ಹೆಚ್ಚುವರಿ ಮಾಹಿತಿ
ವಿವರಣೆ
ಸಮಕಾಲೀನ ಭಾರತ ಕುರಿತು ಒಂದು ಪರಿಪೂರ್ಣ ಮತ್ತು ವಸ್ತುನಿಷ್ಠ ಪರಿಚಯ ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವವೆನಿಸಿದ ಭಾರತದ ಪ್ರಗತಿಯ ಕತೆ ಸಮೃದ್ಧ ಮತ್ತು ಪ್ರೇರಣಾತ್ಮಕವಾಗಿದೆ. ಬಿಪಿನ್‍ಚಂದ್ರ ಮತ್ತು ಸಹಲೇಖಕರ ‘ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ’ ಗ್ರಂಥದ ಮುಂದುವರಿದ ಭಾಗವಾಗಿರುವ ಈ ಸಂಪುಟ ಭಾರತ ಎದುರಿಸಿದ ಸವಾಲುಗಳನ್ನು ಹಾಗೂ ಅದು ಸಾಧಿಸಿದ ಯಶಸ್ಸುಗಳನ್ನು ವಸಾಹತುಶಾಹಿ ಪರಂಪರೆ ಮತ್ತು ಒಂದು ಶತಮಾನದವರೆಗೆ ನಡೆದ ಸ್ವಾತಂತ್ರ್ಯ ಹೋರಾಟದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ. ಈ ಗ್ರಂಥ ಸಂವಿಧಾನ ಹೇಗೆ ರಚಿಸಲ್ಪಟ್ಟಿತು ಹಾಗೂ ನೆಹರುವಾದಿ ರಾಜಕೀಯ, ಆರ್ಥಿಕ ಕಾರ್ಯಕ್ರಮ ಮತ್ತು ವಿದೇಶಾಂಗ ನೀತಿ ಹೇಗೆ ವಿಕಸಿಸಲ್ಪಟ್ಟಿತು ಹಾಗೂ ಅಭಿವೃದ್ಧಿಪಡಿಸಲ್ಪಟ್ಟಿತು ಎಂಬುದನ್ನು ವಿವರಿಸುತ್ತದೆ. ಇದು ರಾಷ್ಟ್ರದ ಸದೃಢೀಕರಣ ಹಂತಗಳು, ಕೇಂದ್ರ ಮತ್ತು ರಾಜ್ಯಗಳಲ್ಲಿ ಪಕ್ಷ ರಾಜಕೀಯ, ಪಂಜಾಬ್ ಸಮಸ್ಯೆ, ಜಾತಿ ವಿರೋಧಿ ರಾಜಕಾರಣ ಮತ್ತು ಅಸ್ಪøಶ್ಯತೆಯನ್ನು ಪರಾಮರ್ಶಿಸುತ್ತದೆ. ಭಾರತದಲ್ಲಿ ಕೋಮುವಾದದ ಬೆಳವಣಿಗೆ ಹಾಗೂ ಅದನ್ನು ಪ್ರಚ್ಛನ್ನಗೊಳಿಸುವಲ್ಲಿ ರಾಜ್ಯಾಧಿಕಾರದ ಬಳಕೆಯನ್ನು ಈ ಗ್ರಂಥ ವಿಶ್ಲೇಷಿಸುತ್ತದೆ. ಇದು 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟದ ಪತನದ ಪರಿಣಾಮವಾಗಿ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ ಉದಯ ಹಾಗೂ ನಂತರದ ರಾಜಕೀಯ ವಿದ್ಯಮಾನಗಳ ಕುರಿತು ವಿವರಿಸುತ್ತದೆ. ಈ ಗ್ರಂಥ 1991ರಿಂದೀಚೆಯ ಭಾರತೀಯ ಆರ್ಥಿಕ ಸುಧಾರಣೆಗಳು ಹಾಗೂ ವಿಸ್ತøತ ಭೂಸುಧಾರಣೆಗಳು, ಮತ್ತು ಹಸಿರು ಕ್ರಾಂತಿಯಲ್ಲದೇ, ಹೊಸ ಸಹಸ್ರಮಾನದಲ್ಲಿ ಭಾರತೀಯ ಅರ್ಥವ್ಯವಸ್ಥೆಯ ಸಾಧನೆಗಳು ಮತ್ತು ವೈಫಲ್ಯಗಳ ಮೌಲ್ಯಮಾಪನ ಮಾಡುತ್ತದೆ. ಅದರೊಂದಿಗೆ ಜವಾಹರ್‍ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್, ರಾಜೀವ್ ಗಾಂಧಿ, ವಿಶ್ವನಾಥ ಪ್ರತಾಪ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನ್‍ಮೋಹನ್ ಸಿಂಗ್ ವ್ಯಕ್ತಿತ್ವಗಳನ್ನು ವಸ್ತುನಿಷ್ಠವಾಗಿ ಪರಿಚಯಿಸುತ್ತ ಪ್ರಗತಿಪಥದಲ್ಲಿರುವ ದೇಶವೊಂದರ ಸಂಚಲನೆ ಕುರಿತು ಗಣನೀಯ ಮೇಲ್ನೋಟವೊಂದನ್ನು ಒದಗಿಸುತ್ತದೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.