{"product_id":"bharatakke-tippu-koduge-enu","title":"ಭಾರತಕ್ಕೆ ಟಿಪ್ಪು ಕೊಡುಗೆ ಏನು","description":"\u003cp\u003eನನ್ನ ಮಗ, ಈ ಸಾಮ್ರಾಜ್ಯವನ್ನು ನಿನಗೆ ಒಪ್ಪಿಸುತ್ತಿದ್ದೇನೆ. ಇದನ್ನು ನಾನು ನನ್ನ ಪೂರ್ವಜರಿಂದ ಪಡೆದದ್ದಲ್ಲ. ಏಕೆಂದರೆ, ಯಾದವೀ ಕಲಹದಿಂದ ಪಡೆದುಕೊಂಡ ಸಾಮ್ರಾಜ್ಯದ ಅಡಿಪಾಯ ಯಾವಾಗಲೂ ಬಿರುಕು ಬಿಟ್ಟಿರುತ್ತದೆ. ಆದರೆ, ನಮ್ಮ ಕುಟುಂಬದಲ್ಲಾಗಲೀ, ಸೈನ್ಯದಲ್ಲಾಗಲೀ ನಿನ್ನ ಪಟ್ಟದ ವಿರುದ್ಧ ಪೈಪೋಟಿ ನೀಡುವವರು ಯಾರೂ ಇಲ್ಲ. ಈ ಸಾಮ್ರಾಜ್ಯದ ಆಂತರಿಕ ವ್ಯವಹಾರಗಳ ಬಗ್ಗೆ ನೀನು ಹೆಚ್ಚಿನ ಆತಂಕ ಪಡಬೇಕಿಲ್ಲ. ಆದರೆ, ನೀನು ದೂರದೃಷ್ಟಿ ಹೊಂದಿರಬೇಕು. ಔರಂಗಜೇಬನ ಪತನದ ನಂತರ ಏಷ್ಯಾದ ಸಾಮ್ರಾಜ್ಯಗಳಲ್ಲಿ ಭಾರತದ ಸ್ಥಾನ ಕೆಳಗೆ ಕುಸಿದಿದೆ. ಈ ನಮ್ಮ ಪ್ರಿಯ ಭೂಮಿ ಹಲವು ಪ್ರಾಂತ್ಯಗಳಾಗಿ ವಿಭಜನೆ ಹೊಂದಿ ಅವು ಪರಸ್ಪರ ಕಚ್ಚಾಡುತ್ತಿವೆ. ಹಲವು ಗುಂಪುಗಳಾಗಿ ಒಡೆದುಹೋಗಿರುವ ಜನ ದೇಶಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳು ಶಾಂತಿ ಸಂಧಾನದ ಜಪ ಮಾಡುತ್ತಾ ಬ್ರಿಟೀಷರಿಗೆ ಬಲಿಯಾಗಿ ಈ ದೇಶವನ್ನು ಕಾಪಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಮುಸ್ಲಿಮರು - ಹಿಂದೂಗಳಿಗಿಂತ ಹೆಚ್ಚು ಐಕಮತ್ಯದಿಂದಿದ್ದು ಈ ಹಿಂದೂಸ್ತಾನವನ್ನು ಉಳಿಸುವ ಜವಾಬ್ದಾರಿ ಅವರ ಮೇಲಿದೆ. ಮಗನೇ, ಈ ದೇಶವನ್ನುಳಿಸಲು ಈ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸು, ಈ ನಿನ್ನ ಯೋಜನೆಯಲ್ಲಿ ನಿನಗೆ ದೊಡ್ಡ ಆತಂಕ ಉಂಟುಮಾಡುವವರು ಯೂರೋಪಿಯನ್ನರೇ ಆಗಿದ್ದಾರೆ. ಭಾರತದ ಬಗ್ಗೆ ಅವರಿಗಿರುವ ಅಸೂಯೆಯನ್ನು ನೀನು ಸೋಲಿಸಬೇಕು.\u003c\/p\u003e\n\u003cp\u003e(ಹೈದರಾಲಿ ಪತ್ರದಿಂದ)\u003c\/p\u003e","brand":"BEETLE BOOK SHOP","offers":[{"title":"Default Title","offer_id":49988352311579,"sku":"","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bharatakke-tippu-koduge-enu-5462973.jpg?v=1767533046","url":"https:\/\/beetlebookshop.com\/kn\/products\/bharatakke-tippu-koduge-enu","provider":"Beetle Book Shop","version":"1.0","type":"link"}