ಹೆಚ್ಚುವರಿ ಮಾಹಿತಿ
ವಿವರಣೆ
ಅಲ್ಲಮನ ವಚನಗಳ ನಿರ್ವಚನ ಇಲ್ಲಿದೆ. ಬೆರಗಿನ ಆಗರವಾಗಿ, ಬೆಡಗಿನ ಖಜಾನೆಯಾಗಿ, ಪಾಂಡಿತ್ಯಕ್ಕೆ ಸವಾಲಾಗಿರುವ ಅಲ್ಲಮನ ವಚನಗಳ ನಿರ್ವಚನ ಇಲ್ಲಿದೆ. ವಚನಕಾರರಲ್ಲಿ ನಮ್ಮ ತನುವನ್ನಲ್ಲಾಡಿಸಿ, ಮನವನ್ನಲ್ಲಾಡಿಸಿ ನೋಡುವ ವಚನಕಾರನೆಂದರೆ ಅಲ್ಲಮನೊಬ್ಬನೇ. ಆತನ ವಚನಗಳು ಅನನ್ಯ. ಅಲ್ಲಮ ಸುಲಭವಾಗಿ ಅರ್ಥವಾಗದಿದ್ದರೂ ಆತ್ಮೀಯ ಓದುಗರು ಒಂದು ಸಲ ಓದಿದರೆ ಸಾಕು ಮತ್ತೆ ಮತ್ತೆ ಕಾಡುವ ವಚನಕಾರ. ಅವನ ವಚನಗಳ ಕಾಡಿನಲ್ಲಿ ಒಮ್ಮೆ ಹೊಕ್ಕರೆ ಸಾಕು ತಪ್ಪಿಸಿಕೊಂಡು ಆಚೆ ಬರುವುದು ಕಷ್ಟ. ಬಸವಣ್ಣ, ಅಕ್ಕಮಹಾದೇವಿಯವರಂತೆ ಅವನು ಅರ್ಥವನ್ನು ಬಿಟ್ಟುಕೊಡುವುದಿಲ್ಲ. ನಮ್ಮನ್ನೂ ಬಿಡುವುದಿಲ್ಲ. ನನ್ನ ಪ್ರಕಾರ ಅವನ ವಚನಗಳಿಗೆ ದಾರ್ಶನಿಕ, ಸಾಮಾಜಿಕ ಅಥವಾ ಸಾಹಿತ್ಯಕ ತಾತ್ಪರ್ಯ ಅಸಾಧ್ಯ ಮತ್ತು ಅಸಾಧು. ಆದರೆ ತಮ್ಮ ತಮ್ಮ ಮಜಲಿನಲ್ಲಿ ತಮ್ಮ ಅನುಭವದ ತಿಳುವಳಿಕೆಯ ಸಂದರ್ಭದೊಳಗಿಟ್ಟು ಅಲ್ಲಮನನ್ನು ಅರ್ಥಮಾಡಿಕೊಳ್ಳುವ ಶಿವಕುಮಾರರವರ ಪ್ರಯತ್ನ ಸ್ವಾಗತಾರ್ಹ.
"ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮರೆಯೆ?" ಇದು ಅಲ್ಲಮನದೇ ಮಾತು. ಆದರೆ ಸಾಮಾನ್ಯರಾದ ನಮಗೆ ಕೊಡೆಗಳನ್ನು ಬಿಟ್ಟು ನೇರವಾಗಿ ಸಿಡಿಲಿಗೆ ಎದೆಯೊಡ್ದುವುದು ಸಾಧ್ಯವಿಲ್ಲ. ಅಲ್ಲಮನೆಂಬ ಸಿಡಿಲನ್ನು ಎದುರುಗೊಳ್ಳುವುದಕ್ಕೆ ಮೊದಲ ಹಂತವಾದ ಸಾಮಾನ್ಯ ತಿಳುವಳಿಕೆಯ ಅರ್ಥ ವಿವರಣೆಯನ್ನು ಶಿವಕುಮಾರರವರು ನೀಡಿದ್ದಾರೆ.
ಮುನ್ನುಡಿಯಲ್ಲಿ
ಎಚ್ ಎಸ್ ಶಿವಪ್ರಕಾಶ್
ಕವಿ, ನಾಟಕಕಾರ, ಚಿಂತಕರು.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.