{"product_id":"bayasi-bidda-bestu-ta-ra-su-avara-koneya-kadambari","title":"ಬಯಸಿ ಬಿದ್ದ ಬಿದ್ದು - ತ ರಾ ಸು ಅವರ ಕೊನೆಯ ಕಾದಂಬರಿ","description":"\u003cp\u003e \u003c\/p\u003e\n\u003cp style=\"text-align: justify;\"\u003eತಳುಕು ರಾಮಸ್ವಾಮಯ್ಯ ಸುಬ್ಬರಾಯ (ತ.ರಾ.ಸು) ಅವರು 1906 ಜೂನ್ 12 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ ಜನಿಸಿದರು. ಇವರು ಮೂಲತಃ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬರಾಯರು ಇಂಟರ್ ಮೀಡಿಯೆಟ್‌ನಲ್ಲಿದ್ದಾಗ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು.\u003c\/p\u003e\n\u003cp style=\"text-align: justify;\"\u003e\u003cstrong\u003eಪ್ರಮುಖ ಕೃತಿಗಳು:\u003c\/strong\u003e ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ - ಈ ಕಾದಂಬರಿಗಳು ಬರವಣಿಗೆಯ ಕೌಶಲ್ಯಕ್ಕೆ ಹಿಡಿದ ಕನ್ನಡಿ. \u003cstrong\u003eಚಲನಚಿತ್ರವಾದ ಕಾದಂಬರಿಗಳು:\u003c\/strong\u003e ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಿನಲ್ಲಿ ಹಿಂದಿ ಚಲನಚಿತ್ರವಾಗಿತ್ತು), ನಾಗರಹಾವು, ಬೆಂಕಿಯ ಬಲೆ, ಗಾಳಿ ಮಾತು, ಬಿಡುಗಡೆಯ ಬೇಲಿ, ಮಸಣದ ಹೂ. \u003cstrong\u003eಸಾಮಾಜಿಕ ಕಾದಂಬರಿಗಳು:\u003c\/strong\u003e ಮನೆಗೆ ಬಂದ ಮಹಾಲಕ್ಷ್ಮಿ, ಬೇಡದ ಮಗು, ಕಾರ್ಕೋಟಕ, ಮಾರ್ಗದರ್ಶಿ, ಪಂಜರದ ಪಕ್ಷಿ, ಖೋಟಾನೋಟು ಸೇರಿದಂತೆ ಒಟ್ಟು 18 ಕಾದಂಬರಿಗಳು, ಹಾಗೂ ಬೆಳಕು ತಂದ ಬಾಲಕ ಹಾಗೂ ನಾಲ್ಕು + ನಾಲ್ಕು: ಇವು ಪೌರಾಣಿಕ ಕಾದಂಬರಿಗಳು. ರೂಪಸಿ, ತೊಟ್ಟಿಲು ತೂಗಿತು, ಮಲ್ಲಿಗೆಯ ನಂದನದಲ್ಲಿ, ಇದೆ ನಿಜವಾದ ಸಂಪತ್ತು - ಇವು ಕಥಾ ಸಂಕಲನಗಳು. \u003cstrong\u003eನಾಟಕಗಳು:\u003c\/strong\u003e ಜ್ವಾಲಾ, ಮೃತ್ಯು ಸಿಂಹಾಸನ, ಅನ್ನಾವತಾರ ಹಾಗೂ ಮಹಾಶ್ವೇತೆ.\u003c\/p\u003e\n\u003cp style=\"text-align: justify;\"\u003eದುರ್ಗಾಸ್ತಮಾನ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1985) ಲಭಿಸಿದೆ. 1984 ಏಪ್ರಿಲ್ 10 ರಂದು ನಿಧನರಾದರು.\u003c\/p\u003e","brand":"Ta Ra Su | ತ.ರಾ.ಸು","offers":[{"title":"Default Title","offer_id":49524953841947,"sku":"","price":117.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bayasi-bidda-bestu-ta-ra-su-avara-koneya-kadambari-9066984.jpg?v=1767533108","url":"https:\/\/beetlebookshop.com\/kn\/products\/bayasi-bidda-bestu-ta-ra-su-avara-koneya-kadambari","provider":"Beetle Book Shop","version":"1.0","type":"link"}