{"product_id":"bharathakalpa","title":"ಭಾರತಕಲ್ಪ","description":"\u003cspan data-mce-fragment=\"1\"\u003eಕಾದಂಬರಿಯಲ್ಲಿ ಭರತನದು ಅನನ್ಯ ವ್ಯಕ್ತಿತ್ವ, ಆತ ಏಕಕಾಲಕ್ಕೆ ಸ್ತ್ರೀ ಮತ್ತು ಪುರುಷ ಇಬ್ಬರ ಲೋಕದೊಳಗೂ ಸಲೀಸಾಗಿ ಸಂವಹನ ಮಾಡಬಲ್ಲ ಕುಶಲಿ (ಶಿವರಾಮ ಕಾರಂತರ ಸರಸಮ್ಮನ ಸಮಾಧಿ ಕಾದಂಬರಿಯ ಚಂದ್ರಪ್ಪನಂತಹ ವ್ಯಕ್ತಿತ್ವ). ಈ ಎರಡೂ ಲೋಕಗಳು ಪರಸ್ಪರ ಹತ್ತಿರದಲ್ಲೇ ಬದುಕಿದ್ದರೂ ಒಂದು ಇನ್ನೊಂದಕ್ಕೆ ಅನ್ಯವಾಗಿ ಉಳಿದಿರುವುದು ಜೀವನದ ಚೋದ್ಯ. ಹೀಗೆ ಸಮಾನಾಂತರವಾಗಿ ಆದರೆ ಸ್ವಾಯತ್ತವಾಗಿ ಉಳಿದ ಈ ಲೋಕಗಳೊಳಗೆ ಸಲೀಸಾಗಿ ಪ್ರವೇಶಿಸಲು ಯಾರಿಗೇ ಆಗಲಿ ವಿಶಿಷ್ಟವಾದ ಕೌಶಲ್ಯವು ಅಗತ್ಯ. ಅದು ಭರತನಿಗೆ ದಕ್ಕಿದ್ದು ಕೂಡ ತುಂಬಾ ಸಾಂಕೇತಿಕವಾಗಿ, ಆದರೆ ಸಹಜವಾಗಿ! ಅಜ್ಜಿಯ ಮನೆಯ ಹೆಣ್ಣಾಳಿಕೆಯನ್ನು ಎಳವೆಯಿಂದಲೇ ಕಂಡ ಭರತನು ಬೆಳೆದಂತೆ ತಂದೆ ಮನೆಯ ಗಂಡಾಳಿಕೆಯನ್ನೂ ಎದುರುಗೊಂಡ ಎರಡರ ಅನುಕೂಲ-ಅನನುಕೂಲ, ಸಾಧನೆ-ಸಾಧ್ಯತೆ, ಸಾರ್ಥಕತೆ-ನಿರರ್ಥಕತೆಗಳು ಭರತನಿಗೆ ಅಂಗೈನೆಲ್ಲಿಯಂತೆ ದೃಗ್ಗೋಚರ. ಆದುದರಿಂದಲೇ ಆತನಿಗೆ ಮಾಂಡವಿ, ಶ್ರುತಕೀರ್ತಿ, ಊರ್ಮಿಳೆ, ಕೌಸಲ್ಯ, ಸುಮಿತ್ರೆ ಮತ್ತು ತಾಯಿ ಕೈಕೆಯೊಂದಿಗೆ ಸಂವಹನ ಸಾಧ್ಯವಾದಂತೆ ವಸಿಷ್ಠ, ಜಾಬಾಲಿ ಮುಂತಾದ ಮುನಿಗಳು, ಮಂತ್ರಿಗಳು, ಸೈನಿಕರು, ಪ್ರಜೆಗಳು ಹೀಗೆ ಎಲ್ಲರೊಡನೆಯೂ ಸಂವಹನ ಸಾಧ್ಯವಾಗಿದೆ; ಅವರೆಲ್ಲರ ಕನಸು-ಚಿಂತನೆ-ಲೋಕಗ್ರಹಿಕೆಗಳ ವಿನ್ಯಾಸ ಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ. ಕೈಕೆಗೆ ಇದು ಸಾಧ್ಯವಾಗದೇ ಇದ್ದುದೆ ಅವಳೆಲ್ಲ ದುರಂತಗಳ ಮೂಲ ಎಂಬ ನಿಲುವು, ಗಂಡಾಳಿಕೆಯ ಪ್ರತಿಷ್ಠೆಯ ನಿರರ್ಥಕತೆಯ ತಥ್ಯವು ಕಾದಂಬರಿಯಲ್ಲಿ ಸೂಚಿತವಾಗಿದೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":47567630205211,"sku":"","price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bharathakalpa-4924612.jpg?v=1767534968","url":"https:\/\/beetlebookshop.com\/kn\/products\/bharathakalpa","provider":"Beetle Book Shop","version":"1.0","type":"link"}