{"product_id":"attention-please","title":"ದಯವಿಟ್ಟು ಗಮನಿಸಿ","description":"ಅಂತರ್ಲಿಂಗಿ\/ಗ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ( ಟ್ರಾನ್ಸ್ ಜಂಡರ್ಸ್ ) ವ್ಯಕ್ತಿಗಳು \u003cbr data-mce-fragment=\"1\"\u003eನಿಮ್ಮ ಕುಟುಂಬ, ನೆರೆಹೊರೆ, ಸಂಬಂಧಿಕರು,ಶಾಲೆ -ಸಹಪಾಠಿ\u003cbr data-mce-fragment=\"1\"\u003eಸ್ನೇಹಿತರು, ಕೆಲಸದ ಸ್ಥಳಗಳು ಇನ್ನಿತರೆ ಸಾಮಾಜಿಕ ಸಂಸ್ಥೆ ಮತ್ತು ಸ್ಥಳಗಳಲ್ಲಿ ನಮ್ಮ ಲಿಂಗತ್ವ ಅಲ್ಪಸಂಖ್ಯಾತರರಿದ್ದರೂ ನಮ್ಮನ್ನು ಯಾರೂ ಗಮನಿಸುದೇ ಇಲ್ಲ. ಯಾರು ಎಷ್ಟೇ ಹಿಂಸೆ, ನೋವು ನಮಗೆ ಕೊಟ್ಟರೂ ನಗಣ್ಯವಾಗಿ ನೋಡುವವರು,ನಮ್ಮಿಂದ ಏನಾದರೂ ತಪ್ಪುಗಳದಾಗ ಮಾತ್ರ ಅದನ್ನು ವೈಭವಿಕರಿಸುತ್ತಾರೆ. ಹೀಗೇಕೆ?\u003cbr data-mce-fragment=\"1\"\u003eನಮಗೂ ನೋವು, ದುಃಖ, ಸಮಸ್ಯೆಗಳಿವೆ. ನಿಮ್ಮೊಂದಿಗೆ ಜೀವಿಸುತ್ತಿರುವ ನಮ್ಮ ಬಗ್ಗೆ \"ಅಟೆಂಷನ್ ಪ್ಲೀಸ್ \".\u003cbr data-mce-fragment=\"1\"\u003e\u003cbr data-mce-fragment=\"1\"\u003e ಈ ದೊಡ್ಡ ಸಮಾಜಕ್ಕೆ ನಮ್ಮ ಸಮುದಾಯದ ಕುರಿತು ಹಲವು ತಪ್ಪುಕಲ್ಪನೆಗಳು, ತಮ್ಮದೇಯಾದ ಪೂರ್ವಗ್ರಹಗಳು, ಅರಿವಿನ ಕೊರತೆ ಇರುವಿಕೆಯಿಂದಾಗಿ ಉಂಟಾಗಿರುವ ನಿಮ್ಮ-ನಮ್ಮ ನಡುವಿನ ಕಂದಕವನ್ನು ಮುಚ್ಚಲು \"ಅಟೆಂಷನ್ ಪ್ಲೀಸ್ \".\u003cbr data-mce-fragment=\"1\"\u003e\u003cbr data-mce-fragment=\"1\"\u003e ಹಸಿವು, ನಿದ್ರೆ ಮತ್ತು ಮೈಥುನಗಳು ನಮ್ಮ ದೈಹಿಕ ಬೆಳುವಣಿಗೆ ಮತ್ತು ಮಾನಸಿಕ ವಿಕಾಸಕ್ಕೆ ಅತ್ಯಾವಶ್ಯಕ ಎಂಬುವುದು ಕಟು ಸತ್ಯ. ಆದರೆ ಏಕೆ ಈ \"ಮೈಥುನ \"ದ ಸುತ್ತ ಮಡಿವಂತಿಕೆಯ ತಡೆಗೋಡೆಗಳು. ಇದು ಸರಿಯೋ ? ಅಥವಾ ತಪ್ಪೋ ?\u003cbr data-mce-fragment=\"1\"\u003eಸ್ವಲ್ಪ \"ಅಟೆಂಷನ್ ಪ್ಲೀಸ್ \".\u003cbr data-mce-fragment=\"1\"\u003e\u003cbr data-mce-fragment=\"1\"\u003e ಈ ಸಮಾಜದಲ್ಲಿ ನಾವೂ ಒಬ್ಬರಾಗಿ ಘನತೆ -ಗೌರವಗಳಿಂದ ಬದುಕಲು ನಮ್ಮ ಸಮುದಾಯ ಮಾಡುತ್ತಿರುವ ಅಸ್ತಿತ್ವದ ಪ್ರಯತ್ನಗಳು, ಎದುರಿಸುತ್ತಿರುವ ಸವಾಲುಗಳು, ತಿರಸ್ಕಾರ -ಬಹಿಸ್ಕಾರ -ಪುರಸ್ಕಾರಗಳ ನಡುವಿನ ಸೋಲು - ಗೆಲುವಿನ ಹೋರಾಟಗಳನ್ನು ವಿಮರ್ಶಿಸಲು \"ಅಟೆಂಷನ್ ಪ್ಲೀಸ್ \".\u003cbr data-mce-fragment=\"1\"\u003e\u003cbr data-mce-fragment=\"1\"\u003e ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಕುಟುಂಬಕ್ಕೆ ನಾವೇಕೆ ಬೇಡ? ಕುಟುಂಬದಲ್ಲಿ ಜಡ ವಸ್ತುವಾಗಿ, ಮೆಂಬರ್ ಅಲ್ಲದೇ ಬರೀ ನಂಬರ್ ಆಗಿ ನಾವೇಕೆ ಉಳಿದುಕೊಂಡಿದ್ದೀವಿ? ಕುಟುಂಬದ್ಲಲಿ ದೈಹಿಕ ಹಲ್ಲೆ ಏಕೆ? ಮಾನಸಿಕ ಹಿಂಸೆ ಏಕೆ? ಮರ್ಯಾದಾ ಆತ್ಮಹತ್ಯೆಗಳಿಗೆ ಯಾರ್ಯಾರು ಪ್ರೋತ್ಸಾಹಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳ ಉತ್ತರವೇ \"ಅಟೆಂಷನ್ ಪ್ಲೀಸ್ \".\u003cbr data-mce-fragment=\"1\"\u003e\u003cbr data-mce-fragment=\"1\"\u003e ನಮ್ಮ ಸಮುದಾಯದ ಕುರಿತು ಈ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳ ಇಚ್ಛಾಶಕ್ತಿಯನ್ನು ಒರೆಗಲ್ಲಿಗೆ ಹಚ್ಚಲು ಹಾಗೂ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾಯ್ದೆ -2005 ನಮ್ಮನ್ನು ಏಕೆ ಒಳಗೊಳ್ಳಬೇಕು? ಎಂಬುದರ ಸಮರ್ಥ ಸಂವಾದವೇ ಈ \"ಅಟೆಂಷನ್ ಪ್ಲೀಸ್ \"(ಲಿಂಗ -ಲಿಂಗತ್ವ -ಲೈಂಗಿಕತೆ )","brand":"BEETLE BOOK SHOP","offers":[{"title":"Default Title","offer_id":47363102540059,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/attention-please-7538385.png?v=1767536586","url":"https:\/\/beetlebookshop.com\/kn\/products\/attention-please","provider":"Beetle Book Shop","version":"1.0","type":"link"}