{"product_id":"aa-vadana","title":"ಎಎ ವದನ","description":"\u003cp\u003eಈ ಭೂಮಿಯ ಮೇಲೆ ‘ಕಾಮ’ ಯಾರನ್ನೂ ಬಿಟ್ಟಿಲ್ಲ. ಆದರೆ ಎಲ್ಲರೂ ಕಾಮಕ್ಕಾಗಿಯೇ ಬದುಕುವವರಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಕವಲು ದಾರಿಗಳು ಇದ್ದೇ ಇರುತ್ತವೆ. ಆ ಹಾದಿಯ ಒಂಟಿ ಪಯಣದಲ್ಲಿ ಗಂಡು-ಹೆಣ್ಣು ಜೊತೆಯಾಗುವುದು ಸಹಜ. ಆದರೆ ಗಂಡು-ಗಂಡನ್ನೇ ಬಯಸಿದರೆ? ಹೆಣ್ಣು-ಹೆಣ್ಣನ್ನೇ ಬಯಸಿದರೆ? ಅದು ಶಿಕ್ಷಾರ್ಹ ಅಪರಾಧ, ಪ್ರಕೃತಿಗೆ ವಿರುದ್ಧ ಎಂಬ ಕಟ್ಟಳೆಗಳನ್ನು ಮನುಷ್ಯ ವಿಧಿಸಿಕೊಂಡಿದ್ದಾನೆ. ಆದರೂ ಇದನ್ನು ಕೆಲವರು ಏಕೆ ಧಿಕ್ಕರಿಸುತ್ತಾರೆ? ಯಾರಿಗೂ ಹೇಳಲಾಗದೆ, ಅವರೊಳಗಿನ ಭಾವನೆಗಳನ್ನು ಅದುಮಿ‌ಕೊಳ್ಳಲಾಗದೇ ಅವರು ಅನುಭವಿಸುವ ಯಾತನೆ ಹೇಗಿರುತ್ತದೆ? ಆ ಮನಸ್ಥಿತಿಯಿಂದ ಅವರು ಹೊರಬರಲು ಸಾಧ್ಯವೇ ? ನಮ್ಮ ನಡುವೆ ಅರ್ಥವಾಗದೇ ಉಳಿದಿರುವ ಇಂಥವರ ಬಗ್ಗೆ ಮುಂದುವರೆದ ಕಾಲಘಟ್ಟದಲ್ಲಿ ನಮ್ಮ ದೃಷ್ಟಿಕೋನ ಹೇಗಿರಬೇಕು? ಇತ್ಯಾದಿ ಕೌತುಕದ ಪ್ರಶ್ನೆಗಳಿಗೆ ಈ ಕೃತಿ ಉತ್ತರ ನೀಡುತ್ತದೆ.\u003c\/p\u003e\n\u003cp\u003eಶೇಕ್ಷಾವಲಿ ಮಣೆಗಾರ್\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49289888465179,"sku":"","price":216.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/aa-vadana-5602483.jpg?v=1767533166","url":"https:\/\/beetlebookshop.com\/kn\/products\/aa-vadana","provider":"Beetle Book Shop","version":"1.0","type":"link"}