{"product_id":"buddha-prajneya-nadige","title":"ಬುದ್ಧ ಪ್ರಜ್ಞೆಯ ನಡೆಗೆ","description":"ಇದು ಬುದ್ಧಗುರುವಿನ ತಿಳಿವಳಿಕೆಯ ವಿಸ್ತರಣೆಯಂತೆ ಕಂಡರೂ ಅಷ್ಟೇ ಅಲ್ಲ. ಚೈನಾ, ಜಪಾನ್ ಮುಂತಾದ ದೇಶಗಳಲ್ಲಿ ಬೆಳೆದು ಬಂದಿರುವ 'ಕಲಿಸುವ ಬಗೆ'ಗಳ ಬಳಕೆ ಇಲ್ಲಿದೆ. ಸ್ವಾನುಭವವೇ ತಿಚ್ ನಾತ್ ಹಾನ್ ಅವರ ಮೂಲ ನೆಲೆ. ನಾವು ಕಟ್ಟಿಕೊಂಡಿರುವ ಎಲ್ಲ ಗಡಿಗಳನ್ನು ಮೀರುವುದರ ಅಗತ್ಯವನ್ನು ಅವರು ಒತ್ತಿ ಹೇಳುತ್ತಾರೆ. ವಿಯಟ್ನಾಂ, ಫ್ರಾನ್ಸ್, ಅಮೆರಿಕಾ ಮುಂತಾದ ತಂಗುದಾಣಗಳಲ್ಲಿ ಪಡೆದ ಅನುಭವಗಳು ಬೇರೆ ಬೇರೆ ಭಾಗಗಳಲ್ಲಿ ಹರಿಗಡಿಯದಂತೆ ಹೆಣೆದುಕೊಂಡಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eತನ್ನ ಒಳಗನ್ನು ಆಳವಾಗಿ ಕಲಕಿದ ಕೃತಿಗಳ ಅನುವಾದದಲ್ಲಿ ಎಡೆಬಿಡದೆ ತೊಡಗಿಕೊಳ್ಳುವುದರಿಂದಲೇ ತನ್ನತನದ ಗಡಿಗಳನ್ನು ಬೆಳೆಸಿಕೊಳ್ಳುತ್ತಿರುವ, ನನ್ನ ಮಿತ್ರರಾದ ಸುಭಾಷ್ ರಾಜಮಾನೆಯವರು, ಈ ಕೆಲಸವನ್ನೂ ಮನಸ್ಸಿಟ್ಟು, ಹೃದಯವಿಟ್ಟು ಮಾಡಿದ್ದಾರೆ. ಮೂಲದಂತೆಯೇ ಅನುವಾದವೂ ನೇರವಾಗಿದೆ. ಸರಳವಾಗಿದೆ. ಇವರೇ ಕನ್ನಡಕ್ಕೆ ತಂದಿರುವ ವಿಕ್ಟರ್ ಫ್ರಾಂಕ್ಸ್‌ನ 'ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್' ಹಾಗೆಯೇ ಇದು ಕೂಡ, ನಾವು ಕನ್ನಡದವರು ನಮ್ಮೊಳಗೆ ತೆಗೆದುಕೊಳ್ಳಬೇಕಾದ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ. ಎಚ್.ಎಸ್. ರಾಘವೇಂದ್ರ ರಾವ್","brand":"BEETLE BOOK SHOP","offers":[{"title":"Default Title","offer_id":48101483315483,"sku":"","price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/buddha-prajneya-nadige-8386345.jpg?v=1767533887","url":"https:\/\/beetlebookshop.com\/kn\/products\/buddha-prajneya-nadige","provider":"Beetle Book Shop","version":"1.0","type":"link"}