{"product_id":"ck-jedana-atmacharitre","title":"ಸಿ ಕೆ ಜೆದನಾ ಆತ್ಮಚರಿತ್ರೆ","description":"\u003cp\u003e'ಸಿ.ಕೆ. ಜೇಡನ ಆತ್ಮಚರಿತ್ರೆ' ಇದು ವಿ.ಎಂ. ಅವರ ವಿಶಿಷ್ಟವಾದ ಪ್ರಯೋಗ. ಇಲ್ಲಿನ ಪಾತ್ರಗಳನ್ನು ಯಾವುದೋ ಒಂದೇ ಒಂದು ನಿರ್ದಿಷ್ಟ ಪ್ರದೇಶಕ್ಕೋ ಪಂಗಡಕ್ಕೋ ಸೀಮಿತಗೊಳಿಸಲು ಸಾಧ್ಯವಿಲ್ಲ. ಇಲ್ಲಿನ ಪಾತ್ರಗಳು ಬಹುತೇಕ ಬಹುಮುಖ ಪ್ರತಿಭೆಗಳು. ಇಲ್ಲಿ ಎಲ್ಲರಿಗೂ ಎಲ್ಲವೂ ಸಾಧ್ಯವಾಗುತ್ತದೆ. ಇಲ್ಲಿ ಕಾಲವು ವಾಹನಗಳಾಗಿ ಚಲಿಸುತ್ತಲೇ ಇರುತ್ತದೆ. ಅದರ ವೇಗದಲ್ಲಿ ವ್ಯತ್ಯಾಸವಿರಬಹುದು. ಆದರೆ ಚಲನೆಯಲ್ಲಿ ಯಾವುದೇ ಗೊಂದಲವಿಲ್ಲ, ಕಾಲದಂತೆ. ಉಗಿಬಂಡಿಯಾಗಿ, ಮೆಟಡೋರ್ ಆಗಿ, ಟ್ರಕ್ ಆಗಿ, ಫಾರ್ಗೋ ವ್ಯಾನ್ ಆಗಿ, ಹಾರ್ಲೆ ಡೇವಿಡ್ಸನ್ ಮೋಟರ್‌ಸೈಕಲ್ ಆಗಿ, ಸೈಕಲ್ ಆಗಿ, ಎತ್ತಿನಗಾಡಿಯಾಗಿ ಕಾಲವು ಹೊಸ ಹೊಸ ಆಯಾಮಗಳಲ್ಲಿ ಚಲಿಸುತ್ತಲೇ ಇರುತ್ತದೆ. ಇಷ್ಟಾಗಿಯೂ ಇಲ್ಲಿನ ಘಟನೆಗಳನ್ನು ಒಂದು ನಿರ್ದಿಷ್ಟ ಕಾಲಮಾನದಲ್ಲಿ ಬಂಧಿಸುವುದು ಕಷ್ಟ. ಸಮಾನತೆ ಎಂಬುದು ಕೇವಲ ಒಂದು ಪದವಾಗಿರದೇ, ಪಾತ್ರಗಳ ಉಡುಪಿನಷ್ಟೇ ಸಲೀಸಾಗಿದೆ.\u003c\/p\u003e\n\u003cp\u003eಬದುಕಿನಂತೆಯೇ ಕೃತಿಯೂ ಕೂಡ ಗೊಂದಲಗೊಳಿಸುತ್ತಲೇ ನಾನಾ ಅರ್ಥಗಳನ್ನು ಕರುಣಿಸುತ್ತದೆ. ಓದುವುದು ಸ್ವಲ್ಪ ಮಟ್ಟಿಗೆ ಕಷ್ಟವೆನಿಸಿದರೂ, ಹಿಡಿತಕ್ಕೆ ಸಿಕ್ಕ ಮೇಲೆ ಹೊಸ ಆಯಾಮಗಳನ್ನು ಸಾಧ್ಯವಾಗಿಸುತ್ತದೆ. ಈ ಕೃತಿಯನ್ನು ಮತ್ತೆ ಮತ್ತೆ ಓದಿದಾಗಲೇ ಲೇಖಕರ ಉದ್ದೇಶ ಸ್ವಲ್ಪ ಮಟ್ಟಿಗೆ ತಿಳಿಯಬಹುದು. ಇಂತಹ ಒಂದು ವಿಭಿನ್ನ ಪ್ರಕಾರದ ಕೃತಿಯನ್ನು ಸಾಧ್ಯವಾಗಿಸಿದ ಲೇಖಕರಿಗೆ ಮತ್ತು ಈ ಕೃತಿಯನ್ನು ಓದುಗರಿಗೆ ತಲುಪಿಸಿದ ಪ್ರಕಾಶಕರಿಗೆ ಧನ್ಯವಾದಗಳು.\u003c\/p\u003e\n\u003cp\u003e- ಪ್ರದಿ \u003cbr\u003e8-7-2019\u003c\/p\u003e","brand":"BEETLE BOOK SHOP","offers":[{"title":"Default Title","offer_id":50352441917723,"sku":"","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ck-jedana-atmacharitre-2847639.jpg?v=1767529026","url":"https:\/\/beetlebookshop.com\/kn\/products\/ck-jedana-atmacharitre","provider":"Beetle Book Shop","version":"1.0","type":"link"}