{"product_id":"chitragarana-beralu","title":"ಚಿತ್ರಕಾರನ ಬೆರಳು | Artist's finger","description":"\u003cp\u003eಚಿತ್ರಕಾರನ ಬೆರಳು | Chitragarana Beralu ಲೇಖಕರು: ಶಾಂತಿ ಕೆ ಅಪ್ಪಣ್ಣ, Shanti K Appanna\u003cbr\u003e\u003cbr\u003e\u003c\/p\u003e\n\u003cp\u003eಇತಿಹಾಸದ ಪುಟಗಳಲ್ಲಿರದ ಹೆಸರುಗಳು, ಬದುಕು ನಿಕೃಷ್ಟವಾಗಿ ನಡೆಸಿಕೊಳ್ಳುವ ಸಾಧಾರಣ ಜೀವಗಳು ಮತ್ತು ಲೋಕದ ರೀತಿಗೆ ಅರ್ಥವಾಗದ, ಲೋಕದ ರೀತಿಗೆ ಒಗ್ಗಲಾಗದ ಜೀವಗಳು ಇಲ್ಲಿನ ಕಥಾನಾಯಕ ನಾಯಕಿಯರು. ಇಂತಹ ಜೀವಗಳು ಹಾಗೇ ಇದ್ದು, ಇದ್ದದ್ದು ಗೊತ್ತೇ ಆಗದೇ ಬದುಕಿ ಹೋಗಿಬಿಡುವುದು ಒಂದು ಬಗೆಯಾದರೆ-ಯಾವುದೋ ಬಿಂದುವಿನಲ್ಲಿ, ತಿರುವಿನಲ್ಲಿ ಎಲ್ಲವನ್ನೂ ಮೀರಿ ಸಾಧಾರಣ ಜೀವಗಳು ಆಸಾಧಾಣವಾಗಿಬಿಡುವ ಸಾಧ್ಯತೆ ಮತ್ತೊಂದು. ಈ ಎರಡೂ ಬಗೆಯನ್ನು ಇಲ್ಲಿನ ಕತೆಗಳು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ.\u003c\/p\u003e\n\u003cp\u003eಕಟ್ಟಿ ಇಲ್ಲಿನ ಕತೆಗಳಿಗೆ ಮನುಷ್ಯರ ಮುಖವಾಡ ಕಳಚಿದೆನೆಂಬ ದಾರ್ಷ್ಟ್ಯವಿಲ್ಲ. ಬದಲಾಗಿ, ಹಿಂದೆ ಕಾಡಿನಲ್ಲಿ ವಾಸಿಸುತ್ತಾ ಅನಾಗರಿಕರಾಗಿದ್ದ ಮನುಷ್ಯರು ನಾವು ಊರು ನಾಗರಿಕರಾದ ಮೇಲೂ ಒಳಗಿನಿಂದ ನಿಜವಾಗಿಯೂ ಮನುಷ್ಯರಾಗಿದ್ದೇವೆಯೇ? ಒಳ್ಳೆಯ ಬಟ್ಟೆ ಹಾಕಿಕೊಂಡು, ಸೆಂಟು ಹೊಡೆದುಕೊಂಡು ಹೊರಗೆ ಮನುಷ್ಯರು ಒಳಗಿನಿಂದಲೂ ನಾತಮುಕ್ತರಾಗಿದ್ದೇವಾ? ಎಂದು ಘಮಗುಟ್ಟುವ ನಮಗೆ ನಾವೇ ಯೋಚಿಸುವಂತೆ ಮಾಡುತ್ತವೆ.\u003c\/p\u003e\n\u003cp\u003eಚಿತ್ರಕಾರನ ಬೆರಳಿನಂತೆಯೇ ಶಾಂತಿ ಕೆ ಅಪ್ಪಣ್ಣ ಕತೆಗಳ ನಿರೂಪಣೆ ಒಂದು ಜಾದೂ ಬೆರಳಿನಿಂದ ಮೂಡಿಬಂದಂತೆ ಇವೆ ಮತ್ತು ಅವು ಸಾಮಾಜಿಕ ಬದುಕಿನಲ್ಲಿ ಹಾಕಿಕೊಂಡ ಚೌಕಟ್ಟು ಮೀರಿ, ನಾಗರಿಕ ಜಗತ್ತಿನ ನಿಯಮಗಳ ದಾಟಿ, ಸಮಾಜವೆಂಬ ದೇಹದ ನಿರ್ಬಂಧಿತ ಭಾಗಗಳನ್ನು ಮುಟ್ಟುತ್ತವೆ. ಕತೆಗಾರ್ತಿ ಆ ಭಾಗದ ಗಾಯಗಳನ್ನು ನೇವರಿಸುತ್ತಲೇ, ಓದುಗರನ್ನು ಬೆಚ್ಚಿಸುತ್ತಾರೆ.\u003c\/p\u003e\n\u003cp\u003eಕುಸುಮಾ ಆಯರಹಳ್ಳಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":50500174184731,"sku":null,"price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/chitrakarana-beralu-8676977.jpg?v=1767528605","url":"https:\/\/beetlebookshop.com\/kn\/products\/chitragarana-beralu","provider":"Beetle Book Shop","version":"1.0","type":"link"}