{"product_id":"bhaaratadalli-lokatantra-jeevanta-ideye","title":"ಭಾರತದಲ್ಲಿ ಲೋಕತಂತ್ರ ಜೀವಂತ ಇದೆಯೇ?","description":"\u003cp\u003eಲೋಕತಂತ್ರದ ಅವಸಾನ...\u003c\/p\u003e\n\u003cp\u003eಈ ಪುಸ್ತಕಕ್ಕೆ ಆಧಾರವಾಗಿರುವ ಧ್ರುವ್ ರಾಲಿಯವರ 30 ನಿಮಿಷ ಅವಧಿಯ, 632ನೇ ವೀಡಿಯೊ ಭಾರತದಲ್ಲಿ ಲೋಕತಂತ್ರ ಅಪಾಯದಲ್ಲಿದೆ\u003c\/p\u003e\n\u003cp\u003eಎನ್ನುವ ವಿಷಯದ ಕುರಿತಾಗಿದೆ. ಒಂದೂವರೆ ಕೋಟಿ ಸಬ್‌ಸ್ರೈಬರ್‌ಗಳನ್ನು ಹೊಂದಿರುವ ಈ ಯೂಟ್ಯೂಬ್ ವಾಹಿನಿಯಲ್ಲಿ, 2024ರ ಫೆಬ್ರವರಿ 20ರಂದು ಪ್ರಸಾರವಾದ ಈ ವೀಡಿಯೋವನ್ನು ಒಂದು ಕಾಲು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ, ಒಂದು ಲಕ್ಷ ಎಂಭತ್ತು ಸಾವಿರ ಜನ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಇದು ಹಿಂದಿ ಭಾಷೆಯಲ್ಲಿದೆ. ಇದನ್ನು ಕನ್ನಡದ ಓದುಗರಿಗೆ ಮುಟ್ಟಿಸಬೇಕು ಎನ್ನಿಸಿತು. ಮೂಲತಃ ಇದು ವೀಡಿಯೋ ಆದ್ದರಿಂದ ಅದರ ದೃಶ್ಯಾಂಶಗಳನ್ನು ಬರಹ ರೂಪದಲ್ಲಿ ತರಲಾಗಿದೆ. ಧ್ರುವ್ ನೀಡುವ ಸಂಗತಿಗಳ ಜೊತೆಗೆ ದಿನಾಂಕ, ಸ್ಥಳ ಇತ್ಯಾದಿ ಹೆಚ್ಚಿನ ವಿವರಗಳನ್ನು ಸೇರಿಸಲಾಗಿದೆ. ಅವರು ಉಲ್ಲೇಖಿಸಿರುವ ಕೆಲವು ಅಂಶಗಳನ್ನು ಓದುಗರಿಗೆ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಕೆಲವು ಚಿತ್ರಗಳನ್ನು ಸೇರಿಸಿ ಒಂದು ಸ್ವತಂತ್ರ ಕೃತಿಯ ರೂಪವನ್ನು ನೀಡಲಾಗಿದೆ.\u003c\/p\u003e\n\u003cp\u003eಮೂಲತಃ ಹರಿಯಾಣದ ರೋಹ್ಟಕ್‌ನವರಾದ ಧ್ರುವ್ ರಾಠೀ, ದೆಹಲಿಯಲ್ಲಿ ಬೆಳೆದರು. ಕಾರ್ಲ್‌ಸ್ರೂಹೆ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೊದಲು ಮೆಕ್ಯಾನಿಕಲ್ ಇಂಜಿನಿಯರಿಂಗ್, ನಂತರ ರಿನ್ಯೂವಬಲ್ ಎನರ್ಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.\u003c\/p\u003e\n\u003cp\u003eಯೂಟ್ಯೂಬರ್ ಆಗಿ ಸುಪ್ರಸಿದ್ಧರಾಗಿರುವ ಇವರು ಒಬ್ಬ ವ್ಲಾಗರ್ ಮತ್ತು ಸಾಮಾಜಿಕ ಮಾಧ್ಯಮ ಕಾರ್ಯಕರ್ತರೂ ಹೌದು. ಪ್ರಸ್ತುತ ಅವರು ತಮ್ಮ ಜರ್ಮನ್ ಪತ್ನಿ, ಜೂಲಿ ಎಫ್ ಜೊತೆ ಜರ್ಮನಿಯಲ್ಲಿಯೇ ವಾಸವಾಗಿದ್ದಾರೆ.\u003c\/p\u003e\n\u003cp\u003eಇವರ ಯುಟ್ಯೂಬ್ ವಿಡಿಯೋಗಳು ವಿಸ್ತಾರವಾದ ಸಂಶೋಧನೆಯನ್ನು ಆಧರಿಸಿರುತ್ತವೆ, ಅವರೇ ಸ್ವತಃ ನೀಡುವ ಸರಳವಾದ ನಿರೂಪಣೆ ಇರುತ್ತದೆ, ಮತ್ತು ವಿಡಿಯೋ ತಂತ್ರದ ಉತ್ತಮ ಬಳಕೆಯಿಂದಾಗಿ ತಮ್ಮ ನಿರೂಪಣೆಗೆ ಆಧಾರವಾದ ಮಹತ್ವದ ಚಿತ್ರಗಳು ಮತ್ತು ವಿಡಿಯೋಗಳು ಇರುವುದರಿಂದ ಇವು ಮಹತ್ವದ ದಾಖಲೆಗಳೂ ಆಗುತ್ತವೆ. ಇವರು ಇತಿಹಾಸ, ವಿಜ್ಞಾನ, ನಿಗೂಢಗಳು, ಪರಿಸರ, ಸಿನಿಮಾ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ವಸ್ತುನಿಷ್ಠವಾದ ಪ್ರಸ್ತುತವಾದ ವೀಡಿಯೊಗಳನ್ನು ಮಾಡುತ್ತಾರೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":47992521851163,"sku":"","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bhaaratadalli-lokatantra-jeevanta-ideye-7513552.jpg?v=1767534665","url":"https:\/\/beetlebookshop.com\/kn\/products\/bhaaratadalli-lokatantra-jeevanta-ideye","provider":"Beetle Book Shop","version":"1.0","type":"link"}