{"product_id":"deshantara-novel","title":"ದೇಶಾಂತರ ( ಕಾದಂಬರಿ )","description":"\u003cp\u003eಚಿಕ್ಕಮಗಳೂರು ಜಿಲ್ಲೆ ಸ್ವಾತಂತ್ರ್ಯಪೂರ್ವದಿಂದಲೂ ದುಡಿಮೆ ಹುಡುಕಿಕೊಂಡು ಬರುವವರ ಗುಳೇ ಸಂಸ್ಕೃತಿಯ ನೆಲವೂ ಹೌದು. ಅಲ್ಲಿನ ಕಾಫಿ ಎಸ್ಟೇಟುಗಳಲ್ಲಿ ದುಡಿಯಲು ಬಯಲುಸೀಮೆಯ ಜನರೇ ಹೋಗಬೇಕಿತ್ತು. ಹಾಗೆ ಕಾಫಿ ಎಸ್ಟೇಟಿಗೆ ಹೋಗುತ್ತಿದ್ದವರ ಸಂಕಟಗಳು ನಾನಾ ತರ ಇರುತ್ತಿದ್ದವು. ಸಂಸಾರ ಬೇಡ ಅನ್ನಿಸಿದವರು, ಪ್ರೇಮ ಪ್ರಕರಣಗಳನ್ನು ತಮ್ಮ ಜಾಗದಲ್ಲೇ ಇದ್ದು ನಿಭಾಯಿಸಲಾರದವರು, ಕೂಲಿ ಸಿಗದೆ ಕಡೆಯ ಆಯ್ಕೆ ಇದೇ ಅಂದುಕೊಂಡವರು. ಹೀಗೆ ಅನೇಕ ಕಾರಣಗಳಿಂದ ಬರುವ ಶೂದ್ರ ಶ್ರಮಿಕರಿಗೆ ಈ ಎಸ್ಟೇಟುಗಳು ಆಸರೆಯನ್ನು ಒದಗಿಸುತ್ತಿದ್ದವು. ಅವರ ಅಗಾಧ ಬದುಕೇ ಈ 'ದೇಶಾಂತರ' ಕಾದಂಬರಿ. ಚಂದ್ರೇಗೌಡರು ಮಲೆನಾಡಿನ ಕಾಫಿ ಎಸ್ಟೇಟಿನ ಅಗಾಧ ಜೀವನದ ಒಂದು ತುಣುಕನ್ನು 4 ಮನೋಜ್ಞವಾಗಿ ಚಿತ್ರಿಸಿದ್ದಾರೆ. ಕಾದಂಬರಿ ಆರಂಭದಿಂದಲೂ ಕಡೆಯವರೆಗೂ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಇದು ಕಾದಂಬರಿಯ ಹೆಚ್ಚುಗಾರಿಕೆಯಾಗಿದೆ.\u003c\/p\u003e\n\u003cp\u003eನಟರಾಜ ಬೂದಾಳು\u003c\/p\u003e","brand":"BEETLE BOOK SHOP","offers":[{"title":"Default Title","offer_id":49952387989787,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/deshantara-novel-7440295.jpg?v=1767530467","url":"https:\/\/beetlebookshop.com\/kn\/products\/deshantara-novel","provider":"Beetle Book Shop","version":"1.0","type":"link"}