{"product_id":"chalukya-parameshwara-novel","title":"ಚಾಲುಕ್ಯ ಪರಮೇಶ್ವರ ( ಕಾದಂಬರಿ )","description":"\u003cp\u003eಒಬ್ಬ ಸಾಮಾನ್ಯ ರಾಜವಂಶದ ವ್ಯಕ್ತಿ ಶೂನ್ಯದಿಂದ ಎದ್ದುಬಂದು, ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಭಾರತದ ಮಣಿ ಮುಕುಟದ ವೀರ, ಕ್ಷತ್ರಿಯನ ಸಾಹಸಮಯ ಕಥೆ ಈ ಮಹಾನ್ ಕೃತಿಯಾಗಿದೆ. ಚಿಕಪ್ಪ ಮಂಗಳೇಶನ ವಿರುದ್ಧ ಹೋರಾಡಿ, ನ್ಯಾಯಯುತವಾಗಿ ತನಗೆ ಬರಬೇಕಾದ ಸಿಂಹಾಸನವನ್ನು ಪಡೆದುಕೊಂಡ ಆತನ ಅಸಾಮಾನ್ಯ ಸಾಹಸವನ್ನು ಇಲ್ಲಿ ನಿರೂಪಿಸಲಾಗಿದೆ. ಈ ಮಹಾವೀರನ ಆಡಳಿತದ ಅವಧಿಯಲ್ಲಿ, ಅಖಂಡ ಕರ್ನಾಟಕವನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಯುದ್ಧ ಪರಂಪರೆ ಸಾಗುತ್ತದೆ. ದಕ್ಷಿಣ ಭಾರತದ ಪಲ್ಲವರಂತಹ ಪ್ರಚಂಡ ರಾಜರನ್ನು ಮತ್ತು ಉತ್ತರ ಭಾರತದ ಏಕೈಕ ಸಾಮ್ರಾಟ 'ಉತ್ತರಾ ಪಥೇಶ್ವರ' ಎಂಬ ಖ್ಯಾತಿಯ ಹರ್ಷವರ್ಧನನನ್ನು ಪರಾಭವಗೊಳಿಸಿದ ಆ ಸನ್ನಿವೇಶ ದ್ವಾಪರ ಯುಗದ ಕುರುಕ್ಷೇತ್ರ ಯುದ್ಧದಂತೆ ಇತ್ತು. 'ದಕ್ಷಿಣಾ ಪಥೇಶ್ವರ' ಮತ್ತು 'ಚಾಲುಕ್ಯ ಪರಮೇಶ್ವರ' ಎಂದು ಬಿರುದಾಂಕಿತನಾದ ಈ ಅಪ್ರತಿಮ ಮಹಾವೀರ ಮತ್ತು ನಿಜವಾದ ಕನ್ನಡಿಗನ ಅಂತ್ಯ ಹೇಗಾಯಿತು? ವೀರಕ್ಷತ್ರಿಯನ ಅಂತ್ಯ ವೀರತ್ವದಲ್ಲಿ ಸಂಪನ್ನಗೊಂಡಿತೇ?\u003c\/p\u003e\n\u003cp\u003e- ಬೆನ್ನುಡಿಯಿಂದ\u003c\/p\u003e","brand":"BEETLE BOOK SHOP","offers":[{"title":"Default Title","offer_id":44649132785947,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/chalukya-parameshwara-novel-6937135.png?v=1767536047","url":"https:\/\/beetlebookshop.com\/kn\/products\/chalukya-parameshwara-novel","provider":"Beetle Book Shop","version":"1.0","type":"link"}