ಹೆಚ್ಚುವರಿ ಮಾಹಿತಿ
ವಿವರಣೆ
ಚಿತ್ರಕಾರನ ಬೆರಳು | Chitragarana Beralu ಲೇಖಕರು: ಶಾಂತಿ ಕೆ ಅಪ್ಪಣ್ಣ, Shanti K Appanna
ಇತಿಹಾಸದ ಪುಟಗಳಲ್ಲಿರದ ಹೆಸರುಗಳು, ಬದುಕು ನಿಕೃಷ್ಟವಾಗಿ ನಡೆಸಿಕೊಳ್ಳುವ ಸಾಧಾರಣ ಜೀವಗಳು ಮತ್ತು ಲೋಕದ ರೀತಿಗೆ ಅರ್ಥವಾಗದ, ಲೋಕದ ರೀತಿಗೆ ಒಗ್ಗಲಾಗದ ಜೀವಗಳು ಇಲ್ಲಿನ ಕಥಾನಾಯಕ ನಾಯಕಿಯರು. ಇಂತಹ ಜೀವಗಳು ಹಾಗೇ ಇದ್ದು, ಇದ್ದದ್ದು ಗೊತ್ತೇ ಆಗದೇ ಬದುಕಿ ಹೋಗಿಬಿಡುವುದು ಒಂದು ಬಗೆಯಾದರೆ-ಯಾವುದೋ ಬಿಂದುವಿನಲ್ಲಿ, ತಿರುವಿನಲ್ಲಿ ಎಲ್ಲವನ್ನೂ ಮೀರಿ ಸಾಧಾರಣ ಜೀವಗಳು ಆಸಾಧಾಣವಾಗಿಬಿಡುವ ಸಾಧ್ಯತೆ ಮತ್ತೊಂದು. ಈ ಎರಡೂ ಬಗೆಯನ್ನು ಇಲ್ಲಿನ ಕತೆಗಳು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ.
ಕಟ್ಟಿ ಇಲ್ಲಿನ ಕತೆಗಳಿಗೆ ಮನುಷ್ಯರ ಮುಖವಾಡ ಕಳಚಿದೆನೆಂಬ ದಾರ್ಷ್ಟ್ಯವಿಲ್ಲ. ಬದಲಾಗಿ, ಹಿಂದೆ ಕಾಡಿನಲ್ಲಿ ವಾಸಿಸುತ್ತಾ ಅನಾಗರಿಕರಾಗಿದ್ದ ಮನುಷ್ಯರು ನಾವು ಊರು ನಾಗರಿಕರಾದ ಮೇಲೂ ಒಳಗಿನಿಂದ ನಿಜವಾಗಿಯೂ ಮನುಷ್ಯರಾಗಿದ್ದೇವೆಯೇ? ಒಳ್ಳೆಯ ಬಟ್ಟೆ ಹಾಕಿಕೊಂಡು, ಸೆಂಟು ಹೊಡೆದುಕೊಂಡು ಹೊರಗೆ ಮನುಷ್ಯರು ಒಳಗಿನಿಂದಲೂ ನಾತಮುಕ್ತರಾಗಿದ್ದೇವಾ? ಎಂದು ಘಮಗುಟ್ಟುವ ನಮಗೆ ನಾವೇ ಯೋಚಿಸುವಂತೆ ಮಾಡುತ್ತವೆ.
ಚಿತ್ರಕಾರನ ಬೆರಳಿನಂತೆಯೇ ಶಾಂತಿ ಕೆ ಅಪ್ಪಣ್ಣ ಕತೆಗಳ ನಿರೂಪಣೆ ಒಂದು ಜಾದೂ ಬೆರಳಿನಿಂದ ಮೂಡಿಬಂದಂತೆ ಇವೆ ಮತ್ತು ಅವು ಸಾಮಾಜಿಕ ಬದುಕಿನಲ್ಲಿ ಹಾಕಿಕೊಂಡ ಚೌಕಟ್ಟು ಮೀರಿ, ನಾಗರಿಕ ಜಗತ್ತಿನ ನಿಯಮಗಳ ದಾಟಿ, ಸಮಾಜವೆಂಬ ದೇಹದ ನಿರ್ಬಂಧಿತ ಭಾಗಗಳನ್ನು ಮುಟ್ಟುತ್ತವೆ. ಕತೆಗಾರ್ತಿ ಆ ಭಾಗದ ಗಾಯಗಳನ್ನು ನೇವರಿಸುತ್ತಲೇ, ಓದುಗರನ್ನು ಬೆಚ್ಚಿಸುತ್ತಾರೆ.
ಕುಸುಮಾ ಆಯರಹಳ್ಳಿ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.