{"product_id":"akasmika-avishkaragalu","title":"ಆಕಸ್ಮಿಕ ಆವಿಷ್ಕಾರಗಳು","description":"\u003cp\u003e\u003cspan\u003eಬೆಂಕಿ ಕಡ್ಡಿ, ವ್ಯಾಸಲೀನ್, ವೆಲ್ಕ್ರೊ, ಚ್ಯೂಯಿಂಗ್ ಗಮ್, ಸೇಫ್ಟಿ ಪಿನ್, ಐಸ್ ಕ್ರೀಂ ಕೋನ್, ಪೆನಿಸಿಲಿನ್ ಮುಂತಾದ ಆವಿಷ್ಕಾರಗಳು ನಮ್ಮ ಬದುಕನ್ನು ಸುಲಭಗೊಳಿಸಿವೆ, ಹೆಚ್ಚು ಸಹ್ಯಗೊಳಿಸಿವೆ ಮತ್ತು ಆನಂದಮಯವಾಗಿಸಿವೆ. ಆಶ್ಚರ್ಯವೆಂದರೆ ಈ ಚತುರ ಉಪಜ್ಞೆಗಳೆಲ್ಲ ಉದ್ದೇಶಪೂರ್ವಕವಾಗಿ, ಪುನಃ ಪುನಃ ಪ್ರಯತ್ನಿಸಿ, ಕಂಡುಹಿಡಿದವುಗಳಲ್ಲ. ಇವುಗಳೆಲ್ಲ ಏನನ್ನೋ ಕಂಡುಹಿಡಿಯಲು ಹೋಗಿ, ಆಕಸ್ಮಿಕವಾಗಿ ಮತ್ತೇನೋ ಉಪಯುಕ್ತವಾದದ್ದನ್ನು ಕಂಡುಹಿಡಿದದ್ದರ ಫಲವಾಗಿವೆ-ಅದೃಷ್ಟದ ಝಲಕ್ಕೇನೋ ಎಂಬಂತೆ!\u003c\/span\u003e\u003cbr\u003e\u003cspan\u003e      ಖಚಿತ ದಾರಿಯಲ್ಲಿ ನಡೆಯುವ ವಿಜ್ಞಾನದ ಅನ್ವೇಷಣೆಯಲ್ಲಿ ಅದೃಷ್ಟದಂಥ ಅತೀಂದ್ರಿಯ ಪರಿಕಲ್ಪನೆಗೆ ಯಾವುದಾದರೂ ಸ್ಥಾನವಿದೆಯೆ? ಕೇವಲ ಅದೃಷ್ಟದಿಂದಲೇ ಮಹತ್ತರವಾದದ್ದನ್ನು ಕಂಡು ಹಿಡಿಯುವುದು ಸಾಧ್ಯವೆ? ಮೇಲ್ನೋಟಕ್ಕೆ ಅವೈಜ್ಞಾನಿಕ ರೀತಿಯಲ್ಲಾದ ಈ ವೈಜ್ಞಾನಿಕ ಅನ್ವೇಷಣೆಗಳನ್ನು ವಿವರಿಸುವುದು ಹೇಗೆ? ವಿಜ್ಞಾನಿಗಳ ಮತ್ತು ವಿಜ್ಞಾನದ ಇತಿಹಾಸಕಾರರ ಕುತೂಹಲವನ್ನು ಸಮನಾಗಿ ಕೆರಳಿಸಿರುವ, ವಿಜ್ಞಾನದ ಅಡಿಗಲ್ಲುಗಳನ್ನೇ ಅಲ್ಲಾಡಿಸಿ ಮಾನವ ಕೋಟಿಯ ಬದುಕನ್ನೆ ಬದಲಿಸಿರುವ ಈ ಆಕಸ್ಮಿಕ ಪತ್ತೆಗಳ ಹಿಂದಿನ ತಾಕತ್ತು ಅಡಗಿರುವುದೆಲ್ಲಿ?\u003c\/span\u003e\u003cbr\u003e\u003cspan\u003e         ಓದುಗರ ಕುತೂಹಲವನ್ನು ಕೆರಳಿಸಬಲ್ಲ ಇಂಥ ೫೦ ಆಕಸ್ಮಿಕ ಆವಿಷ್ಕಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ.\u003c\/span\u003e\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48738529640731,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/akasmika-avishkaragalu-7656764.jpg?v=1767533345","url":"https:\/\/beetlebookshop.com\/kn\/products\/akasmika-avishkaragalu","provider":"Beetle Book Shop","version":"1.0","type":"link"}