{"product_id":"belvel-by-vikram-b-k","title":"ಬೆಲ್ ವೆಲ್‌ | Belvel","description":"\u003cdiv class=\"product__description rte quick-add-hidden\"\u003e\n\u003cp\u003eಬದುಕನ್ನು ಸಂಭ್ರಮಿಸಬೇಕು ಎನ್ನುವ ಉದ್ದೇಶದಿಂದ ಬದುಕುತ್ತಿರುವವನು ನಾನು. ನನಗೆ ಈ ಸಾಲು ಪ್ರತೀ ಕಷ್ಟದ ಸಮಯಗಳಲ್ಲಿ ಬಲ ಕೊಡುತ್ತದೆ ಹಾಗೆಯೇ ಪ್ರತೀ ಸಂತಸದ ಸಮಯಕ್ಕೆ ಹೆಚ್ಚು ಖುಷಿ ತರುತ್ತದೆ. ಈ ಸಾಲು ನನಗೆ ನನ್ನ ಸುತ್ತಮುತ್ತಲಿನ ಸಂಬಂಧಗಳನ್ನ, ಸಮಾಜವನ್ನ, ಒಟ್ಟಾರೆ ಪ್ರಪಂಚವನ್ನ ನೋಡುವ ಪರಿಯನ್ನೇ ಬದಲಿಸಿದೆ. ಬದುಕಿನ ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದೆ. ಅದಕ್ಕೆ ಏನೋ ಸಣ್ಣ ಸಣ್ಣ ಘಟನೆಗಳು ದೊಡ್ಡ ಸಂದೇಶವನ್ನು ಹೇಳಿಕೊಡುತ್ತಿವೆ. ಉದಾಹರಣೆಗೆ ಈ ಪುಸ್ತಕದ ಟೈಟಲ್- \"ಬೆಲ್ವೆಲ್\", ಈ ಪದವನ್ನು ಯಾವ ಭಾಷೆಯಿಂದಲೂ ನಾನು ತಗೆದುಕೊಂಡಿಲ್ಲ. ಇದು ನನ್ನ ಮುದ್ದಿನ ಚೊಚ್ಚಲ ಮಗ ತ್ರಿಲೋಕನ ತೊದಲಿನ ಪ್ರೇಮ ಭಾಷೆ. ನನ್ನನ್ನು ತನ್ನ \"ಬೆಸ್ಟ್ ಫ್ರೆಂಡ್\" ಎಂದು ಕರೆಯಲು ಪ್ರೀತಿಯಿಂದ ಅವನೇ ತನ್ನದೇ ಬಾಲ ನುಡಿಯಲ್ಲಿ ಸೃಷ್ಟಿಸಿರುವ ಪದ, ಬೆಲ್ವೆಲ್.\u003c\/p\u003e\n\u003cp\u003eಹೆತ್ತವರು, ಒಡ ಹುಟ್ಟಿದವರು, ಮಡದಿ ಮಕ್ಕಳ ಜೊತೆ, ಬಂಧು ಬಳಗದವರ ಜೊತೆ, ಸ್ನೇಹಿತರ ಜೊತೆ, ಸಿಬ್ಬಂದಿಗಳ ಜೊತೆ, ಸಾಧಕರ ಜೊತೆ, ಮಾತು ಮಾತಲ್ಲೇ ಒಂದಿಷ್ಟು ಗೊತ್ತಾದ ಎಷ್ಟೋ ಜನರ ಜೊತೆಗೆ ನಾನು ಕಳೆದ ಮತ್ತು ಮುಂದೆ ನನಗೆ ಎಂದೂ ಸಿಗದ ಸಮಯವು ನನಗೆ ಕೊಟ್ಟಿರುವ ಒಂದಿಷ್ಟು ಪ್ರೀತಿಯನ್ನು ಮತ್ತು ನಾನು ಅದರಿಂದ ಕಲಿತ ಒಂದಿಷ್ಟು ನೀತಿಯನ್ನು ಈ ಪುಸ್ತಕದಲ್ಲಿನ ಬರಹಗಳೊಂದಿಗೆ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಈ \"ಬೆಲ್ವೆಲ್\" ಓದು ನಿಮಗೆ ನಿಮ್ಮ ಬದುಕನ್ನು ಸಂಭ್ರಮಿಸಲು ಪ್ರೇರೇಪಿಸುವಂತಾದರೆ ಅದುವೇ ನನ್ನ ನನ್ನ ಈ ಬರಹಗಳು ಮತ್ತು ಅನುಭವಗಳಿಗೆ ಗೆಲುವು.\u003c\/p\u003e\n\u003cp\u003eಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಸದಾ ಬದುಕನ್ನು ಸಂಭ್ರಮಿಸಿ!\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51915763056923,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-03-15at11.53.59AM.jpg?v=1773981570","url":"https:\/\/beetlebookshop.com\/kn\/products\/belvel-by-vikram-b-k","provider":"Beetle Book Shop","version":"1.0","type":"link"}