{"product_id":"ardhanareeshwara-novel","title":"ಅರ್ಧನಾರೀಶ್ವರ (ಕಾದಂಬರಿ) - ಅರ್ಧನಾರೀಶ್ವರ (ಕಾದಂಬರಿ)","description":"\u003cp\u003eಪೆರುಮಾಳ್ ಮುರುಗನ್ ಅವರು ತಮಿಳು ಭಾಷೆಯಲ್ಲಿ ಬರೆದ ಕಾದಂಬರಿಯನ್ನು ಲೇಖಕ ಕೆ.ನಲ್ಲತಂಬಿ ಅವರು ಅರ್ಧನಾರೀಶ್ವರ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ತುಂಬಾ ವಿವಾದ ಸೃಷ್ಟಿಸಿದ ಕಾದಂಬರಿ ಇದು. ಕಾಳಿ-ಪೊನ್ನ ಎಂಬ ದಂಪತಿಗೆ ಮಕ್ಕಳಾಗಲಿಲ್ಲ ಎಂಬುದು ಹಾಗೂ ಅದೇ ಬಹುದೊಡ್ಡ ವಿಷಯವಾಗಿ ಕಾದಂಬರಿಯೊಂದನ್ನು ನಡೆಸಿಕೊಂಡು ಹೋಗುವ ರಭಸ ಈ ಕೃತಿಯ ಗಟ್ಟಿತನವಾಗಿದೆ.\u003c\/p\u003e\n\u003cp\u003eನಿಯೋಗ ಪದ್ಧತಿ ಎಂಬುದು ಪುರಾಣದ ಕಥೆಗಳಲ್ಲಿ ಹೊಸದಲ್ಲ. ಆದರೆ, ಈ ಪದ್ಧತಿಯನ್ನು ಸಾಮಾಜಿಕವಾಗಿ ಬಹಿರಂಗ ಒಪ್ಪಿಗೆಗೆ ವಿರೋಧವೇ ಇದೆ. ಪತಿಯಿಂದ ಮಕ್ಕಳಾಗದಿದ್ದರೆ ಆ ಹೆಣ್ಣು ತನಗಿಷ್ಟವಾದ ಗಂಡಿನೊಂದಿಗೆ ಕೂಡಬಹುದು ಎಂಬುದು ನಿಯೋಗ ಪದ್ಧತಿಯ ಮೂಲ ಅಂಶ. ಪ್ರಸ್ತುತ ಸಂದರ್ಭದಲ್ಲಿ, ಈ ನಿಯೋಗ ಪದ್ಧತಿಯ ನಿಯಮಗಳು ಜಾತಿ, ಲಿಂಗ, ಪಿತೃಪ್ರಧಾನ ವ್ಯವಸ್ಥೆ ಇತ್ಯಾದಿ ಹಿನ್ನೆಲೆಯಲ್ಲಿ ಹೇಗೆ ತೊಡಕಾಗುತ್ತವೆ ಎಂಬುದೂ ಈ ಕಾದಂಬರಿಯ ಗಮನಾರ್ಹ ಅಂಶ. ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಈ ಕಾದಂಬರಿ ಹುಟ್ಟು ಹಾಕುತ್ತಿದೆ. \u003c\/p\u003e","brand":"BEETLE BOOK SHOP","offers":[{"title":"Default Title","offer_id":51732280279323,"sku":null,"price":135.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ardhanareeshwara-novelbeetle-book-shop-5519464.png?v=1770470828","url":"https:\/\/beetlebookshop.com\/kn\/products\/ardhanareeshwara-novel","provider":"Beetle Book Shop","version":"1.0","type":"link"}