{"product_id":"appa-kaaneyaagiddaane","title":"My father is missing.","description":"\u003cp\u003eಲೇಖಕರು : ಬೇಲೂರು ರಘುನಂದನ್\u003c\/p\u003e\n\u003cp\u003eಅಹಮ್ಮಿಗೆ ಕೊಳ್ಳುವುದಷ್ಟೇ ಗೊತ್ತು, ಪ್ರೀತಿಗೆ ಕೊಡುವುದಷ್ಟೇ ಗೊತ್ತು ಮರ ಒಗೆದೆಸೆದ\u003c\/p\u003e\n\u003cp\u003eಹಣ್ಣುಗಳ ಜೊತೆಗೆ ಜಗತ್ತು ವ್ಯವಹಾರಕ್ಕೆ ಇಳಿದ ಹೊತ್ತಿನಿಂದ ಇದು ಒಳಗಿನ ಮನುಷ್ಯ\u003c\/p\u003e\n\u003cp\u003eಸಂಬಂಧದ ಜೊತೆಗಿನ ಸಂಘರ್ಷವೂ ಹೌದು. ಆರ್ದವಾಗುವ ಭಾವಗಳು ನೆಲೆಯಿಲ್ಲದಂತೆ\u003c\/p\u003e\n\u003cp\u003eಅಲೆಯುವಾಗ ಹೇಳಲೇ ಆಗದ ಸಂಗತಿಗಳಿಗೆ ತನ್ನ ಹೃದಯದಲ್ಲಿ ಕೋಣೆಗಳನ್ನು\u003c\/p\u003e\n\u003cp\u003eನಿರ್ಮಿಸಿಕೊಳ್ಳುತ್ತವೆ. ಅದಕ್ಕೆ ಅನುಭವಜನ್ಯವಾದ ಸಂಗತಿಗಳನ್ನು ದೊಡ್ಡದು ಎಂದು\u003c\/p\u003e\n\u003cp\u003eಹೇಳುವುದು ಬೇಕಾಗಿದೆ. ಒಳಗಿನ ತಲ್ಲಣಗಳು ಹೊರಗಿನ ಸಂಗತಿಗಳನ್ನು ರೂಪಿಸುತ್ತದೆ ಎನ್ನುವ\u003c\/p\u003e\n\u003cp\u003eಭ್ರಮೆಯಿಲ್ಲ, ಆದರೆ ಹೊರಗಿನ ಸಂಗತಿಗಳಿಗೆ ಒಳಗಿನ ಮನಸ್ಸು ತಲ್ಲಣಿಸುತ್ತದೆ. ಕಳೆದದ್ದು\u003c\/p\u003e\n\u003cp\u003eಯಾವುದು ಎಂದರೆ ಎದೆಯೊಳಗೆ ಎಂದೂ ಜಾರದೇ ಉಳಿಯಬಯಸುವ ಸೌಖ್ಯಭಾವ, ಮರ\u003c\/p\u003e\n\u003cp\u003eಗಿಡ, ಕಾಡು ಕೆರೆಗಳ ಜೊತೆ ಮಾತಾಡುವ ಹುಡುಗನಿಗೆ ಹಂಡೆಯ ಒಲೆಯ ಜೊತೆ\u003c\/p\u003e\n\u003cp\u003eಮಾತಾಡುದ ಹೆಣ್ಣೂಬ್ಬಳ ಜಗತ್ತು ಇದಾಗಿರುತ್ತೆ ಎನ್ನುವುದು ತಿಳಿಯುವುದು ಕಷ್ಟವೂ ಅಲ್ಲ,\u003c\/p\u003e\n\u003cp\u003eಅಪ್ರಜ್ಞಾಪೂರ್ವಕವೂ ಅಲ್ಲ. ತಾಯಿ ಎನ್ನುವ ವಾಸ್ತವವನ್ನು ಹಿಡಿಯಲೆಳೆಸುವ ರಘುನಂದನ್ಗೆ\u003c\/p\u003e\n\u003cp\u003eಅವಳ ಸೆರಗಿನಿಂದಳೆದ ಸಣ್ಣ ನೂಲು ತಾನು ಎನ್ನುವ ಕೃತಜ್ಞತೆಯೂ ಇದೆ. ಇದು ಈ ಸಂಕಲನದ\u003c\/p\u003e\n\u003cp\u003eಎಲ್ಲ ಕತೆಗಳ ಜೀವಸತ್ವ.\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಏಡಿ ಅಮ್ಮಯ್ಯ ಕಥೆಯ ಜೊತೆಗೆ ಸೇರಿ ಹೌಸ್ ಥರದ ಇವತ್ತಿನ ಕಥೆಯನ್ನೂ, ಗಿಡವೊಂದು\u003c\/p\u003e\n\u003cp\u003eಮರವಾದ ಕಥೆಯಲ್ಲಿ ಶಿಕ್ಷಣದ ದಿಕ್ಕುಗಳನ್ನೂ ಮುಲ್ಲಾ ಸಾಹೇಬ್ ಮತ್ತು ಪಾಂಡುರಂಗ\u003c\/p\u003e\n\u003cp\u003eಕಥೆಯಲ್ಲಿ ಧರ್ಮಯುದ್ಧಗಳನ್ನು ಮೀರಿದ ಮಾನವ ಸ್ಥಿತಿಯನ್ನು ಸಂಬಂಧಗಳ ಬಂಧಕ್ಕೆ ತಂದು\u003c\/p\u003e\n\u003cp\u003eಕೂರಿಸುತ್ತಾರೆ. ಪುರಾಣವೂ, ವಾಸ್ತವವೂ ಆಗುವ ಇಲ್ಲಿನ ಕಥೆಗಳು ಕಾಡುಹಣ್ಣುಗಳಿಂದ ನಾಡಿನ\u003c\/p\u003e\n\u003cp\u003eಹಣ್ಣಿನ ಕಡೆಗೂ ವಾಲಿದಂತೆ, ನಾಗರಿಕತೆಯ ನಯನಾಜೂಕುಗಳನ್ನು ತಿರಸ್ಕರಿಸುವ ನಿರ್ದಿಷ್ಟ\u003c\/p\u003e\n\u003cp\u003eಪಯಣವನ್ನು ದಾಖಲಿಸುತ್ತವೆ. ಇದು ರಘುನಂದನ್ರ ಮೊದಲ ಕಥಾ ಸಂಕಲನ. ಆದರೆ ಕಥೆ\u003c\/p\u003e\n\u003cp\u003eಹೇಳುವುದು ಇವರಿಗೆ ಮೊದಲನೆಯದಲ್ಲ. ಭಿನ್ನವಾದ ಪ್ರಕಾರದಲ್ಲಿ ಕಥೆ ಹೇಳುವ ಪ್ರಯತ್ನವನ್ನು\u003c\/p\u003e\n\u003cp\u003eಇಲ್ಲಿ ಮಾಡಿದ್ದಾರೆ. ಬೇಲೂರು ರಘುನಂದನ್ ಅವರ ಕಥನ ಜಗತ್ತು ತನ್ನದೇ ಆದ ಅನನ್ಯ\u003c\/p\u003e\n\u003cp\u003eನೆಲೆಯಲ್ಲಿ ಕನ್ನಡ ಕಥಾಲೋಕವನ್ನು ವಿಸ್ತರಿಸಿದೆ. ಈ ಕಥೆಗಳು ತಮ್ಮ ದಟ್ಟವಾದ ವಿವರಗಳಲ್ಲಿ\u003c\/p\u003e\n\u003cp\u003eಓದುಗನನ್ನು ಪರಿಣಾಮಕಾರಿಯಾಗಿ ತಲುಪುತ್ತವೆ ಎಂದರೆ ಅತಿತಯೋಕ್ತಿಯಲ್ಲ.\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003eಪಿ. ಚಂದ್ರಿಕಾ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":44464787489051,"sku":"","price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/appa-kaaneyaagiddaane-5446251.png?v=1767536289","url":"https:\/\/beetlebookshop.com\/kn\/products\/appa-kaaneyaagiddaane","provider":"Beetle Book Shop","version":"1.0","type":"link"}