{"product_id":"badukalarada-balavantaru","title":"ಬದುಕಲಾರದ ಬಲವಂತರು","description":"\u003cp\u003eಬದುಕಲಾರದ ಬಲವಂತರು\u003c\/p\u003e\n\u003cp\u003e1988ರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಾದಂಬರಿ\u003c\/p\u003e\n\u003cp\u003e*******\u003c\/p\u003e\n\u003cp\u003eಶಿವಮೊಗ್ಗ ಜಿಲ್ಲೆಯ ಉತ್ತರದ ಕೆಲ ತಾಲ್ಲೂಕುಗಳ ಪರಿಸರ ಮತ್ತು ಬಳಕೆಯ ನುಡಿಗಳು ಉಮಾದೇವಿಯವರ ಈ ಕಾದಂಬರಿಯಲ್ಲಿ ಸಮೃದ್ಧವಾಗಿ ತುಂಬಿಕೊಂಡಿದೆ. ಬಳಕೆ ನುಡಿಯ ಮೂಲಕವಾಗಿಯೇ ಬದುಕು ಬಿಚ್ಚಿಕೊಳ್ಳುತ್ತದೆ. ಪರಿಸರ ಜೀವಂತಗೊಳ್ಳುತ್ತದೆ. ದಟ್ಟವಾದ ಬದುಕು, ಕೆನೆಗಟ್ಟಿದ ಪ್ರಾದೇಶಿಕ ಬಣ್ಣ, ಕನ್ನೆತನದ ಆಡುನುಡಿ ಪ್ರಯೋಗ – ಇವುಗಳಿಂದ 'ಬದುಕಲಾರದ ಬಲವಂತರು' ಅತ್ಯಂತ ಗಮನಾರ್ಹವಾದ ಇತ್ತೀಚಿನ ಕನ್ನಡ ಕಾದಂಬರಿಗಳಲ್ಲಿ ಒಂದೆನಿಸುತ್ತದೆ. ಕಾದಂಬರಿಯ ಬರವಣಿಗೆ ಯಾಂತ್ರಿಕ ಸುಲಭತೆಯಾಗಿ, ನಗರದ ಪರಿಸರದ ಮಧ್ಯಮ ವರ್ಗದ ಜನರ ಜೀವನದ ಸುತ್ತಮುತ್ತ ಗಿರ್ಕಿ ಹೊಡೆಯುತ್ತಿರುವಾಗ ಉಮಾದೇವಿಯವರ ಪ್ರಸ್ತುತ ಪ್ರಯತ್ನ ತೀರ ಭಿನ್ನವಾದುದು. ಇಂದಿನ ನಮ್ಮ ಕಾದಂಬರಿಗೆ ಪರಿಣಾಮಕಾರಿಯಾದ ಸಾರ್ಥಕವಾದ ಒಂದು ಹೊಸ ಜೋಡಣೆ 'ಬದುಕಲಾರದ ಬಲವಂತರು'.\u003c\/p\u003e\n\u003cp\u003e- ಹಾ.ಮಾ ನಾಯಕ\u003c\/p\u003e","brand":"BEETLE BOOK SHOP","offers":[{"title":"Default Title","offer_id":49787026997531,"sku":"","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/badukalarada-balavantaru-1676219.jpg?v=1767532147","url":"https:\/\/beetlebookshop.com\/kn\/products\/badukalarada-balavantaru","provider":"Beetle Book Shop","version":"1.0","type":"link"}