{"product_id":"adrusthavantana-atmakathe","title":"ಅದೃಷ್ಟವಂತನ ಆತ್ಮಕಥೆ \/ Adrusthavantana Atmakathe","description":"\u003cp\u003eಚೀಮಂಗಲದಿಂದ ಪ್ರಾರಂಭವಾಗುವ ಬಿಆರೆಲ್ ಅವರ ಆತ್ಮಕಥನ ಮಂಗಳಕರವಾಗೇ ಸಾಗಿಬರುವುದು ಶೀರ್ಷಿಕೆಯನ್ನು ಅನ್ವರ್ಥಕಗೊಳಿಸು ವಂತಿದೆ. \"ಖುಷಿ ಇಲ್ಲದವನು ಕವಿಯಾಗಲಾರ\" ಎಂಬ ಜೀಯೆಸ್ಸೆಸ್ರ ಅರ್ಥಗರ್ಭಿತ ಮಾತಿನಂತೆ ಬಿಆರೆಲ್ ವ್ಯಕ್ತಿತ್ವ. ಇವರು ನಿಜಕ್ಕೂ 'ಭರವಸೆಯ ಪ್ರವಾದಿ'. ಆತ್ಮಕಥನದುದ್ದಕ್ಕೂ ಅವರ ಕುಟುಂಬವಾತ್ಸಲ್ಯ, ಸ್ನೇಹಶೀಲತೆ, ಪ್ರೀತಿ, ಲವಲವಿಕೆ, ನೇರವಂತಿಕೆ, ಜಂಗಮಗುಣ ಎದ್ದುಕಾಣುತ್ತದೆ. ನವ್ಯಸಾಹಿತ್ಯದ ಉಚ್ಛ್ರಾಯ ಕಾಲದಲ್ಲಿ ಬರೆಯಲಾರಂಭಿಸಿದ ಬಿಆರೆಲ್ ಒಂದು ರೀತಿಯಲ್ಲಿ ಆ ಪಟ್ಟಕ್ಕೆ ಸಾಕ್ಷಿ ಪ್ರಜ್ಞೆಯಾಗಿ ನಿಂತವರು. ಅನೇಕ ಹಿರಿಯರ, ಕನ್ನಡದ ಶ್ರೇಷ್ಠ ಮನಸ್ಸುಗಳ ಒಡನಾಟ, ನಿರ್ವ್ಯಾಜ ಪ್ರೀತಿ, ಪ್ರೋತ್ಸಾಹವನ್ನು ಪಡೆದವರು. 'ಅಕ್ಷರ ಹೊಸ ಕಾವ್ಯ'ದಿಂದ ಪ್ರಾರಂಭವಾಗಿ 'ಹಕ್ಕೆಗೆ ಬಂದ ಹಕ್ಕಿ'ವರೆಗೆ ನಿರಂತರವಾಗಿ ಸಾಗಿಬಂದ ಇವರ ಕಾವ್ಯಪಯಣ, ಕನ್ನಡ ಕಾವ್ಯಜಗತ್ತು ಪಡೆದುಕೊಂಡ ವಿಭಿನ್ನ ನೆಲೆಗಳನ್ನು ಹೇಳುವಂತದ್ದು. ಕಾವ್ಯ ಮಾತ್ರವಲ್ಲದೆ ಗದ್ಯದ ವಿವಿಧ ಪ್ರಕಾರಗಳಲ್ಲಿ ಬಿಆರೆಲ್ ಬರವಣಿಗೆ ಗಮನಾರ್ಹವಾದುದು. ಸ್ವತಃ ಉತ್ತಮ ಗಾಯಕರಾದ, ಕನ್ನಡ ಸುಗಮ ಸಂಗೀತ ಕ್ಷೇತ್ರವನ್ನು ಬೆಳೆಸಿದ, ಬೆಳಗಿದ ಜನಮನದ ಪ್ರೀತಿಯ ಕವಿಯಾಗಿಯೂ ಇವರ ಸಾಧನೆ ಪ್ರಮುಖವಾದದ್ದು. ಬಾಳಿನ ಹಾದಿಯುದ್ದಕ್ಕೂ ಅದೃಷ್ಟದ ಬೆನ್ನೇರಿ ಬಂದರೂ ವಾಸ್ತವಪ್ರಜ್ಞೆ ಮರೆಯದ ನೇರ, ನಿಷ್ಪಕ್ಷಪಾತ ದೃಷ್ಟಿಕೋನ ಇವರದು. ಈ ಅಜೇಯತಾವಾದಿಗೆ 'ಇಹದ ಪರಿಮಳದ ಹಾದಿಯೇ' ಮುಖ್ಯ. 'ಲಘುವಾಗೆಲೆ ಮನ, ಗೆಲುವಾಗೆಲೆ ಮನ' ನನ್ನ ಪಾಲಿಸಿ ಎಂದರೂ ಅಪ್ಪಟ ಜೀವನಪ್ರೀತಿಯ, ಬುವಿಯ ಮಮತೆಯ ಮಡಿಲನ್ನು ಬಯಸುವ ಕವಿಹೃದಯಿ, ಬಿಆರೆಲ್ ಜೀವನ ಹಾಗೂ ಸಾಹಿತ್ಯಕ ಪಯಣದ ಚೇತೋಹಾರಿ ಕಥನ 'ಅದೃಷ್ಟವಂತನ ಆತ್ಮಕಥೆ'.                        \u003c\/p\u003e\n\u003cp\u003e                                                                                                                              -ಪ್ರಭಾ ಎನ್.\u003c\/p\u003e","brand":"BEETLE BOOK SHOP","offers":[{"title":"Default Title","offer_id":54236909830427,"sku":null,"price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bunny-9c34d8c0c66741758df039f066202969.jpg?v=1791984043","url":"https:\/\/beetlebookshop.com\/kn\/products\/adrusthavantana-atmakathe","provider":"Beetle Book Shop","version":"1.0","type":"link"}