{"product_id":"agastya-nakshatra-kathegalu","title":"ಅಗಸ್ತ್ಯ ನಕ್ಷತ್ರ (ಕಥೆಗಳು)","description":"\u003cdiv class=\"row\" data-mce-fragment=\"1\"\u003e\n\u003cdiv class=\"col-lg-12\" data-mce-fragment=\"1\"\u003e\n\u003ch3 class=\"buy-product-style\" data-mce-fragment=\"1\"\u003eಅಗಸ್ತ್ಯ ನಕ್ಷತ್ರ | Agastya Nakshatra\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\" data-mce-fragment=\"1\"\u003e\n\u003cdiv class=\"col-lg-12 text-left\" data-mce-fragment=\"1\"\u003e\n\u003cp data-mce-fragment=\"1\"\u003e\u003ca href=\"https:\/\/navakarnataka.com\/view\/authors\/eyJpdiI6IkxreE5oVHNxRGE3REZuK2FSbWdxWUE9PSIsInZhbHVlIjoibXhjTk5rd0NDMURMWG10NE5pNGlGQT09IiwibWFjIjoiZmUyMzZlOWNiNDY1YjVhNGI2NDg4N2I3MTE3MTliMWFlNjgwMmY4NTM4YTg0OTgzNjllYzU1NDNiMGFlYTQ3YiIsInRhZyI6IiJ9\" data-mce-fragment=\"1\" data-mce-href=\"https:\/\/navakarnataka.com\/view\/authors\/eyJpdiI6IkxreE5oVHNxRGE3REZuK2FSbWdxWUE9PSIsInZhbHVlIjoibXhjTk5rd0NDMURMWG10NE5pNGlGQT09IiwibWFjIjoiZmUyMzZlOWNiNDY1YjVhNGI2NDg4N2I3MTE3MTliMWFlNjgwMmY4NTM4YTg0OTgzNjllYzU1NDNiMGFlYTQ3YiIsInRhZyI6IiJ9\"\u003eಲೇಖಕರು: ಮಲ್ಲಿಕಾರ್ಜುನಗೌಡ ತೂಲಹಳ್ಳಿ , Mallikarjunagouda Thulahalli\u003c\/a\u003e\u003c\/p\u003e\n\u003cp data-mce-fragment=\"1\"\u003eಭೋಜನಗೌಡ ಪಿಎಸ್‌ಐ ಎದೆಗೆ ಕೈಯೊತ್ತಿ ಶಕ್ತಿಯಿದ್ದಷ್ಟು ಹಿಂದೆ ನೂಕಿದ. ರೋಷಗೊಂಡ ಪಿಎಸ್‌ಐ ಹೊಡೆಯಲು ಲಾಠಿ ಕೈ ಎತ್ತಿದ್ದೇ ತಡ, ಹಿಂದಿನಿಂದ ಪೀಸಿಗಳು ಬೋಜನಗೌಡನ ಬೆನ್ನಿಗೆ ಸೊಂಟಕ್ಕೆ ಬಾರಿಸಿಬಿಟ್ಟರು. ಅದನ್ನು ನೋಡಿ ಹೌಹಾರಿದ ಮೈಲ ಪಂಚೆಯಲ್ಲೇ ಹೇತುಕೊಂಡು ನೆಲಕ್ಕೆ ಕುಸಿದ. ಅದು ಹೀಗೆಯೇ ಮುಂದುವರೆದು ಕ್ಷಣ ಮಾತ್ರದಲ್ಲೇ ಹೂ ಚೆಲ್ಲಿದ್ದ ಹಾದಿ, ಹೊಲ ಎಲ್ಲಾ ದೊಡ್ಡದೊಂದು ಹೇಲಂಗಳವಾಯಿತು. ಭೋಜನಗೌಡ ಕೆಂಡವಾಗಿ ಕಿರುಚುತ್ತಿದ್ದಂತೆ ಮಾದಿಗರು ವಡ್ಡರು ತೊಡೆ ಮಟ್ಟ ಬಿಚ್ಚಿದ್ದ ಚಣ್ಣವೆಳೆದುಕೊಂಡು ಕೂಗುತ್ತಿದ್ದರು. ಅವರ ಒಡಲ ಕಿಚ್ಚಿನಂತೆ ಹೊರ ಬಿದ್ದಿದ್ದ ಹೇಲಿನ ಲಂಡಿಕೆಗಳು ನೋಡ ನೋಡುತ್ತಿದ್ದಂತೆಯೇ ಕಾಲಾದವು, ದೇಹವಾದವು, ಎತ್ತಿದ ಕೈಯಾದವು. ಶಿರವಾದವು, ಬಾಯಾದವು, ಕಣ್ಣಾದವು, ಕಿವಿಯಾದವು, ಮಿದುಳಾದವು, ನೂರಾಗಿ ಸಾವಿರವಾಗಿ, ಲಕ್ಷವಾಗಿ ಹೊಲದ ತುಂಬ ಹರಡಿದವು. ಪಲ್ಟಿ ಹೊಡೆದು ಕೇಕೆ ಹಾಕಿದವು. ಹಿರೇಗುಡ್ಡದ ನೆತ್ತಿಗೆ ಜಿಗಿದು ಜಾರಿಕೆಯಾಡಿದವು. ಎಲ್ಲಿದ್ದವೋ ಲಕ್ಷಾಂತರ ನೊಣಗಳು ಸಿಕ್ಕಸಿಕ್ಕವರ ಮುಕುರಿ ಕಚ್ಚಿ ಓಡಿಸಿದವು. ಭೋಜನಗೌಡನಿಗೆ, ಮಾದಿಗರಿಗೆ, ವಡ್ಡರಿಗೆ ಆವೇಶವಿಳಿದು ಎಚ್ಚರವಾದಾಗ ಸ್ವಾಮಿಯನ್ನು ಹೊತ್ತು ತಂದ ಪಲ್ಲಕ್ಕಿ ನಡುದಾರಿಯಲ್ಲಿ ಮಕಾಡೆ ಬಿದ್ದದ್ದು ಬಿಟ್ಟರೆ ಬೇರೇನೂ ಇರಲಿಲ್ಲ.\u003c\/p\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":47799194353947,"sku":"","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/agastya-nakshatra-kathegalu-1932949.jpg?v=1767534786","url":"https:\/\/beetlebookshop.com\/kn\/products\/agastya-nakshatra-kathegalu","provider":"Beetle Book Shop","version":"1.0","type":"link"}