{"product_id":"atthe-nimagondu-prashne-mattu-ithara-kathegalu","title":"ಆತ್ತೆ ನಿಮಗೊಂದು ಪ್ರಶ್ನೆ ಮತ್ತು ಇತರ ಕಥೆಗಳು","description":"ಹಿಂದಿನ ಕಾಲದಲ್ಲಿ ನಡೆದದ್ದನ್ನು ಹೇಳುವುದಾಗಲೀ ಮುಂದೆ ನಡೆಯಬಹುದೆಂದು ಊಹಿಸುವುದಾಗಲೀ ನಾವು ಬದುಕಿರುವ ಈ ಕಾಲದ ಅಗತ್ಯ ಅನಿವಾರ್ಯತೆಗಳಿಗೆ ತಕ್ಕಂತೆಯೇ ರೂಪ ಪಡೆಯುತ್ತದೆ. ನಮ್ಮ ಕಾಲದ ಬದುಕನ್ನು ಕುರಿತು ಕನ್ನಡದಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಬೆಳೆಯುತ್ತ, ಗಟ್ಟಿಗೊಳ್ಳುತ್ತ ಬಂದಿರುವ ಹೆಣ್ಣು ನೋಟ, ಹೆಣ್ಣು ಭಾಷೆಗಳ ಚಿಂತನೆಯ ಪರಿಣಾಮವಾಗಿ ಡಾ. ಜ್ಯೋತಿಯವರ ಕಥೆಗಳು ರಚನೆಗೊಂಡಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸೀತೆ, ಅಹಲ್ಯ, ದೌಪದಿ, ಇಂಥ ಪುರಾಣ ಪಾತ್ರಗಳ ವರ್ತನೆ ಇಂದು ಹೇಗೆ ಕಾಣುತ್ತದೆ, ಪ್ರಾಚೀನ ಕಥೆಗಳ ಸನ್ನಿವೇಶವು ಇಂದೂ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಹಾಗೇ ಮುಂದುವರೆಯುತ್ತಿರುವಾಗ ಈ ಕಾಲದ ಹೆಣ್ಣು ಯಾವ ನಿಲುವು ತೆಗೆದುಕೊಳ್ಳಬಹುದು ಅನ್ನುವ ಸೂಚನೆಯೂ ಈ ಕಥೆಗಳಲ್ಲಿದೆ. ಹಾಗೆ ನೋಡಿದಾಗ ಹಳೆಯದು ಹೊಸದಾಗುವ ಕಥೆಗಳಲ್ಲೂ ನಡೆದಿದೆ. ಕೊನೆಯಿರದ ಕೆಲಸ ಈ ಕಥೆಗಳಲ್ಲೂ ನಡೆದಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸದ್ಯದ ಸಾಮಾಜಿಕ ಸ್ಥಿತಿಯ ಬಗ್ಗೆ ತಮ್ಮ ಬರಹಗಳಲ್ಲಿ ಚಿಂತನೆ ನಡೆಸಿರುವ ಜ್ಯೋತಿಯವರು ಈ ಸಂಕಲನದ ಮೂಲಕ ಕತೆಗಾರರಾಗಿ ಕಾಣಿಸಿಕೊಂಡಿದ್ದಾರೆ. ಭಾವದ ಲೋಕ, ವಿಚಾರ, ಪ್ರಶ್ನೆಗಳನ್ನು ಕಥೆಯಾಗಿಸಲು ಬಳಸುವ ಭಾಷೆಯ ಬಗ್ಗೆ ಇನ್ನಷ್ಟು ಗಮನ ನೀಡಿದರೆ, ತಮ್ಮ ಕಲ್ಪನೆಗೆ ಕಟ್ಟುಪಾಡುಗಳನ್ನು ವಿಧಿಸದೆ ಇದ್ದರೆ ಡಾ.ಜ್ಯೋತಿಯವರು ಕನ್ನಡದ ಉತ್ತಮ ಕಥೆಗಾರರಾಗುತ್ತಾರೆ ಅನಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಓ.ಎಲ್. ನಾಗಭೂಷಣ ಸ್ವಾಮಿ","brand":"BEETLE BOOK SHOP","offers":[{"title":"Default Title","offer_id":48214266904859,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/atthe-nimagondu-prashne-mattu-ithara-kathegalu-1689984.jpg?v=1767534005","url":"https:\/\/beetlebookshop.com\/kn\/products\/atthe-nimagondu-prashne-mattu-ithara-kathegalu","provider":"Beetle Book Shop","version":"1.0","type":"link"}