ಹೆಚ್ಚುವರಿ ಮಾಹಿತಿ
ವಿವರಣೆ
'ಅಪ್ಪ ನಾನು ಕಂಡಂತೆ' ಎಚ್.ಎಸ್.ಮುಕ್ತಾಯಕ್ಕನವರ ಹೊಸ ಪುಸ್ತಕವಿದು. ಈ ಕೃತಿಯಲ್ಲಿ ಶಾಂತರಸರ ನೆನಪುಗಳನ್ನು ಮೊಗೆ ಮೊಗೆದು ಕೊಟ್ಟಿದ್ದಾರೆ. ಈ ಅಪರೂಪದ ಕೃತಿಯನ್ನು 'ಸಂಗಾತ ಪುಸ್ತಕ' ಪ್ರಕಟಿಸುತ್ತಿದೆ. ಈಗಾಗಲೇ ಮುದ್ರಣಕ್ಕೆ ಹೋಗಿದ್ದು, ಈ ವಾರದೊಳಗೆ ನಿಮ್ಮೆ ಕೈ ಸೇರಲಿದೆ. ಆಸಕ್ತರು ಮುಂಗಡವಾಗಿ ಕಾಯ್ದಿರಿಸಿರಿ.
ನಾವು ಈವರೆಗೂ ಶಾಂತರಸರ ಕವಿತೆ, ಬರಹ, ಭಾಷಣಗಳ ಮೂಲಕ ಅವರ ವ್ಯಕ್ತಿತ್ವವನ್ನು ಗಮನಿಸಿದ್ದೇವೆ. ಆದರೆ, ಮುಕ್ತಾಯಕ್ಕನವರು ಮಾತ್ರ ಬರೆಯಬಹುದಾದ, ನಮಗೆ ಅಪರಿಚಿತವಾದ ಅಪರೂಪದ ನೂರಾರು ಖಾಸಗಿ ನೆನಪುಗಳನ್ನು ಇದರಲ್ಲಿ ದಾಖಲಿಸಿದ್ದಾರೆ. ಸೋಜಿಗವೆಂದರೆ ಅವು ಖಾಸಗಿ ನೆನಪುಗಳಾಗಿದ್ದರೂ ಶಾಂತರಸರ ಸಾಹಿತ್ಯಕ ವ್ಯಕ್ತಿತ್ವ ನಿರ್ಮಾಣಗೊಂಡ ಬಗೆ, ಆ ಕಾಲಘಟ್ಟದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಗಳ ಜನ ಜೀವನ, ಕುಟುಂಬ ಸಂರಚನೆ, ಸಾಮಾಜಿಕ ಚಿತ್ರಣಗಳ ಜೊತೆಗೆ ಆ ಕಾಲದ ಒಂದು ಮನೋಭಿತ್ತಿಯನ್ನು ನಮ್ಮ ಗ್ರಹಿಕೆಗೆ ನಿಲುಕುವ ಹಾಗೆ ಮಾಡುತ್ತವೆ.
ಮುಕ್ತಾಯಕ್ಕನವರು ಗಜಲ್ಗಳನ್ನು ಆರ್ಧವಾಗಿ, ತೀವ್ರವಾಗಿ ಬರೆಯುವದು ಅವರನ್ನು ಓದಿದ ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಗದ್ಯವನ್ನು ಕೂಡ ಅಷ್ಟೇ ಸೊಗಸಾಗಿ ಬರೆಯಬಲ್ಲರು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಅವರ ಇಲ್ಲಿನ ಬರಹಗಳಿಗೆ ಮಾಂತ್ರಿಕ ಗುಣವಿದೆ. ಒಂದು ಲಯವಿದೆ. ರೂಪಕಗಳು ಸಹಜವಾಗಿ ಹೂ ಅರಳಿದಂತಿವೆ. ತಮ್ಮ ಅನುಭವಗಳು ಎಲ್ಲೂ ಮುಕ್ಕಾಗದಂತೆ ಚಿತ್ರಿಸುವ ಕುಶರಿತನವಿದೆ. ಗದ್ಯಕಾವ್ಯದಂತೆ ನಮ್ಮನ್ನು ಓದಿಸಿಕೊಳ್ಳುತ್ತವೆ. ಆವರಿಸಿಕೊಳ್ಳುತ್ತವೆ. ಹನಿಗಣ್ಣಾಗಿಸುತ್ತವೆ. ಏಕಕಾಲದಲ್ಲಿ ವಿಷಾದವನ್ನೂ, ಕಚಗುಳಿಯನ್ನೂ, ಜೀವನದ ಹೊಸದೇ ನೋಟ, ಕಾಣ್ಕೆಯ ದರ್ಶನವನ್ನೂ ಮಾಡಿಸುತ್ತವೆ.
ಅಪ್ಪ ನಾನು ಕಂಡಂತೆ
(ಶಾಂತರಸರ ನೆನಪುಗಳು)
ಲೇಖಕರು : ಎಚ್.ಎಸ್.ಮುಕ್ತಾಯಕ್ಕ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್ನಿಂದ ಎಕ್ಸ್ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.