{"product_id":"bheemayaana-thoughts-of-dr-b-r-ambedkar","title":"ಭೀಮಯಾನ | Bheemayana","description":"\u003cp\u003eಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ನಿಗಿನಿಗಿ ಎನ್ನುವಂತಹ ಚಿಂತನೆಗಳನ್ನು ಹೊತ್ತ ಕೃತಿ ’ಭೀಮಯಾನ: ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು’. 112 ಪುಟಗಳ  ಪುಸ್ತಕವನ್ನು   ಎಚ್‌.ಎಸ್‌. ಅನುಪಮಾ ಮತ್ತು  ನಾನು ಸೇರಿ ಕನ್ನಡಕ್ಕೆ ತಂದಿದ್ದೇವೆ.. ಭಗವಾನ್ ದಾಸ್ ಸಂಪಾದಿಸಿರುವ ’ದಸ್ ಸ್ಪೋಕ್ ಅಂಬೇಡ್ಕರ್’ ಕೃತಿಯಿಂದಲೂ, ನಾನಕ್ ಚಂದ್ ರತ್ತೂ ಅವರ ’ದ ಲಾಸ್ಟ್ ಫ್ಯೂ ಇಯರ್ಸ್ ಆಫ್ ಅಂಬೇಡ್ಕರ್’ ಕೃತಿಯಿಂದಲೂ ಕೆಲವು ಅಪರೂಪದ ಚಿಂತನೆಗಳನ್ನು ಒಟ್ಟುಗೂಡಿಸಲಾಗಿದೆ. ಬಿಬಿಸಿ ಸಂದರ್ಶನದ ಕನ್ನಡರೂಪವೂ ಇಲ್ಲಿದೆ. ಅಂಬೇಡ್ಕರ್‌ ಅವರ ಪ್ರಖರ ಚಿಂತನೆಗಳಿಗೆ ಸಾಕ್ಷಿಯಾಗುವ ಮಾತೊಂದು ಕೃತಿಯಲ್ಲಿದೆ: '...ನೀವು ಹೇಳಿದಂತೆ ನಾನು ರಾಷ್ಟ್ರಕ್ಕೆ ಸಹಾಯವಾಗುವ, ದೇಶಭಕ್ತಿಯೆನಿಸುವ ಯಾವುದಾದರೂ ಸೇವೆಯನ್ನು ಸಲ್ಲಿಸಿದ್ದರೆ ಅದು ನನ್ನ ಅಕಳಂಕಿತ ಪ್ರಜ್ಞೆಯಿಂದಲೇ ಹೊರತು ದೇಶಭಕ್ತಿಯಿಂದಲ್ಲ. ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ನನ್ನ ಜನರಿಗೆ ಮಾನವ ಹಕ್ಕುಗಳನ್ನು ಕೊಡಿಸಲು ಹೋರಾಡುವಾಗ ಈ ದೇಶಕ್ಕೆ ಅಪಕಾರವಾಗಿದ್ದರೆ ಅದು ಪಾಪವಲ್ಲ. ಅದರಿಂದ ಈ ದೇಶಕ್ಕೇನಾದರೂ ಹಾನಿಯಾಗಿದ್ದರೆ ಅದು ಪ್ರಜ್ಞಾಪೂರ್ವಕವಲ್ಲ. ನನ್ನ ಜನರ ನಾಗರಿಕ ಹಕ್ಕುಗಳಿಗೆ ಹೋರಾಡುವಾಗ ಈ ದೇಶಕ್ಕೆ ಹಾನಿ ಮಾಡದೇ ಹೋರಾಡಲು ನನ್ನ ಪ್ರಜ್ಞೆ ಪ್ರೇರೇಪಿಸಿದೆ.'\u003cbr\u003e\u003cbr\u003e- Basu \u003c\/p\u003e","brand":"Social Justice \u0026 Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ","offers":[{"title":"Default Title","offer_id":49700675649819,"sku":"","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bheemayaana-thoughts-of-dr-br-ambedkar-7215226.jpg?v=1767532026","url":"https:\/\/beetlebookshop.com\/kn\/products\/bheemayaana-thoughts-of-dr-b-r-ambedkar","provider":"Beetle Book Shop","version":"1.0","type":"link"}