{"product_id":"devara-kudure-s-gangadharayya","title":"ದೇವರ ಕುದುರೆ (Devara Kudure)","description":"\u003cp data-path-to-node=\"8,0\"\u003eಕಥೆಯ ಗುಟ್ಟು, ಚೆಲುವು ಅಡಗಿರುವುದು ಅದು ಮಿಡಿಯುವ ಧ್ವನಿಯಲ್ಲೇ ಹೊರತು, ಹೇಳುವ ವಿವರಗಳಲ್ಲ ಅಲ್ಲ. ಆ ಧ್ವನಿಯೇ ಕಥೆಯ ಕಥನಕ್ರಮವೂ ಹೌದು. ಎಸ್. ಗಂಗಾಧರಯ್ಯ ಅವರ ಈ ಸಂಕಲನದ ಕಥೆಗಳು, ಕಥೆಗಾಗಿ ಕಥೆ ಹೇಳುವುದಿಲ್ಲ. ಕಥೆಯನ್ನು ಚಂದಗೊಳಿಸುವ ಉದ್ದೇಶದಿಂದ ಭಾಷೆಯನ್ನು ಬಳಸಿಕೊಳ್ಳುವುದಿಲ್ಲ. ಘಟನೆ, ವಿವರ, ಆಲೋಚನೆಗಳ ಮಂಡನೆ ಮುಂತಾದ ಸಂಗತಿಗಳು ಕಥೆಗಾರ ಬಳಸುವ ಕ್ರಮದಿಂದ ನಮ್ಮದೇ ಅನುಭವವಾಗಿ ಬೆಳೆಯುತ್ತವೆ; ಕಥೆಯ ನಿಜದನಿ ಮೂಡುವುದು ಕಥೆಗಾರ ಬಳಸುವ ಭಾಷೆಯಿಂದಲೇ ಎನ್ನುವುದನ್ನು ಇಲ್ಲಿನ ಕಥೆಗಳು ತೋರಿಸಿಕೊಡುತ್ತವೆ.\u003c\/p\u003e\n\u003cp data-path-to-node=\"8,1\"\u003eಇಲ್ಲಿನ ಬಹುಪಾಲು ಪಾತ್ರಗಳು ತಮ್ಮ ಜೊತೆಗೆ ಸುತ್ತಲಿನ ಪರಿಸರವನ್ನು ಮತ್ತು ಆ ಮೂಲಕ ಇಡೀ ಸಮುದಾಯವನ್ನು ಕರೆದುಕೊಂಡು ನಮ್ಮೆದುರು ಬರುತ್ತವೆ. ಈ ಕಥೆಗಳು ಏಕಕಾಲಕ್ಕೆ ನಮ್ಮ ಅಂತರಂಗದ ಕತೆಯಾಗಿಯೂ, ಸಮುದಾಯದ ಕತೆಯಾಗಿಯೂ ಕಾಣುವುದು ಈ ಕಾರಣದಿಂದಾಗಿಯೇ. ಅನುಭವ ತೀವ್ರತೆಯೊಳಗೆ ಕಥನಕಲೆಯು ಕರಗುತ್ತ ಕಲೆಯು ಜೀವನವಾಗಿ ಮಾರ್ಪಡುತ್ತದೆ. ಪ್ರತಿ ಕತೆಯ ಕೊನೆಯಲ್ಲೂ ನಮ್ಮ ಅಂತರಂಗದೊಳಗೆ ಆಡುವ ವಿಚಿತ್ರ ಅನುಭವವು, ಮರದ ನಂಟು ಕಳಚಿದ ಎಲೆಯು ಹಾರುತ್ತ ಬಂದು ಕೊಳಕ್ಕೆ ಹಗುರ ಬಿದ್ದು ಕೊಳದ ನೀರು ಸಣ್ಣಗೆ ಮಿಡುಕುವ ರೀತಿಯದ್ದು.\u003c\/p\u003e\n\u003cp data-path-to-node=\"8,2\"\u003eಗಂಗಾಧರಯ್ಯ ಅವರು ಕಾದಂಬರಿ ಬರೆದರೆ ಹೇಗಿರಬಹುದು ಎನ್ನುವ ಕುತೂಹಲ ಮತ್ತು ಬರೆಯಲಿ ಎಂಬ ಹಂಬಲವನ್ನು ಹುಟ್ಟಿಸುವುದೇ ಈ ಕಥೆಗಳ ಶಕ್ತಿ.\u003c\/p\u003e\n\u003cp data-path-to-node=\"8,3\"\u003e\u003cb data-path-to-node=\"8,3\" data-index-in-node=\"0\"\u003e– ಜ.ನಾ. ತೇಜಶ್ರೀ\u003c\/b\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":52663219126555,"sku":null,"price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-07-24at4.44.19PM.jpg?v=1784891776","url":"https:\/\/beetlebookshop.com\/kn\/products\/devara-kudure-s-gangadharayya","provider":"Beetle Book Shop","version":"1.0","type":"link"}