆ.

ಕನ್ನಡದಲ್ಲಿ ಬರೆಯುವ ಬೌದ್ಧ ಸಾಹಿತಿಗಳು ಬಹಳಷ್ಟು ಜನರಿದ್ದಾರೆ. ಉತ್ತಮೋತ್ತಮವಾಗಿ ಬರೆದವರೂ ಇದ್ದಾರೆ. ಅದಕ್ಕೆ ಕೊರತೆ ಏನಿಲ್ಲ. ಆದರೆ ಮೂಲ ಪಿಟಕಳಿಗೆ ಲಗ್ಗೆ ಹಾಕಿ ಅಲ್ಲಿಂದ ಹೆಕ್ಕಿ ಬರೆಯುವ ಪ್ರಥಮ ಶ್ರೇಣಿ ಪ್ರೈಮರಿ ರೈಟರ್ಸ್) ಬರಹಗಾರರು ಕಡಿಮೆಯೆ. ನಾನು ಕಂಡುಕೊಂಡಂತೆ ಮೂಡ್ಯಾಕೂಡು ಚಿನ್ನಸ್ವಾಮಿಯವರು ಪ್ರಥಮ ಶ್ರೇಣಿ ಬರಹಗಾರರಲ್ಲಿ ಒಬ್ಬರು. ನದಿಯಿಂದ ಮೊಗೆದ ನೀರಿಗೂ, ನಲ್ಲಿಯಿಂದ ಬಂದ ನೀರಿಗೂ ವ್ಯತ್ಯಾಸವಿರುತ್ತದೆ!

ಚಿನ್ನಸ್ವಾಮಿಯವರು ಧಮ್ಮವನ್ನು ರಸವತ್ತಾದ ಭಾಷೆಯಲ್ಲಿ ಕಥೆಯನ್ನು ಸರಾಗವಾಗಿ ಓದಿಕೊಂಡು ಹೋಗುವಂತೆ ತುಲನಾತ್ಮಕವಾಗಿ ಬರೆಯುತ್ತಾ ಹೋಗುತ್ತಾರೆ. ಪಾಲಿ ಪಾರಿಭಾಷಿಕ ಪದಗಳನ್ನು ಸುಲಭ ಕನ್ನಡಕ್ಕೆ ತಂದಿರುವುದು ವಿಶೇಷ ಸಂಗತಿ. ಪುರುಷಸೂಕ್ತದ ಮಂತ್ರಗಳನ್ನು ವಿಮರ್ಶಿಸುತ್ತಾ, ಛಾಂದೋಗೋಪನಿಷತ್ ವಾಕ್ಯಗಳನ್ನು ಉಧೃತಗೊಳಿಸುತ್ತಾ ತಮ್ಮ ಮಾತುಗಳಿಗೆ ಅರ್ಥವನ್ನು ತುಂಬುತ್ತಾರೆ. ಸಂದರ್ಭ ಬಂದಾಗ ಬುಧನ ಜಾತಕ ಕಥೆಗಳನ್ನೇ ಪ್ರಶ್ನಿಸುತ್ತಾರೆ. ಇದು ಒಬ್ಬ ಶ್ರೇಷ್ಠ ಚಿಂತಕನ ನಿರ್ಭೀತ ಉದಾನ (ಉದ್ಘಾರ)ವಾಗುತ್ತದೆ.

ಬುದ್ದರ ಬಗ್ಗೆ ಅರಿಯಬೇಕೆಂದರೆ, ಬೌದ್ಧಧರ್ಮವನ್ನು ಅಚ್ಚಗನ್ನಡದಲ್ಲಿ ತಿಳಿದುಕೊಳ್ಳಬೇಕೆಂದರೆ 'ಧಮ್ಮಯಾನ'ವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಇದೊಂದು ಶ್ರೇಷ್ಠ ಗ್ರಂಥ. ಈ 'ಧಮ್ಮಯಾನ'ವು ಎಲ್ಲರ ಬದುಕಿನ ಸುಂದರಯಾನವಾಗಲಿ ಎಂದು ಆಶಿಸುತ್ತೇನೆ.

- ಮೊಳಕಾಲ್ಕೂರು ಶ್ರೀನಿವಾಸಮೂರ್ತಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು