{"product_id":"aa-maha-mugulunage","title":"That great smile","description":"\u003cp\u003eಕಾವ್ಯವು ಒಂದು ಧರ್ಮ. ಇಡೀ ಮಾನವಕುಲವು ಕಾವ್ಯಧರ್ಮವನ್ನು ಒಪ್ಪಿಕೊಳ್ಳಬೇಕು. ಎಲ್ಲಾ ಧರ್ಮಗಳಿಗೂ ಪರ್ಯಾಯವಾಗಿ ನಿಲ್ಲಬಲ್ಲ ಧರ್ಮ ಯಾವುದಾದರೂ ಇದ್ದರೆ ಅದು ಕಾವ್ಯಧರ್ಮ. ಆಗ ಯುದ್ಧಗಳು ನಿಲ್ಲುತ್ತವೆ. ಯುದ್ಧಗಳ ಸೃಷ್ಟಿಗೆ ಸಾಮಾನ್ಯವಾಗಿ ಧರ್ಮಗಳೇ ಕಾರಣ. ಕಾವ್ಯದಿಂದ ಪರಸ್ಪರರಲ್ಲಿ ಸಹನೆ, ಪ್ರೀತಿ, ಮೈತ್ರಿಗಳು ಬೆಳೆಯುತ್ತವೆ. ವೈಷಮ್ಯ, ವೈರತ್ವಗಳು ನಾಶವಾಗುತ್ತವೆ. ಒಂದೇ ಕುಟುಂಬದ ಒಳಗಡೆ ಇರುವ ಭಿನ್ನಾಭಿಪ್ರಾಯಗಳು ಮಾಯವಾಗುತ್ತವೆ. ಅಕ್ಕಪಕ್ಕದ ಮನೆಗಳಿರಲಿ, ಕೇರಿಗಳಿರಲಿ, ಊರುಗಳಿರಲಿ ಅಥವಾ ರಾಜ್ಯಗಳಿರಲಿ, ರಾಷ್ಟ್ರಗಳಿರಲಿ ಕಾದಾಟಕ್ಕೆ ಆಸ್ಪದವೇ ಇರುವುದಿಲ್ಲ. ಕಾವ್ಯದ ಸ್ಪರ್ಶದಿಂದ ಮನುಷ್ಯ ಮೃದುವಾಗುತ್ತಾನೆ. ಇಲ್ಲದಿದ್ದರೆ ಅವನು ಮೃಗವಾಗುತ್ತಾನೆ. ವಿಶ್ವಮಾನವನಾಗಿ ಹುಟ್ಟಿದವನು ಬೆಳೆಯುತ್ತಾ ರಾಕ್ಷಸನಾಗುತ್ತಾನೆ. ಕಾವ್ಯ ಪ್ರತಿ ವ್ಯಕ್ತಿಯನ್ನೂ ತಲುಪಬೇಕು, ಪ್ರತಿ ಕುಟುಂಬವನ್ನೂ ತಲುಪಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯವಾಗುತ್ತದೆ. ಕಾವ್ಯ ಮನಸ್ಸನ್ನು ಮೃದುಗೊಳಿಸುತ್ತದೆ. ಹೃದಯವೈಶಾಲ್ಯವನ್ನು ಕೊಡುತ್ತದೆ. ಪರರನ್ನು ಸಹಿಸಿಕೊಳ್ಳುವ ತಾಳ್ಮೆಯನ್ನು ಕಲಿಸಿಕೊಡುತ್ತದೆ. ಅದೇ ಕವಿರಾಜಮಾರ್ಗಕಾರ ಹೇಳುವ ಕಸವರ ಅಂದರೆ ಚಿನ್ನ. ಇದನ್ನೇ ಬುದ್ಧ ಮೈತ್ರಿ ಎಂದು ಕರೆದಿದ್ದಾರೆ.\u003c\/p\u003e","brand":"BEETLE BOOK shop","offers":[{"title":"Default Title","offer_id":49440875151643,"sku":"","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/aa-maha-mugulunage-8131692.jpg?v=1767533646","url":"https:\/\/beetlebookshop.com\/kn\/products\/aa-maha-mugulunage","provider":"Beetle Book Shop","version":"1.0","type":"link"}