{"product_id":"dadabhai-naoroji","title":"Dadabhai Naoroji : ದಾದಾಭಾಯಿ ನವರೋಜಿ","description":"\u003cdiv class=\"col-lg-12\"\u003e\n\u003cp align=\"left\"\u003eನಾನು ಯಾವಾಗ ಲಂಡನ್ ಅನ್ನು ತಲುಪಿದೆನೋ ಆಗ ನಾನು ಕಂಡಿದ್ದು, ಭಾರತೀಯ ವಿದ್ಯಾರ್ಥಿಗಳಿಗೆ ನವರೋಜಿಯವರ ಹತ್ತಿರ ಬಹಳ ಸುಲಭವೆನ್ನುವಂಥ ಪ್ರವೇಶವು ಇಡೀ ದಿನದ ಎಲ್ಲಾ ಹೊತ್ತಿನಲ್ಲಿಯೂ ಇರುತ್ತಿತ್ತು. ನಿಜಕ್ಕೂ ಅವರು ಪ್ರತಿಯೊಬ್ಬರಿಗೂ ಒಬ್ಬ ತಂದೆಯ ಹಾಗೆ ಇರುತ್ತಿದ್ದರು. ತನ್ನ ಬಳಿ ಬಂದವರು ಯಾವ ಪ್ರಾಂತ್ಯದವರು, ಇಲ್ಲವೇ ಯಾವ ಧರ್ಮದವರು ಎನ್ನುವುದು ಅವರಿಗೆ ಮುಖ್ಯವಾಗುತ್ತಿರಲಿಲ್ಲ. ಅವರಿರುತ್ತಿದ್ದುದೇ ಅವರ ಕಷ್ಟ-ತೊಂದರೆಗಳಿಗೆ ಸಲಹೆ ನೀಡಲು ಮತ್ತು ಮಾರ್ಗದರ್ಶನ ಮಾಡುವ ಸಲುವಾಗಿ, ನಾನು ಯಾವಾಗಲೂ ಧೀರೋದಾತ್ತ ನಾಯಕರ ಆರಾಧಕ. ಹಾಗಾಗಿ, ದಾದಾಭಾಯಿ ನವರೋಜಿಯವರು ನನಗೆ ನಿಜವಾದ 'ದಾದಾ' ಆಗಿಬಿಟ್ಟರು. ಅವರು ನನಗೆ ನಿರಂತರ ಸಲಹೆಗಾರರೂ, ಪ್ರೇರಕರೂ ಆಗಿದ್ದು, ನಮ್ಮಿಬ್ಬರ ಸಂಬಂಧವು ದಕ್ಷಿಣ ಆಫ್ರಿಕಾದಲ್ಲಿ ಬಹಳ ಗಾಢವಾಯಿತು. ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರ ಸ್ಥಿತಿ-ಗತಿಗಳನ್ನು ತಿಳಿಸಿಕೊಡುವಂಥ ಪತ್ರಗಳನ್ನು ನಾನು ಬರೆಯದೆ ಒಂದು ವಾರವನ್ನೂ ಕಳೆಯುತ್ತಿರಲಿಲ್ಲ. ಇಷ್ಟೊಂದು ಉದಾತ್ತವಾದ ಹಾಗೂ ಅಷ್ಟೇ ಸರಳವಾದ ಬದುಕಿನ ಕಥೆಗೆ ನನ್ನಿಂದಾಗಲೀ, ಬೇರೆ ಯಾರಿಂದಲಾಗಲೀ ಪರಿಚಯಿಸುವ ಅಗತ್ಯವೇ ಇರುವುದಿಲ್ಲ. ನನಗೆ ದಾದಾಭಾಯಿಯವರ ಬದುಕು ಎಂಥ ಪ್ರೇರಣೆಯನ್ನು ನೀಡಿತ್ತೋ ಓದುಗನಿಗೂ ಅಂಥದ್ದೇ ಒದಗಿಬರಲಿ. ಮೋಹನದಾಸ ಕರಮಚಂದ ಗಾಂಧಿ\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51555913105691,"sku":null,"price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/dadabhai-naoroji-3888648.jpg?v=1767528187","url":"https:\/\/beetlebookshop.com\/kn\/products\/dadabhai-naoroji","provider":"Beetle Book Shop","version":"1.0","type":"link"}