ಹೆಚ್ಚುವರಿ ಮಾಹಿತಿ
ವಿವರಣೆ
ಬೆಳುದಿಂಗಳ ನೋಡಾ : ವಿಮರ್ಶಾ ಪ್ರಬಂಧಗಳು
ಎಸ್. ಆರ್. ವಿಜಯಶಂಕರ
ʼಬೆಳುದಿಂಗಳ ನೋಡಾʼ ಕೃತಿಯ ವಿಮರ್ಶೆ
ಬೇಂದ್ರೆಯವರ ʼ ಬೆಳುದಿಂಗಳ ನೋಡುʼ ಕವಿತೆಯ ವಿಶ್ಲೇಷಣೆಯ ಮೂಲಕ ಆರಂಭಗೊಳ್ಳುವ ಎಸ್. ಆರ್ ವಿಜಯಶಂಕರ ಅವರ ʼಬೆಳುದಿಂಗಳ ನೋಡಾʼ ಕೃತಿ, ಲೇಖಕ ತನ್ನ ಓದು ಮತ್ತು ಚಿಂತನೆಗೆ ದಕ್ಕಿದ ಬೆಳುದಿಂಗಳನ್ನು ಸಹೃದಯದೊಂದಿಗೆ ಹಂಚಿಕೊಳ್ಳುವ ಪ್ರಯತ್ನದಂತಿದೆ. ಬೇಂದ್ರೆಯವರ ಬೆಳದಿಂಗಳ ನೋಟದ ಕವಿತೆಯ ಅರ್ಥಸಾಧ್ಯತೆಗಳನ್ನು ತೆರೆದಿಡುತ್ತಾ ಹೋಗುವ ಬರಹ, ಲೇಖಕರ ತಂದೆಯ ಆಂತಿಮಸಂಸ್ಕಾರದ ನೆನಪಿನೊಂದಿಗೆ ಹೊಸತೊಂದು ಆಯಾಮ ಪಡೆಯುತ್ತದೆ. ಭೌತಿಕ ಶರೀರ ಬೆಂಕಿಯ ಮೂಲಕ ಬೆಳಕಿಗೆ ಸೇರುವ ಪ್ರಕ್ರಿಯೆ ಲೇಖಕರಲ್ಲಿ ಅಧ್ಯಾತ್ಮಿಕ ಲಹರಿಗಳನ್ನು ಉಂಟುಮಾಡುತ್ತದೆ; ಮೃತರ ಬದುಕೇ ಬೆಳದಿಂಗಳಾಗಿದ್ದುದನ್ನು ಸೂಚಿಸುತ್ತದೆ. ಏಕಕಾಲಕ್ಕೆ ವೈಯುಕ್ತಿಕವೂ ಸಾರ್ವತ್ರಿಕವೂ ಆಗುವುದು ಒಳ್ಳೆಯ ಕವಿತೆಯದು ಮಾತ್ರವಲ್ಲ. ಎಲ್ಲ ಒಳ್ಳೆಯ ಬರಹಗಳ ಗುಣವೂ ಹೌದು. ಕಾವ್ಯದ ಆಶಯ ಪ್ರಧಾನ ವಿಶ್ಲೇಷಣೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ, ಸದ್ಯದ ಅಗತ್ಯವಾಗಿರುವ ರಸಪ್ರಧಾನ, ಭಾವಪ್ರಧಾನ ಬರಹಗಳಿಗೆ ಉದಾಹರಣೆಯಾಗಿ ವಿಜಯಶಂಕರರ 'ಬೆಳುದಿಂಗಳ ನೋಡಾʼ ವಿಶ್ಲೇಷಣೆಯನ್ನು ನೋಡಬಹುದು.
ʼಬೆಳುದಿಂಗಳ ನೋಡಾ ʼಎನ್ನುವ ಆಹ್ವಾನ, ಸಂಕಲನದ ಉಳಿದ ಬರಹಗಳಿಗೂ ಅನ್ವಯಿಸುವಂತದ್ದು ಕನ್ನಡ ಸಾಂಸ್ಕೃತಿಕ ಲೋಕದ ಕೆಲವು ತಾರೆಗಳನ್ನು ʼ ಇಗೋ ನೋಡಿರಿʼ ಎಂದು ತೋರುವ ತೋರುಬೆರಳಿನಂತೆ ಈ ಕೃತಿಯ ಬರಹಗಳಿವೆ. ಟಿ.ಎಸ್ ವೆಂಕಣ್ಣಯ್ಯ, ಟಿ.ವಿ ವೆಂಕಟಶಾಸ್ತ್ರಿ, ಜಿ ರಾಮಕೃಷ್ಣ, ಚೆನ್ನವೀರ ಕಣವಿ, ಏರ್ಯ ಲಕ್ಷ್ಮೀನಾರಾಯಣ ಅರ್ಯ, ಉಮಾಕಾಂತ ಭಟ್ಟ, ಷ, ಶೆಟ್ಟರ್, ಬರಗೂರು ರಾಮಚಂದ್ರಪ್ಪ ಮುಂತಾದವರ ಕುರಿತ ಬರಹಗಳು ಕೃತಿಗಳ ಮೂಲಕ ವ್ಯಕ್ತಿಯನ್ನು, ವ್ಯಕ್ತಿತ್ವದ ನೆರಳು ಕೃತಿಗಳಲ್ಲಿ ಇರುವುದನ್ನು ಗುರುತಿಸುವ ಪ್ರಯತ್ನಗಳಾಗಿವೆ. ಈ ಕೃತಿ- ವ್ಯಕ್ತಿವಿಶೇಷಗಳ ಬರಹಗಳಲ್ಲಿ ವಿಶಿಷ್ಟವಾಗಿ ಕಾಣಿಸುವುದು ಗಿರೀಶ ಕಾರ್ನಾಡರ ನಾಟಕಗಳ ಅನನ್ಯತೆಯನ್ನು ಸೂಚಿಸುತ್ತ, ಆ ಕೃತಿಗಳನ್ನೇ ಅವರ ನಿಷ್ಠುರ ಪ್ರಾಮಾಣಿಕ ಹಾಗೂ ಧರ್ಮನಿರಪೇಕ್ಷ ವ್ಯಕ್ತಿತ್ವವೂ ವಿಶಿಷ್ಟವಾಗಿದ್ದುದನ್ನು ವಿಜಯಶಂಕರ್ ಗುರುತಿಸುತ್ತಾರೆ. ಕಾಲೇಜು ದಿನಗಳಲ್ಲಿ ಕಂಡ ಕೆ.ಬಿ. ಸಿದ್ದಯ್ಯನವರ ವೈಚಾರಿಕತೆ ಮುಂದಿನ ದಿನಗಳಲ್ಲಿ ಅವರ ಕಾವ್ಯದಲ್ಲಿ ಪ್ರಖರವಾಗಿಉ ಅಭಿವ್ಯಕ್ತಗೊಂಡಿದ್ದನ್ನು ವಿಶ್ಲೇಷಿಸುವ ಮೂಲಕ, ಕಾವ್ಯದ ಬಗ್ಗೆ ಓದುಗರ ಗಮನ ಸೆಳೆಯುತ್ತಾರೆ.
ಪುಸ್ತಕದ ಎರಡನೇ ಭಾಗದಲ್ಲಿನ ʼಇಪ್ಪತ್ತೊಂದನೇ ಶತಮಾನದ ಮೊದಲ ಘಟ್ಟದ ಕಿನ್ನಡ ಸಾಹಿತ್ಯʼ ಲೇಖನ ಈ ಸಂಕಲನದಲ್ಲಿ ಹೆಚ್ಚು ಕುತೂಹಲ ಕೆರಳಿಸುವ ಹಾಗೂ ಚರ್ಚೆಗೆ ಅವಕಾಶ ಕಲ್ಪಿಸುವ ಬರಹ. 56 ಪುಟಗಳಷ್ಟು ದೀರ್ಘವಾದ ಈ ಬರಹ 2001 ರಿಂದ 2017ರವರೆಗಿನ ಕನ್ನಡ ಸಾಹಿತ್ಯದ ಅವಲೋಕನವಾಗಿದೆ. ಈ ಅವಧಿಯಷ್ಟು, ಕಳೆದ ಐದು ದಶಕಗಳ ಎಲ್ಲ ಸಾಹಿತ್ಯ ಶ್ರದ್ದೆಗಳೂ ಸಕ್ರಿಯವಾಗಿರುವ ಕಾಲಘುಟ್ಟ ಎಂದು ಸರಿಯಾಗಿಯೇ ಗುರ್ತಿಸಿರುವ ಸಮೀಕ್ಷಕರು, ಸಾಮಾಜಿಕ ಕಳಕಳಿ, ಆದಾಯ-ಶೋಷಣೆಗಳ ವಿರುದ್ಧದ ಹೋರಾಟ ಮುಂತಾದ ಆಶಯಗಳು ಸಾಹಿತ್ಯ ಕೃತಿಗಳ ʼಕಲಾಸಿದ್ಧಿಗಿಂತ ಮುಖ್ಯʼ ಎಂಬ ವಿಚಾರ ರೂಪುಗೊಂಡಿರುವುದರ ಬಗ್ಗೆ ಗಮನ ಸೆಳೆಯುತ್ತದೆ.
ಈ ವಿಚಾರಗಳೆಲ್ಲವೂ ಸರಿಯೆ. ಆದರೆ, ಹೊಸ ಶತಮಾನದ ಮೊದಲೆರಡು ದಶಕಗಳ ಅವಧಿಯಲ್ಲಿ ಗಮನಸೆಳೆದ ಹೊಸ ಲೇಖಕರ ಸಮೀಕ್ಷೆ ಎನ್ನುವ ಕುತೂಹಲದಿಮದ ಓದಿದರೆ ಈ ಬರಹ ನಿರಾಶೆ ಹುಟ್ಟಿಸುತ್ತದೆ. ಈ ಎರಡು ದಶಕಗಳಿಗೆ ಮೊದಲೇ ಬರಹಗಾರರಾಗಿ ಪ್ರಸಿದ್ಧರಾದ ಲೇಕಕರ ಸಾಹಿತ್ಯದ ವಿವೇಚನೆಯೇ ಇಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಂಡಿದೆ. ಮೂಲಭೂತವಾದವನ್ನು ವಿರೋಧಿಸುವ ಕವಿ ಎಂದು ಆರೀಫ್ ರಾಜಾ ಅವರ ಬಗ್ಗೆ ಮೂರ್ನಾಲ್ಕು ಸಾಲುಗಳಲ್ಲಿ ಬರೆಯುವ ವಿಜಯಶಂಕರರು, ಹಿಂದೂಮೂಲಭೂತವಾದದ ವಿರೋಧಿ ದಿನಯಾಗಿ ದೀರ್ಘವಾಗಿ ಚರ್ಚಿಸಿರುವುದು ಎಚ್ೆಸ್. ವೆಂಕಟೇಶ್‌ಮೂರ್ತಿ ಅವರ ಕವಿತೆಯನ್ನು ತಿರುಮಲೇಶರ ಕಾವ್ಯಕ್ಕೆ ಹೆಚ್ಚಿನ ಅವಕಾಶ ಇರುವ ಸಮೀಕ್ಷೆಯಲ್ಲಿ , ಆಶಯದ ಜೊತೆಗೆ ಕಲಾಸಿದ್ದಿಯಲ್ಲೂ ಗಮನಾರ್ಹ ಯಶಸ್ಸು ಪಡೆದಿರುವ ಲಲಿತಾ ಸಿದ್ಧಬಸಯ್ಯನವರ ಕಾವ್ಯಕ್ಕೆ ಸಿಕ್ಕಿರುವುದು ಒಂದು ಪ್ಯಾರಾ ಮಾತ್ರ.
ಮೌನೇಶ ಬಡಿಗೇರರ ʼಮಾಯಾ ಕೋಲಾಹಲʼ ದ ಕಥೆಗಳಿಗೆ ವಿಮರ್ಶೆಯ ನ್ಯಾಯ ಸಂದಿದೆಯಾದರೂ ಕಳೆದೆರಡು ದಶಕಗಳಲ್ಲಿ ಗಮನಾರ್ಹ ಕಥೆಗಳನ್ನು ಬರೆದ ಮಂಜುನಾಥ್ ಲತಾ., ಗಂಗಾಧರ ಬೀಚನಹಳ್ಳಿ ಅವರ ಕಥೆಗಳ ಪ್ರಸ್ತಾಪವೇ ಸಮೀಕ್ಷೆಯಲ್ಲಿಲ್ಲ. ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಸಂವೇದನೆಯನ್ನು ಸೇರ್ಪಡೆಗೊಳಿಸುವ ವಿ.ಎಂ ಮಂಜುನಾಥರ ʼಅಸ್ಪ್ರಷ್ಟ ಗುಲಾಬಿʼ ಕೃತಿಯ ಉಲ್ಲೇಖವೂ ಇಲ್ಲ. ಹೊಸ ಬರಹಗಾರರ ಸಾಹಿತ್ಯವನ್ನು ವಿಮರ್ಶಕರು ಗಮನಿಸುವುದಿಲ್ಲ ಎನ್ನುವ ʼ ಜನಪ್ರಿಯ ಆರೋಪ; ಕ್ಕೆ ವಿಜಯಶಂಕರ ಅವರ ಈ ಸಮೀಕ್ಷೆಯೂ ಹೊರತಾಗಿಲ್ಲ.
ತಮ್ಮ ಬರಹಗಳನ್ನು ಲೇಖಕರು ʼ ವಿಮರ್ಶಾ ಪ್ರಬಂಧಗಳುʼ ಎಂದು ಕರೆದಿದ್ದಾರೆ. ಆದರೆ, ಪ್ರಬಂಧದ ಶಿಲ್ಪ ಹಾಗೂ ಧ್ವನಿ ಇಲ್ಲಿಲ್ಲ. ವ್ಯಕ್ತಿಚಿತ್ರಗಳೇ ಹೆಚ್ಚಿನ ಪ್ರಮಾಣದಲ್ಲಿರುವ ಈ ಸಂಕಲದ ರಚನೆಗಳನ್ನು ಲೇಖನಗಳು ಎಂದು ಕರೆಯುವುದೇ ಹೆಚ್ಚು ಸರಿ. ವಿಮರ್ಶಾನ್ಯಾಯ- ಪ್ರಾತಿನಿಧ್ಯದ ದೃಷ್ಟಿಯಿಂದ ಚರ್ಚೆಗೆ ಅವಕಅಶ ಕಲ್ಪಿಸಿದರೂ ʼ ಮದುಮಗಳ ಕಣ್ಣಿನ ಬಗೀ ಚಂದಿರನ ನಗಿʼ ಇರುವಂಥ ಸಾಂಸ್ಕೃತ ಬೆಳುದಿಂಗಳನ್ನ ಸಹೃದಯರೊಂದಿಗೆ ಸೊಗಸಾಗಿ ಹಂಚಿಕೊಂಡಿರುವ ಕಾರಣದಿಂದಾಗಿ ಈ ಕೃತಿ ಆಪ್ತವೆನ್ನಿಸುತ್ತದೆ.
(ಕೃಪೆ: ಪ್ರಜಾವಾಣಿ. ಬರಹ- ರಘನಾಥ ಚ.ಹ)
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.