{"product_id":"bandha-mukta","title":"Bandhamukta (bell hooks translated work)","description":"\u003cp\u003eನಾವು ನಮ್ಮ ಮತ್ತು ನಮ್ಮ ಕಪ್ಪು ಸಮುದಾಯಗಳ ಆತ್ಮಗಳನ್ನು, ಕಾಪಾಡಿಕೊಳ್ಳಬೇಕಿದೆ. ಈ ವಿಮೋಚನೆಗೆ ಮಾರ್ಗದರ್ಶನ ನೀಡಬಲ್ಲ ಕಪ್ಪು ನಾಯಕತ್ವದ ಕೊರತೆ ನಮಗಿದೆ ಎಂಬ ಒಂದು ಸಿನಿಕ ಅಭಿಪ್ರಾಯವು ನಮ್ಮ ತಲೆಯಲ್ಲಿ ದಟ್ಟವಾಗಿ ಕುಳಿತುಬಿಟ್ಟಿದೆ. ಆದರೆ, ಇದೇನೂ ನಿಜವಲ್ಲ. ನಮ್ಮ ಸಮಾಜದಲ್ಲಿ, ದಾರ್ಶನಿಕ ಕಪ್ಪು ನಾಯಕತ್ವದವರು ಬೇಕಾದಷ್ಟು ಇದ್ದಾರೆ; ಅದರಲ್ಲಿ ಅನೇಕರು ಮಹಿಳೆಯರು. ಆದರೆ, ನಮ್ಮನ್ನು ಪಿತೃಪ್ರಧಾನತೆಯ ಚಿಂತನೆಗಳು ಆವರಿಸಿಕೊಂಡಿವೆ; ಇವು ಹೆಣ್ಣು ವಿವೇಕ ಮತ್ತು ಅದು ಹೇಳುವ ಮಾತುಗಳನ್ನು ಗುರುತಿಸಲು ನಮ್ಮನ್ನು ಬಿಡುವುದಿಲ್ಲ. ನಮ್ಮ ಕಪ್ಪು ಸಮುದಾಯಗಳ ಆಳವಾದ ಗಾಯಗಳು ಮಾಯಬೇಕೆಂದರೆ, ನಾವು ಮತ್ತೆ ಪ್ರೀತಿಯ ದಾರಿಗೆ ಮರಳಲೇಬೇಕು. ಇದಕ್ಕೆ ಮಾತ್ರವೇ, ಬಿಳಿಯ ಶ್ರೇಷ್ಠತೆಯನ್ನೂ ಒಳಗೊಂಡಂತೆ, ಎಲ್ಲ ಬಗೆಯ ದಬ್ಬಾಳಿಕೆಗಳಿಗೆ, ಮತ್ತು ಲೈಂಗಿಕತಾವಾದಕ್ಕೆ ವಿರುದ್ಧವಾಗಿ ನಿಲ್ಲುವ ಶಕ್ತಿ ಇರುವುದು. ಸಮಕಾಲೀನ ಕಪ್ಪು ಮಹಿಳಾ ನಾಯಕತ್ವಕ್ಕೆ, ಆತ್ಮಗಳನ್ನು ಕಾಪಾಡಿಕೊಳ್ಳುವ ಈ ಕುರಿತು ಸ್ಪಷ್ಟ ಅರಿವು ಇದೆ. ಈ ದಾರಿಯನ್ನು ಕಂಡುಕೊಳ್ಳಲು, ಮತ್ತು ಅದರಲ್ಲಿ ನಡೆಯಲು ನೆರವಾಗುವ ಅದ್ಭುತ ನೀಲನಕ್ಷೆಯನ್ನು ಕೂಡಾ ನಮ್ಮ ಈ ಕಪ್ಪು ದಾರ್ಶನಿಕ ಮುಂದಾಳುಗಳು ತಯಾರಿಸಿ, ನಮ್ಮೆದುರೇ ಇಟ್ಟಿದ್ದಾರೆ. ನಮ್ಮ ಗಾಯಗಳನ್ನು ಮಾಯಿಸಿ, ನಮ್ಮನ್ನು ಬಂಧಮುಕ್ತವಾಗಿಸುವ ದಾರಿಯಂತೂ ಸ್ಪಷ್ಟವಾಗಿದೆ. ಕಪ್ಪು ಜನರು ಬರಬೇಕು ಅಷ್ಟೇ.\u003c\/p\u003e","brand":"BEETLE BOOK SHOP","offers":[{"title":"Default Title","offer_id":49562809205019,"sku":"","price":256.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bandha-mukta-9581782.jpg?v=1767531785","url":"https:\/\/beetlebookshop.com\/kn\/products\/bandha-mukta","provider":"Beetle Book Shop","version":"1.0","type":"link"}