{"product_id":"appana-autograph","title":"ಅಪ್ಪನ ಆಟೋಗ್ರಾಫ್ | Appana Autograph","description":"\u003cp\u003eಅಪ್ಪನ ಆಟೋಗ್ರಾಫ್\u003c\/p\u003e\n\u003cdiv class=\"product__description rte quick-add-hidden\"\u003e\n\u003cp\u003eಈ ವಿಷಯಗಳು ನನ್ನಲ್ಲೂ ಇದ್ದವಲ್ಲಾ? ನಾನೂ ಬರೆಯಬಹುದಿತ್ತಲ್ವಾ? ಅಂತ ಯಾರಿಗಾದರೂ ಅನಿಸುವಂತಹ ಬರಹಗಳನ್ನೊಳಗೊಂಡ ಪುಸ್ತಕ ಈ ಅಪ್ಪನ ಆಟೋಗ್ರಾಫ್. ಆದರೆ ಎಲ್ಲರೂ ಬರೆಯಲಾಗುವುದಿಲ್ಲವಲ್ಲ! ಆದ್ದರಿಂದ ಈ ಬರಹಗಳು ಬರೆಯಲಾಗದವರ ಧ್ವನಿಯಾಗುತ್ತವೆ ಮತ್ತು ಓದುವವರ ಬದುಕಾಗುತ್ತವೆ. ಈ ಕೃತಿಯ ಹೆಚ್ಚುಗಾರಿಕೆಯೇ ಅದು. ಅಲ್ಲಲ್ಲಿ ಮೊಟಿವೇಶನಲ್ ಪುಸ್ತಕಗಳನ್ನು ನೆನಪಿಸುತ್ತವೆಯಾದರೂ ಅವುಗಳಂತೆ ಅಸಾಮಾನ್ಯ ಸಂಗತಿಗಳನ್ನು ಹೇಳುವುದಿಲ್ಲ. ಹೆಬ್ಬೆಟ್ಟಿನ ಅಮ್ಮ ಸಹಿ ಮಾಡಲು ಕಲಿತದ್ದು, ಮೊಬೈಲ್ ಹಿಡಿದು ಫೋನ್ ಮಾಡಲು ಕಲಿತದ್ದು ತರಹದ ಪುಟ್ಟಪುಟ್ಟ ಪ್ರಸಂಗಗಳ ಮೂಲಕ ಈ ಕೃತಿ ಉಂಟುಮಾಡುವ ಸ್ಫೂರ್ತಿ ತುಂಬಾ ದೊಡ್ಡದು. ಭಾವುಕ ಬರಹಗಳ ಜೊತೆಗೊಂದಷ್ಟು ಪ್ರಚೋದನಾಕಾರಿ ಮತ್ತು ಮಾಹಿತಿಯುಕ್ತ ಲೇಖನಗಳೂ ಇಲ್ಲಿವೆ. ಈ ಪುಸ್ತಕದ ಬಿಡಿಬಿಡಿ ಬರಹಗಳು, ಬೇರೆ ಬೇರೆ ವಿಷಯಗಳನ್ನು ಓದುವಾಗಲೇ ಲೇಖಕನ ವಯಸ್ಸು ಅಂದಾಜಿಗೆ ಸಿಕ್ಕಿಬಿಡುತ್ತದೆ. ನನ್ನಂತಹ ಅರ್ಧ ಆಯಸ್ಸು ಕಂಡವರಿಗೆ ಈ ಬರಹಗಳು ಅಚ್ಚರಿಯಾಗಿಯೂ, ಪ್ರಶ್ನೆಯಾಗಿಯೂ, ಸುಲಭವಾಗಿಯೂ ಒಳಗಿಳಿದರೆ ಈಗಷ್ಟೇ ಪ್ರಪಂಚ ನೋಡಲಾರಂಭಿಸಿದವರಿಗೆ ಮಾರ್ಗಸೂಚಿಯಂತೆ ಕೈ ಹಿಡಿಯಬಹುದು.\u003c\/p\u003e\n\u003cp\u003eಈ ಕೃತಿ ಓದುವ ಸುಖ ನಿಮ್ಮದಾಗಲಿ..\u003cbr\u003e-ವೀರಕಪುತ್ರ ಶ್ರೀನಿವಾಸ\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":50029555843355,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/appana-autograph-9876897.jpg?v=1767529627","url":"https:\/\/beetlebookshop.com\/kn\/products\/appana-autograph","provider":"Beetle Book Shop","version":"1.0","type":"link"}