{"product_id":"allama-kathana","title":"ಅಲ್ಲಮ ಕಥನ","description":"\u003cp\u003eಅಲ್ಲಮ ಪ್ರಭುರಾಯ ಆಕಾಶ, ಪ್ರಕಾಶ ಶರೀರಧಾರಿ, ಅವನ ಮಾತು ಜ್ಯೋತಿರ್ಲಿಂಗ, ಅವನು ನಡೆದಾಡಿದರೆ ಹೆಜ್ಜೆ ಮೂಡದ ದಾರಿ. ಅವನು ಭೂಲೋಕಕ್ಕೆ ಅವತರಿಸಿದ ಗುರು ಎಂಬ ಮಾತು ಸತ್ಯ\u003c\/p\u003e\n\u003cp\u003e- ದ.ರಾ.ಬೇಂದ್ರೆ\u003c\/p\u003e\n\u003cp\u003eಜೀವನದ ಉನ್ನತೋನ್ನತ ಆದರ್ಶವನ್ನು, ಧರ್ಮದ ನಿತ್ಯ ನಿರ್ಮಲ ಸ್ವರೂಪವನ್ನು ಅರಸಿದವನು ಅಲ್ಲಮಪ್ರಭು. ಸೀಮಾತೀತವಾದದ್ದು ಅವನ ಧರ್ಮ. ಎಲ್ಲ ಧರ್ಮಮಾರ್ಗಗಳ ಆಧ್ಯಾತ್ಮಿಕ ಬೆಲೆಯನ್ನವನು ಅರಿತುಕೊಂಡಿದ್ದ. ಧರ್ಮಕ್ಕೆ ವಿಶಾಲವಾದ, ವಿಶ್ವತೋಮುಖವಾದ ಅರ್ಥವನ್ನು ಕೊಡುವುದಕ್ಕೆ ಅಲ್ಲಮ ತನ್ನ ಬಾಳನ್ನು ನಿವೇದಿಸಿದ.\u003c\/p\u003e\n\u003cp\u003e- - ಅ.ನ.ಕೃಷ್ಣರಾಯ\u003c\/p\u003e\n\u003cp\u003eಕರ್ನಾಟಕದ ಮಹತ್ಸಾಧನೆಯ ಇತಿಹಾಸದಲ್ಲಿ ಅಲ್ಲಮನ ಹೆಸರು ದೊಡ್ಡದು. ವ್ಯಕ್ತಿತ್ವದ ಮಿತವಲಯವನ್ನು ಮೀರಿನಿಂತು ಯಾವ ಸಂಪ್ರದಾಯದ ಕಟ್ಟಿಗೂ ಸಿಕ್ಕದೆ. - ಮಾನವತೆಯು ಸಾಧಿಸಬಹುದಾದ ಅತ್ಯುನ್ನತ ನಿಲವನ್ನು ಸಹಜಸ್ಥಿತಿಯಾಗಿ ಅಳವಡಿಸಿಕೊಂಡು ಅದನ್ನು ಜಗತ್ಕಲ್ಯಾಣಕ್ಕಾಗಿ ಸಾರಿದವನು ಅಲ್ಲಮಪ್ರಭು.\u003c\/p\u003e\n\u003cp\u003e–ಎಚ್. ತಿಪ್ಪೇರುದ್ರಸ್ವಾಮಿ\u003c\/p\u003e\n\u003cp\u003eಅಲ್ಲಮ ಅನಂತ ವಿಶ್ವದ ಅಧ್ಯಾತ್ಮ ಹೇಳಿದ. ಅದು ಇಲ್ಲವಾಗುವ ಪೂರ್ಣ ಬಯಲು. ವೇದಗಳನ್ನು ಓದಿದ ಬಳಿಕ ಹೆಜ್ಜೆ ಉಳಿಸಬಾರದು ಎಂಬ ಅರಿವು ಬರುತ್ತದಲ್ಲ? ಇಂಥದೊಂದು ಹೆಜ್ಜೆ ಉಳಿಸಲಾರದ ಬಟಾಬಯಲು. ಅವನು ಎಲ್ಲಿದ್ದಾನೆ ಎಂದರೆ ಎಲ್ಲಿಯೂ ಇಲ್ಲ. ಯಾಕೆಂದರೆ: ಆ ತತ್ವ ವಿಶ್ವತೋಮುಖ ಬಯಲು. ತನ್ನನ್ನು ಬಯಲು ಎಂದವ ಎಲ್ಲಿ ಇರುವುದಿಲ್ಲ ಹೇಳಿ? ನಾವು ಮುಟ್ಟಲಿಕ್ಕಿರುವುದು ಆ ಅನಂತವನ್ನು, ಅಲ್ಲಮ ಸೇರಿದ್ದು, ತೋರಿದ್ದು ಅನಂತವನ್ನೇ.\u003c\/p\u003e\n\u003cp\u003eವೀಣಾ ಬನ್ನಂಜೆ\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51374782578971,"sku":null,"price":535.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/allama-kathana-2907464.jpg?v=1767528247","url":"https:\/\/beetlebookshop.com\/kn\/products\/allama-kathana","provider":"Beetle Book Shop","version":"1.0","type":"link"}