ಹೆಚ್ಚುವರಿ ಮಾಹಿತಿ
ವಿವರಣೆ
ಗಡಿ ದಾಟಿದ ಗುರು
ಎರಡು ಕಾರಣಗಳಿಗಾಗಿ ಬಹಳ ಬಹಳ ಮುಖ್ಯವಾದ ಕಾದಂಬರಿ ಇದು. ಮೊದಲನೆಯದು ಇಲ್ಲಿಯ ನಿರ್ಲಿಪ್ತತೆ,
ಎರಡನೆಯದು ಇಲ್ಲಿಯ ಸ್ವ-ವಿಮರ್ಶೆ, ಕನ್ನಡ ಸಾಹಿತ್ಯಲೋಕದ ಒಳ-ಹೊರಗೆ ಗಟ್ಟಿದನಿಯಲ್ಲಿ, ದಿಟ್ಟತನದಲ್ಲಿ ಆರಂಭಗೊಂಡ ದಲಿತ ಸಾಹಿತ್ಯ ಕೆಲವೇ ವರ್ಷಗಳಲ್ಲಿ ಆತ್ಮಕಥನಗಳ ದಾರಿಗೆ ಹೊರಳಿಕೊಂಡಾಗ ಸಕಲೆಂಟು ವೇದನೆಗಳ ಭಾವಪೂರ್ಣ ನಿವೇದನೆಯ ಜಾಡಿನಿಂದ ಇದು ಹೇಗೆ ತಪ್ಪಿಸಿಕೊಳ್ಳುತ್ತದೆ ಎಂಬ ಪ್ರಶ್ನೆ ಮತ್ತು ಕುತೂಹಲ ಸಾಹಿತ್ಯದ ಓರ್ವ ವಿದ್ಯಾರ್ಥಿಯಾಗಿ ನನ್ನದಾಗಿತ್ತು. ಗುರುಪ್ರಸಾದ್ ಕಂಟಲಗೆರೆಯವರ : ಈ ಕಿರು ಕಾದಂಬರಿ ಉತ್ತರವಾಗಿಯೂ ಮತ್ತು ಕನ್ನಡ ದಲಿತ ಸಾಹಿತ್ಯದ ಬಗ್ಗೆ ಬಹಳ ದೊಡ್ಡ ಭರವಸೆಯಾಗಿಯೂ ಮೂಡಿ ಬಂದಿದೆ. ಸಮುದಾಯದ ಸಂಕೀರ್ಣ ಜೀವನಾನುಭವಗಳನ್ನು ಉಪಮೆ-ರೂಪಕಾದಿ ಯಾವ ಸಾಹಿತ್ಯ ಪರಿಕರಗಳಿಂದಲೂ ನೇವರಿಸದೆ ಬದುಕಿನ ತೀವ್ರತೆಯನ್ನು ಮುಟ್ಟಿಮುಟ್ಟಿ ಮಾತಾಡಿಸುವಂಥ ಕೃತಿ ಇದು, ಶಾಸ್ತ್ರಗಳ, ನಿಯಮ-ನಿಬಂಧನೆಗಳ, ಸಿದ್ಧಾಂತಗಳ ಚೌಕಟ್ಟುಗಳನ್ನು ಮೆತ್ತಗೆ ಹರಿದು, ತನ್ನನ್ನು ತಾನೇ ನೋಡುವಂತೆ ಒತ್ತಾಯಿಸುವ ಈ ಕೃತಿಯನ್ನು, ಗಾತ್ರದ ಕಾರಣಕ್ಕಷ್ಟೇ ಕಿರು ಕಾದಂಬರಿ ಎಂದು ಪರಿಭಾವಿಸಬೇಕೇ ಹೊರತು ಇದರ ಆಳ-ಅಳವು ಬೇರೆಯೇ ಇದೆ. ತಮ್ಮ ಈ ಕಾದಂಬರಿಯಲ್ಲಿ ಗುರು, ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳೆಲ್ಲವನ್ನೂ ಅತ್ಯಂತ ತೀಕ್ಷ್ಯವಾಗಿ ನೋಡುತ್ತಿದ್ದಾರೆ ಎಂಬುದೇ ಅತ್ಯಂತ ಪ್ರಮುಖವಾದ ಅಂಶ. ಈ ತೀಕ್ಷ್ಯತೆ, ಈ ನಿರ್ಲಿಪ್ತತೆ, ಈ ಸ್ವ-ವಿಮರ್ಶೆ ಕನ್ನಡದ ಕಾದಂಬರಿ ಲೋಕದಲ್ಲಿ ಮೊದಲು ದರ್ಶನವಾದದ್ದೇ ಶ್ರೀ ಕುವೆಂಪು ಅವರ ಮಲೆಗಳಲ್ಲಿ ಮದುಮಗಳುವಿನಲ್ಲಿ, ದಲಿತ ಲೋಕದ 'ಮದುಮಗಳ' ಹುಟ್ಟಿಗೆ ಕಾರಣವಾಗುವಂತಹ ಬೀಜದ ಗುಣವಷ್ಟೇ ಅಲ್ಲ, ಸ್ವತಃ ಬೀಜವೇ ಈ ಕಾದಂಬರಿಯಲ್ಲಿದೆ. ತನ್ನವರ ಬದುಕನ್ನು ದಿಟ್ಟಿಸಿ ಮತ್ತು ಧ್ಯಾನಿಸಿ ನೋಡುವ ಹರಿತ ಕಣ್ಣುಗಳಿರುವ ಗುರು ಈ ಕಾದಂಬರಿಯಲ್ಲಿ ಅನೇಕ ಬಗೆಯ ಗಡಿಗಳನ್ನು ಏಕಕಾಲಕ್ಕೆ ದಾಟಿದ್ದಾರೆ. ಆ ಗಡಿಗಳು ಯಾವುವು ಎಂಬುದನ್ನು ಓದುಗರು ಗುರುತಿಸಿದರೆ ಗುರು ಮಾಡಿರುವ ಈ ಅ-ಸಮ ಸಾಹಸ ಎಷ್ಟು ಉನ್ನತವಾದುದು ಎಂಬುದು ಮನವರಿಕೆಯಾದೀತು. ಆತ್ಮವೃತ್ತಾಂತವನ್ನು ನಿರಾಯಾಸವಾಗಿ ಕಥಿಸುವ ರುಚಿಕಟ್ಟಾದ ನಿರೂಪಣೆಗಿಂತ ಆತ್ಮವಿಮರ್ಶೆಯ ಕಡುಕಷ್ಟದ ದಾರಿಯನ್ನು ಬಯಸಿ ಬಯಸಿ ಆರಿಸಿಕೊಂಡಿರುವ ಗುರು ಈ ಕಾದಂಬರಿಯನ್ನು ಇನ್ನಷ್ಟು ವಿಸ್ತರಿಸಬೇಕೆಂಬುದು ನನ್ನ ಪ್ರೀತಿಯ ಆಗ್ರಹ.
ನಿತ್ಯಾನಂದ ಬಿ ಶೆಟ್ಟಿ ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.