{"product_id":"albert-camus-taruna-vachike","title":"ಆಲ್ಬರ್ಟ್ ಕಾಮು : ತರುಣ ವಾಚಿಕೆ","description":"\u003cp\u003eಅಲ್ಬೆ ಕಮೂ ತರುಣ ವಾಚಿಕೆ\u003cbr\u003eಕೇಶವ ಮಳಗಿ\u003c\/p\u003e\n\u003cp\u003eಕಮೂ ವಿಶ್ವದ ತರುಣರ ಪಾಲಿಗೆ ಎಲ್ಲ ಕಾಲದ ಅಚ್ಚುಮೆಚ್ಚಿನ ಲೇಖಕ. ಅವನಂತೆ ಬರೆಯುವ ಕನಸು ಕಂಡ ಯುವಬರಹಗಾರರ ಸಂಖ್ಯೆ ನಕ್ಷತ್ರಗಳಷ್ಟು. ಪ್ರತಿ ಕ್ಷಣವೂ ಈಗಲೇ ಸಾಯುತ್ತೇನೆ ಎಂಬಂತೆ ಬದುಕಿದ ಕಮೂ, ಬರೆದ ಪ್ರತಿ ಸಾಲು ಅರ್ಥಪೂರ್ಣ, ಅನನ್ಯ, ಅಪ್ರತಿಮ ಚೆಲುವಿನಿಂದ ತುಳುಕುತ್ತಿರುವಂಥವು. ಕಥೆ, ಕಾದಂಬರಿ, ಭಾವಗೀತಾತ್ಮಕ ಪ್ರಬಂಧ, ನಾಟಕಗಳಂತೆಯೇ ಗಂಭೀರವಾದ ತತ್ತ್ವಶಾಸ್ತ್ರ ಪ್ರಮೇಯಗಳನ್ನು ಕಮೂ ಮಂಡಿಸಿದ. ಆತ ಪ್ರತಿಪಾದಿಸಿದ ಸಿದ್ಧಾಂತಗಳ ನಂತರ ಲೋಕ ಎಷ್ಟೋ ವಿಚಾರಗಳಲ್ಲಿ ತನ್ನ ದೃಷ್ಟಿಯನ್ನೇ ಬದಲಿಸಿಕೊಳ್ಳಬೇಕಾಯಿತು. ರಾಜಕೀಯ ಹಿಂಸೆಯ ಕುರಿತ ಆತನ ವ್ಯಾಖ್ಯಾನವೇ ಇರಲಿ, ಸಿಸಿಫಸ್‌ ಅಸಂಗತತೆಯಲ್ಲಿಯೂ ಕಮೂ ಕಂಡುಕೊಂಡ ಸಂತಸದ ಗಳಿಗೆಗಳೇ ಇರಲಿ ಇಂದಿಗೂ ಹೊಸ ರೂಪಕಗಳೇ. ಆತ ಬಂಡಾಯದ ಕುರಿತು ಮಂಡಿಸಿದ ವಿಚಾರಗಳು ಆವರೆಗೆ 'ಬಂಡುಕೋರತನ'ದ ಬಗೆಗಿದ್ದ ಅಭಿಪ್ರಾಯಗಳನ್ನು ಬುಡಮೇಲು ಮಾಡಿದವು. ಲೋಕೋತ್ತರ ಲೇಖಕನಾದ ಕಮೂ ಕನ್ನಡದ ಯುವ ತಲೆಮಾರನ್ನು ವಶೀಕರಿಸಿಕೊಂಡಿರುವುದು ತರುಣ ವಾಚಿಕೆ ಪ್ರಕಟವಾದ ಮೂರ್ನಾಲ್ಕು ತಿಂಗಳಲ್ಲಿಯೇ ಮರುಮುದ್ರಣಗೊಳ್ಳುತ್ತಿರುವುದು ಋಜುಪಡಿಸುತ್ತಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":49552134045979,"sku":"","price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/albert-camus-taruna-vachike-9508023.jpg?v=1767533765","url":"https:\/\/beetlebookshop.com\/kn\/products\/albert-camus-taruna-vachike","provider":"Beetle Book Shop","version":"1.0","type":"link"}