{"product_id":"bariya-nenapalli-palestine-pay-no-need-to-the-rockets-in-kannada","title":"ಬಾರಿಯಾ ನೆನಪಲ್ಲ - ಪ್ಯಾಲೆಸ್ಟೈನ್ ರಾಕೆಟ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ","description":"\u003cspan data-mce-fragment=\"1\"\u003eಲೇಖಕ ಆಕರ್ಷ ರಮೇಶ್ ಕಮಲ ಅವರ `ಬರಿಯ ನೆನಪಲ್ಲ!’ ಪ್ಯಾಲಸ್ತೀನಿ ಭಾವುಕ ಕಥನ’ ಎಂಬುದು ಅನುವಾದಿತ ಕೃತಿ. ಕೆನಡಾದ ಮಾರ್ಸೆಲ್ಲೊ ಡಿ ಸಿಂಟಿಯೊ ಎಂಬ ಬರಹಗಾರನ ‘ಪೆ ನೋ ಹೀಡ್ಸ್ ಟು ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್ ಎಂಬ ಅನುಭವ ಕಥನದ ಕನ್ನಡ ಅನುವಾದವಾಗಿದೆ. ಈ ಕೃತಿ ಸಮಕಾಲೀನ ಪ್ಯಾಲೆಸ್ತೀನ್ ಬದುಕನ್ನು, ಆ ಪ್ರದೇಶದ ಶ್ರೀಮಂತ ಸಾಹಿತ್ಯ, ಸಂಸ್ಕೃತಿಯನ್ನು  ಅನಾವರಣಗೊಳಿಸುತ್ತದೆ. ನೆಲವಿಲ್ಲದವರ ಬದುಕಿನ ಬವಣೆಗಳು, ಪ್ರೇಮ-ಗೆಳೆತನ, ಕುಡಿದು ಖಾಲಿಯಾದ ಚಹಾ-ಕಾಫಿಗಳ ಪರಿಮಳ, ಕ್ರಾಂತಿಯ ಕಿಚ್ಚುಗಳು ಈ ಕೃತಿಯಲ್ಲಡಗಿವೆ. ಹಾರಿಹೋದ ಹೂಗಳ ಸುಗಂಧವಿದೆ. ಅಂತೆಯೇ, ಪಥಭ್ರಾಂತರಾಗಿ ಮರೆಯಾದ, ಹುತಾತ್ಮರಾದ ಪ್ರೀತಿಪಾತ್ರರ ಮುಖಗಳಿವೆ. ಘಸ್ಸಾನ್ ಕನಫಾನಿಯಂತಹ ಲೇಖಕರಿದ್ದಾರೆ. ಮಹಮೂದ್ ದರ್ವಿಶ್ ರಂಥ ಕವಿಗಳು ಕೆತ್ತಿದ ಶಾಸನದಂತಹ ಕವಿತೆಗಳಿವೆ. ಈ ಕವಿತೆಗಳು ಕೆಚ್ಚೆದೆಯ ಹೋರಾಟಗಾರರಿಗೆ ಬೆಳಕು-ಭರವಸೆಯನ್ನು, ಮುಂದಣ ಕವಿಗಳಿಗೆ ಕಾವ್ಯದುಸಿರನ್ನು ತುಂಬುತ್ತವೆ. ಈ ಪುಸ್ತಕವು ಗತ - ವರ್ತಮಾನಗಳನ್ನು ಮುಖಾಮುಖಿಯಾಗಿಸುತ್ತ ಭವಿಷ್ಯವನ್ನು ಕನಸುತ್ತದೆ. ಕನ್ನಡದ ಓದುಗರಿಗೆ ಪ್ಯಾಲೆಸ್ತೀನಿನ ಕಾವ್ಯ, ಕಾವು, ಕನಸುಗಳನ್ನು ಪರಿಚಯಿಸುತ್ತದೆ ಎಂಬುದಾಗಿ ಲೇಖಕರು ಅಭಿಪ್ರಾಯಪಟ್ಟಿದ್ದಾರೆ. \u003c\/span\u003e","brand":"BEETLE BOOK SHOP","offers":[{"title":"Default Title","offer_id":47154725290267,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bariya-nenapalla-palestine-pay-no-need-to-the-rockets-in-kannada-4012170.png?v=1767536826","url":"https:\/\/beetlebookshop.com\/kn\/products\/bariya-nenapalli-palestine-pay-no-need-to-the-rockets-in-kannada","provider":"Beetle Book Shop","version":"1.0","type":"link"}