{"product_id":"bharateeya-tatvajnana-vaicharika-mattu-samajika-sangarsha","title":"ಭಾರತೀಯ ತತ್ವಜ್ಞಾನ - ವೈಚಾರಿಕ ಮತ್ತು ಸಾಮಾಜಿಕ ಸಂಘರ್ಷ","description":"\u003cdiv class=\"col-lg-12\"\u003e\n\u003cp align=\"left\"\u003eಆರ್ಥಿಕ ಮತ್ತು ರಾಜಕೀಯ ಘರ್ಷಣೆಗಳು ಸಮಾಜದೊಳಗೆ ಒಂದು ವಿಷಯ. ತಾತ್ವಿಕ ಕ್ಷೇತ್ರದಲ್ಲಿನ ಘರ್ಷಣೆಗಳು ಮತ್ತೊಂದು. ಇವುಗಳ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುವುದು ಸುಲಭವಲ್ಲ. ಏಕೆಂದರೆ, ಈ ಸಂಬಂಧ ಬಹಳ ಸಂಕೀರ್ಣ ಮತ್ತು ಜಟಿಲವಾಗಿದೆ. ಇದು ಸರಳವಾಗಿಲ್ಲ. ಸ್ಪಷ್ಟವಾಗಿ ಗೋಚರಿಸುವುದಿಲ್ಲ. ವಿವಿಧ ವರ್ಗಗಳ ಹಿತಾಸಕ್ತಿಗಳನ್ನು ಮತ್ತು ತಾತ್ವಿಕ ಕ್ಷೇತ್ರದಲ್ಲಿ ಅವುಗಳನ್ನು ಪ್ರತಿನಿಧಿಸುವ ಸಿದ್ಧಾಂತಗಳನ್ನು ಜೋಡಿಸುವ ಸರಣಿಯಲ್ಲಿ ಹಲವಾರು ಸೂಕ್ಷ್ಮಾತಿಸೂಕ್ಷ್ಮ ಕೊಂಡಿಗಳಿವೆ. ಅವುಗಳನ್ನು ಬಿಡಿಸಿ ಬಿಡಿಸಿ ನೋಡಬೇಕಾಗುತ್ತದೆ... ವಿಷಯವನ್ನು ಗ್ರಹಿಸಲು ಸುಲಭವಾಗಬೇಕೆಂದು ಈ ಪುಸ್ತಕದಲ್ಲಿ ಋಗ್ವೇದದ ಆರಂಭದ ಕಾಲ, ಮುಖ್ಯ ಉಪನಿಷತ್ತುಗಳ ಕಾಲ ಮತ್ತು ಗುಪ್ತ ಸಾಮ್ರಾಜ್ಯದ ಕಾಲ ಎಂದು ವಿಂಗಡಿಸಲಾಗಿದೆ. ಆಯಾ ಕಾಲದ ಸಮಾಜ ವ್ಯವಸ್ಥೆಯ ವಿವರಣೆಯನ್ನೂ ಅಗತ್ಯವಿರುವಷ್ಟು ಕೊಡಲಾಗಿದೆ. ಇದರೊಂದಿಗೆ ಭೌತಿಕವಾದಿ ತತ್ವ ಮತ್ತು ಹಿಂದೂ ಧರ್ಮ ಶಾಸ್ತ್ರೋಕ್ತ ತತ್ವ ಇವೆರಡನ್ನೂ ಪರಾಮರ್ಶಿಸಲಾಗಿದೆ. ಇವೆರಡೂ ಬೇರೆ ಬೇರೆ; ಆದರೆ ಅನ್ಯೋನ್ಯ ಸಂಬಂಧಪಟ್ಟ ತಾತ್ವಿಕ ವಿಚಾರ ಸರಣಿಗಳು ಎಂದು ನಿರೂಪಿಸಲಾಗಿದೆ. ಬಹುಮುಖ ಪ್ರತಿಭೆಯ ಎಸ್. ಜಿ. ಸರ್ದೇಸಾಯಿ (1907-1996) ವಿದ್ಯಾರ್ಥಿ ದೆಸೆಯಲ್ಲೇ ಕಾಲೇಜು ಪತ್ರಿಕೆಗಳ ಸಂಪಾದಕ, 1929-30ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಮರಾಠಿ ಪತ್ರಿಕೆ 'ಕ್ರಾಂತಿ'ಯ ಸಂಪಾದಕ. 1931-34 ಮುಂಬಯಿ ಗಿರಣಿ ಕಾಮಗಾರಿ ಯೂನಿಯನ್ನಿನ ಕಾರ್ಯದರ್ಶಿ. 1934ರಲ್ಲಿ ಗಿರಣಿ ಕಾರ್ಮಿಕರ ಮುಷ್ಕರದ ಸಂಬಂಧ ಎರಡೂವರೆ ವರ್ಷ ಕಠಿಣ ಸಜೆ. 'ವರ್ಲ್ಡ್ ಮಾರ್ಕ್ಸಿಸ್ಟ್ ರಿವ್ಯೂ' ಮತ್ತು ಪಕ್ಷದ ಮರಾಠಿ ಮುಖಪತ್ರ 'ಯುಗಾಂತರ' ಇವುಗಳ ಸಂಪಾದಕರೂ ಆಗಿದ್ದ ಸರ್ದೇಸಾಯಿಯವರು ಹಲವಾರು ವೈಚಾರಿಕ ಕೃತಿಗಳನ್ನು ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ರಚಿಸಿದ್ದಾರೆ. ಖ್ಯಾತ ಲೇಖಕ, ವಿದ್ವಾಂಸ ಗೌರೀಶ ಕಾಯ್ಕಿಣಿ ಅವರು ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ.\u003c\/p\u003e\n\u003c\/div\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49017469206811,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bharateeya-tatvajnana-vaicharika-mattu-samajika-sangarsha-9826307.jpg?v=1767534666","url":"https:\/\/beetlebookshop.com\/kn\/products\/bharateeya-tatvajnana-vaicharika-mattu-samajika-sangarsha","provider":"Beetle Book Shop","version":"1.0","type":"link"}