ಹೆಚ್ಚುವರಿ ಮಾಹಿತಿ
ವಿವರಣೆ
ಡಾ. ಸಿ.ಜೆ. ಲಕ್ಷ್ಮೀಪತಿ ಅವರು ಜಾತಿ ಸಂಬಂಧಿತ ವಿಷಯಗಳನ್ನು ತೀಕ್ಷ್ಣವಾಗಿ ಮತ್ತು ರಾಜಿಯಿಲ್ಲದೆ ಯೋಜಿಸುವ ಈ ಕಾಲಮಾನದ ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಚಿಂತಕರಾಗಿದ್ದಾರೆ. ಜಾತಿ ರೂಪಿಸುವ ಸಾಮಾಜಿಕ-ಆರ್ಥಿಕ ವಾಸ್ತವಗಳ ಬಗ್ಗೆ ಅವರಿಗೆ ಆಳವಾದ ಸಂವೇದನೆ ಇದೆ. ಅಸಮಾನತೆಯ ದರ್ಶನವಷ್ಟೇ ಅಲ್ಲ, ಜಾತಿಯನ್ನು ಪುನರುತ್ಪಾದಿಸುವ ಭಾಷೆಯ ಮೇಲೆಯೂ ಅವರು ವಿಶೇಷ ಗಮನ ಹರಿಸುತ್ತಾರೆ. ತನ್ನ ಸ್ವಭಾವದಲ್ಲೇ ಮೇಲರಿಮೆ, ಪುರುಷ ಪ್ರಧಾನತೆ, ಮತ್ತು ಮೂಢನಂಬಿಕೆಗಳ ಲಕ್ಷಣಗಳನ್ನು ಹೊಂದಿರುವ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಡಾ. ಸಿ.ಜೆ. ಲಕ್ಷ್ಮೀಪತಿ, ತಮ್ಮದೇ ಸಮುದಾಯವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಲು ಹಿಂಜರಿಯುವುದಿಲ್ಲ. ಈ ರೀತಿಯ ವಿಮರ್ಶಾತ್ಮಕ ಕೆಲಸದಲ್ಲಿ ಯಾವುದೇ ರಾಜೀ ಸಂಧಾನವಿಲ್ಲದೆ ತೊಡಗಿಸಿಕೊಂಡಿರುವ ಡಾ. ಲಕ್ಷ್ಮೀಪತಿಯವರಿಗೆ ಸ್ನೇಹಿತರಿಗಿಂತ ಹೆಚ್ಚು ಶತ್ರುಗಳನ್ನೇ ಸೃಷ್ಟಿಸಿದೆ. ಆದರೆ ಅವರ ಪ್ರಭಾವವು ಮೌನವಾಗಿ ಆದರೆ ಅರ್ಥಪೂರ್ಣವಾಗಿ ಅವರ ಸುತ್ತಲವರ ಮೇಲೆ ಬೀರುತ್ತಿದೆ. ‘ಕ್ಯಾಸ್ಟ್ ಪಾಲಿಟಿಕ್ಸ್’ ಅವರ ಕೃತಿಶ್ರೇಣಿಯ ಮುಂದುವರಿದ ಭಾಗ. ಸಾಮಾನ್ಯ ಕಣ್ಣುಗಳಿಗೆ ಗೋಚರಿಸದ ಸಮಾಜದ ಹುಣ್ಣುಗಳು ಲಕ್ಷ್ಮೀಪತಿಯವರಂಥ ಸೂಕ್ಷ್ಮಗ್ರಾಹಿ ಸಮಾಜಶಾಸ್ತ್ರಜ್ಞರ ಕಣ್ಣಿಗೆ ಮಾತ್ರ ಬೀಳಲು ಸಾಧ್ಯ. ಸಾಮಾಜಿಕ ವೈಕಲ್ಯದ ಡಯಾಗ್ನೋಸಿಸ್ನಲ್ಲಿ ತೊಡಗಿಕೊಂಡು ಅದನ್ನು ಬರಹ ರೂಪದಲ್ಲಿ ನಮ್ಮ ಮುಂದಿಡುತ್ತಿರುವುದು ನಮ್ಮ ಪುಣ್ಯಗಳೇ ನಾವು ಎಂದು ಕಂಡುಕೊಳ್ಳಬೇಕಿದೆ.
-ಡಾ. ರೀಟಾ ರೀನಿ ಸಂಪಾದಕರು, ಮಾತುಕತೆ ಮಾಸಿಕ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.