{"product_id":"best-of-katte-purana-1","title":"ಕಟ್ಟೆ ಪುರಾಣದ ಉತ್ತಮವಾದುದು","description":"\u003cp\u003eಮೂವತ್ತು ವರ್ಷಗಳ ಕೆಳಗೆ ಲಂಕೇಶ್ ಪತ್ರಿಕೆಯಲ್ಲಿ ಬಿ. ಚಂದ್ರೇಗೌಡರ 'ಮೂಡ್ಲಳ್ಳಿತ ' ಟಾಪಿದ್ದತೆ?' ಎಂಬ ಪುಟ್ಟ ಬರಹ ಪ್ರಕಟವಾಯಿತು. ಆ ಬರಹದಲ್ಲಿದ್ದ ಹಳ್ಳಿ ಮಾತಿನ ಖದರ್ ಕಂಡು ವಿಸ್ಮಯಗೊಂಡವರಲ್ಲಿ ನಾನೂ ಒಬ್ಬ. ಅವತ್ತು ಸಂಜೆ ಸಂಪಾದಕರಾದ ಲಂಕೇಶರೊಡನೆ ಈ ಬರಹ ಹುಟ್ಟಿಸಿದ ಮುಗ್ಧ ನಗೆ ಕುರಿತು ಮಾತಾಡುತ್ತಿದ್ದೆ. ಮುಗುಳ್ನಕ್ಕ ಸಂಪಾದಕರು ಅಷ್ಟರಲ್ಲಾಗಲೇ ಚಂದ್ರೇಗೌಡರಿಗೆ ಅಂಕಣ ಬರೆಯಲು ಹೇಳಿದಂತಿತ್ತು!\u003c\/p\u003e\n\u003cp\u003eಅವತ್ತು ಶುರುವಾದ ಚಂದ್ರೇಗೌಡರ 'ಕಟ್ಟೆ ಪುರಾಣ' ಲಂಕೇಶರು ತೀರಿಕೊಳ್ಳುವವರೆಗೂ ಮುಂದುವರಿಯಿತು. ಸಂಪಾದಕರು ಅನೇಕರ ಅಂಕಣಗಳನ್ನು ನಿಲ್ಲಿಸಿದರೂ ಪುರಾಣಕ್ಕೆ ಮಾತ್ರ ಬ್ರೇಕ್ ಹಾಕಲಿಲ್ಲ. ಲಂಕೇಶರ ನಂತರವೂ ಮುಂದುವರಿದ 'ಕಟ್ಟೆ ಪುರಾಣ'ದ ಬರವಣಿಗೆ ನಿಂತರೂ ಅಂಕಣಕಾರರ ಮಾತುಕತೆಯಲ್ಲಿ ಹರಿಯುತ್ತಲೇ ಇದೆ!\u003c\/p\u003e\n\u003cp\u003eರಾಜಕೀಯ ವಿಮರ್ಶೆ, ಸಮಾಜ ವಿಮರ್ಶೆ ಎರಡೂ ಆಗಿದ್ದ 'ಕಟ್ಟೆ ಪುರಾಣ' ಥರದ ಸಹಜ ಗ್ರಾಮೀಣ ಹಾಸ್ಯ ಕನ್ನಡದಲ್ಲಿ ಇದ್ದಂತಿಲ್ಲ. ಗ್ರಾಮಭಾಷೆಯ ಲಯಗಳನ್ನು ವೈನೋದಿಕ ಲೇಖಕರಲ್ಲೂ ನಾನು ಕಂಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ. ಇದು ನಿರುದ್ದಿಶ್ಯ ಹರಟೆಯಲ್ಲ. ಗಾಂಧಿ, ಅಂಬೇಡ್ಕರ್, ಲೋಹಿಯಾ: ಲಂಕೇಶರ ಚಿಂತನೆಗಳನ್ನು ಸಿಕ್ಕಷ್ಟು ಹೀರಿಕೊಂಡು ಹುಟ್ಟಿದ ವಿಮರ್ಶೆ ಇದು. ಗ್ರಾಮೀಣ ಪಾತ್ರಗಳಿಂದ ಚಿಮ್ಮಿದ ಮುಕ್ತ ವೈನೋದಿಕ ವಿಮರ್ಶೆಯ ಅಂಕಣವೊಂದು ಜವಾಬ್ದಾರಿಯುತ, ಆರೋಗ್ಯಕರ ರಾಜಕೀಯ ವಿಮರ್ಶೆಯ ವೇದಿಕೆಯಾದ ಅಚ್ಚರಿ ಇದು.\u003c\/p\u003e\n\u003cp\u003eಚಂದ್ರೇಗೌಡರ 'ಕಟ್ಟೆಪುರಾಣ'ವನ್ನು ಅನುಕರಿಸಿ ಹುಟ್ಟಿದ ಟೆಲಿಹಾಸ್ಯಸರಣಿಗಳು. ಸಿನಿಮಾ ಸಂಭಾಷಣೆಗಳು ನೂರಾರು! ಆದರೆ ತಮ್ಮ ಬರವಣಿಗೆಯ ಬಗ್ಗೆ ಯಾವ ಭ್ರಮೆಗಳೂ ಇಲ್ಲದವರಂತೆ ಅಡ್ಡಾಡುವ ಚಂದ್ರೇಗೌಡರು ಆಡಾಡುತ್ತಲೇ ಬರವಣಿಗೆಯ ಹೊಸ ಹಾದಿ ತೆರೆದ ಈ ಕ್ರಮ ಅನನ್ಯವಾಗಿದೆ.\u003c\/p\u003e\n\u003cp\u003e-ನಟರಾಜ್ ಹುಳಿಯಾ‌ರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":49809275191579,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/best-of-katte-purana-5297928.jpg?v=1767532085","url":"https:\/\/beetlebookshop.com\/kn\/products\/best-of-katte-purana-1","provider":"Beetle Book Shop","version":"1.0","type":"link"}