{"title":"ರಂಗಸ್ವಾಮಿ ಮೂಕನಹಳ್ಳಿ ಪುಸ್ತಕಗಳು | Rangaswamy Mookanahalli ಪುಸ್ತಕಗಳು -ಆನ್‌ಲೈನ್","description":"\u003cp data-path-to-node=\"12\"\u003e\u003cb data-path-to-node=\"12\" data-index-in-node=\"0\"\u003eA Simple Guide to the Financial World:\u003c\/b\u003e \u003cb data-path-to-node=\"12\" data-index-in-node=\"126\"\u003eRangaswamy Mookanahalli\u003c\/b\u003e is one of the prominent authors who explain financial matters and investments in a language understandable to common people. His books on stock market, mutual funds and personal finance management have created a new financial awareness among Kannadigas.\u003c\/p\u003e\n\u003cp data-path-to-node=\"13\"\u003e\u003cb data-path-to-node=\"13\" data-index-in-node=\"0\"\u003eBeetle Bookshop Special:\u003c\/b\u003e We have prepared a collection of Rangaswamy Mookanahalli's major books for those who wish to develop financial discipline. All books are available at a \u003cb data-path-to-node=\"13\" data-index-in-node=\"164\"\u003ediscount\u003c\/b\u003e, and you can order online with \u003cb data-path-to-node=\"13\" data-index-in-node=\"194\"\u003eCash on Delivery\u003c\/b\u003e. The books will be safely delivered to your doorstep.\u003c\/p\u003e","products":[{"product_id":"untitled-11aug_18-42","title":"ಹಣ ಏನಿದು ನಿನ್ನ ವಿಚಿತ್ರ ಗುಣ! | Money Psychology Kannada Book","description":"\u003cp\u003eನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ. ಒಂದು ಮರಿ ಆನೆಯ ಕಾಲಿಗೆ ಸರಪಳಿಯನ್ನು ಬಿಗಿದು ಮರಕ್ಕೆ ಕಟ್ಟಿಹಾಕುತ್ತಾರೆ. ಅದು ಬಿಡಿಸಿಕೊಳ್ಳಲು ಹಲವು ಪ್ರಯತ್ನ ಮಾಡುತ್ತದೆ, ಅದರಲ್ಲಿ ವಿಫಲವಾಗುತ್ತದೆ. ಸಮಯ ಕಳೆಯುತ್ತದೆ.\u003cbr\u003eಆನೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅದೇ ಮರಕ್ಕೆ, ಅದೇ ಸರಪಳಿಯಲ್ಲಿ ಆನೆಯನ್ನು ಬಂಧಿಸಿ ಇಡಲಾಗಿದೆ. ಆನೆ ಮನಸ್ಸು ಮಾಡಿದರೆ ಮರವನ್ನೇ ಕಿತ್ತು ಬಿಸಾಡಬಹುದು. ಆದರೂ ಅದು ಏನೂ ಮಾಡದೆ ಸರಪಳಿ ಕಟ್ಟನ್ನು ಒಪ್ಪಿಕೊಂಡು ಬಂಧಿಯಾಗಿದೆ. ಈ ಕಥೆಯನ್ನು ನಾವೆಲ್ಲರೂ ಸ್ವಲ್ಪ ನಮ್ಮ ಬದುಕಿಗೆ, ವೆಲ್ತ್ ಕ್ರಿಯೇಷನ್ ಬಗ್ಗೆ ತಳುಕು ಹಾಕಿ ನೋಡೋಣವೇ?\u003cbr\u003eನಮ್ಮಲ್ಲಿನ ವ್ಯವಸ್ಥೆ, ಹಣಕಾಸು ಬಗೆಗಿನ ಭಾವನೆಗಳು ಸದಾ ನಮ್ಮನ್ನು ಬಡತನದಲ್ಲಿರಿಸುವ ಅಂಶಗಳನ್ನು ಹೊಂದಿವೆ. ನಮ್ಮನ್ನು ಬಡವರನ್ನಾಗೇ ಉಳಿಸಲು ನಡೆದಿದೆ ಹುನ್ನಾರ! ಶ್ರೀಮಂತರಾಗಲು ಈ ಪುಸ್ತಕದಲ್ಲಿದೆ ಪರಿಹಾರ!! ಹೌದು, ನೀವು ನಿಜಕ್ಕೂ ಇಲ್ಲಿನ ಅಂಶಗಳನ್ನು ಓದಿ, ಅಳವಡಿಸಿಕೊಂಡಿದ್ದೇ ಆದರೆ, ಚಿಂತನೆಗಳನ್ನು ಬದಲಿಸಿಕೊಂಡಿದ್ದೇ ಆದರೆ, ನಮ್ಮ ಹಣೆಬರಹವನ್ನು ಕೂಡ ಬದಲಿಸಿಕೊಳ್ಳಬಹುದು. ಆನೆಗೆ ಮರವನ್ನು ಕಿತ್ತೊಗೆಯುವ ಶಕ್ತಿ ಇದ್ದರೂ ಅದು ತನ್ನ ಶಕ್ತಿಯನ್ನು ಬಳಸಿಕೊಳ್ಳದ ಹಾಗೆ ನಾವು ಕೂಡ ಬಡತನವನ್ನು ಕಿತ್ತೋಡಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಪ್ರಯತ್ನ ಬೇಕು ಅಷ್ಟೆ.\u003cbr\u003eಜಗತ್ತಿನಲ್ಲಿ ಹೆಚ್ಚು ಜನರು ಬಡವರಾಗೇ ಉಳಿಯಲು ಇನ್ನೊಂದು ಪ್ರಮುಖ ಕಾರಣವೇನು ಗೊತ್ತೇ? ಹಣವನ್ನು ನಾವು ಸಬ್ ಜೀರೋ ಸಂ ಗೇಮ್ ಎನ್ನುವಂತೆ ನೋಡುತ್ತೇವೆ. ಅಂದರೆ ಒಬ್ಬ ಲಾಭಗಳಿಸಲು, ಇನ್ನೊಬ್ಬ ನಷ್ಟ ಮಾಡಿಕೊಳ್ಳಲೇಬೇಕು ಎನ್ನುವುದು ಸಬ್ ಜೀರೋ ಸಂ ಗೇಮ್ ಎನ್ನಿಸಿಕೊಳ್ಳುತ್ತದೆ. ವಾಣಿಜ್ಯ ಕಲಿತವರಲ್ಲೂ ಇದರ ಬಗ್ಗೆ ನಿಖರತೆ, ಮಾಹಿತಿ ಇಲ್ಲದಿರುವುದು ವಿಪರ್ಯಾಸ. ಹಣ, ವೆಲ್ತ್ ನಾವು ಸೃಷ್ಟಿಸಬಹುದು. ಅದಕ್ಕೆ ಒಬ್ಬ ನಷ್ಟ ಮಾಡಿಕೊಳ್ಳಲೇಬೇಕು ಎನ್ನುವ ನಿಯಮವೇನೂ ಇಲ್ಲ. ಆದರೆ ಎಳವೆಯಿಂದ ನಮ್ಮಲ್ಲಿ ಈ ಅಂಶವನ್ನು ತುಂಬಲಾಗಿದೆ. ಅದರಿಂದ ನಾವು ಪ್ರಜ್ಞಾಪೂರ್ವಕವಾಗಿ ಹೊರಬರಬೇಕಿದೆ.\u003cbr\u003eನೆನಪಿರಲಿ: ಹಣವೆನ್ನುವುದು ಸಬ್ ಜೀರೋ ಸಂ ಗೇಮ್ ಅಲ್ಲವೇ ಅಲ್ಲ. ಹಣ, ಸಂಪತ್ತು ಸೃಷ್ಟಿಸಬಹುದು\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":46160198402331,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hana-yenidu-ninna-vichitra-guna-5379671.png?v=1767535747"},{"product_id":"badukusundara-a-book-on-inspirational-thoughts-on-life","title":"ಬದುಕು ಸುಂದರ | Baduku Sundara","description":"\u003cp\u003e \u003c\/p\u003e\n\u003cp\u003eನಮ್ಮ ಮತ್ತು ನಮ್ಮ ಯಶಸ್ಸಿನ ನಡುವೆ ಇರುವ ಅತಿ ದೊಡ್ಡ ತಡೆಗೋಡೆ ಯಾವುದು ಗೊತ್ತಾ? ಅದು ನಾವು ನೀಡುವ ಕಾರಣಗಳು! ನೆಪ ಹೇಳುವುದು, ಸಬೂಬು ಹೇಳಿಕೊಂಡು ನಮ್ಮೆಲ್ಲಾ ಸೋಲಿಗೆ ಇತರರನ್ನು ಹೊಣೆ ಮಾಡುತ್ತಾ, ವ್ಯಕ್ತಿ, ಸನ್ನಿವೇಶಗಳನ್ನು ದೂಷಿಸುತ್ತಾ ಟೈಮ್‌ ಪಾಸ್‌ ಮಾಡುವುದು ನಾವು ಗಳಿಸಿಕೊಳ್ಳಬಹುದಾದ ಯಶಸ್ಸಿಗೆ ಇರುವ ದೊಡ್ಡ ಅಡಚಣೆ. ನಮ್ಮ ಸೋಲು-ಗೆಲುವಿಗೆ ಬೇರಾರೂ ಕಾರಣರಲ್ಲ, ಅದು ನಾವೇ! ಎನ್ನುವುದು ಅರಿತುಕೊಂಡ ದಿನ, ಬದುಕಿನಲ್ಲಿ ಮಹತ್ತರ ತಿರುವಿಗೆ ಓನಾಮ ಹಾಕಿದಂತೆ! ಈ ಸರಳ ಸತ್ಯ ನಾವು ಅರಿತುಕೊಳ್ಳಬೇಕಿದೆ.\u003c\/p\u003e\n\u003cp\u003eಬದುಕಿನಲ್ಲಿ ನಮ್ಮೆಲ್ಲಾ ಸೋಲಿಗೆ, ಅಪಜಯಕ್ಕೆ ಒಬ್ಬರನ್ನು ಹೊಣೆ ಮಾಡುತ್ತೇವೆ. ಅವರನ್ನು ಶತ್ರು ಎಂದು ಬಿಂಬಿಸಿಕೊಳ್ಳುತ್ತೇವೆ. ಅವರಿಲ್ಲದದ್ದಿರೆ, ಸನ್ನಿವೇಶ ಸರಿಯಾಗಿದ್ದದ್ದಿರೆ ನಾವೇನೋ ಮಹತ್ತರವಾದದ್ದನ್ನು ಸಾಧಿಸಿ ಬಿಡುತ್ತಿದ್ದೆವು ಎನ್ನುವ ಭ್ರಮೆಯಲ್ಲಿ ಬದುಕುತ್ತೇವೆ. ಆದರೆ ನಮ್ಮ ಅತಿ ದೊಡ್ಡ ಶತ್ರು ಬೇರಾರೂ ಅಲ್ಲ ಅದು ನಾವು ಎನ್ನುವುದನ್ನು ಮರೆತು ಬಿಡುತ್ತೇವೆ. ನಮ್ಮ ಆಲೋಚನೆಗಳು, ನಮ್ಮ ಕಾರ್ಯವೈಖರಿ ನಮ್ಮ ಅತಿ ದೊಡ್ಡ ಶತ್ರು ಅಥವಾ ಅತಿ ದೊಡ್ಡ ಮಿತ್ರ ಎನ್ನುವುದನ್ನು ನಾವು ಅರಿತುಕೊಳ್ಳಬೇಕಿದೆ. ನಮ್ಮ ಚಿಂತನೆ, ಆಲೋಚನೆ ಬದಲಿಸಿಕೊಳ್ಳುವುದರ ಮೂಲಕ ಬದುಕನ್ನು ಬದಲಾಯಿಸಿಕೊಳ್ಳಬಹುದು!\u003c\/p\u003e\n\u003cp\u003eಬದುಕು ಸುಂದರ ಮಾಡಿಕೊಳ್ಳಲು ಬೇಕಾದ ಎಲ್ಲವನ್ನೂ ಭಗವಂತ ನಮಗೆ ನೀಡಿದ್ದಾನೆ. ನಾವೆಂತ ದಡ್ಡರು ಎಂದರೆ, ನಾವು ಅದನ್ನು ಜಗತ್ತಿನೆಲ್ಲೆಡೆ ಹುಡುಕಲು ಶುರು ಮಾಡುತ್ತೇವೆ. ಬಯಸಿದ ಬದುಕು ನಮ್ಮದಾಗಬೇಕದ್ದಿರೆ `ಲುಕ್‌ ಇನ್ವರ್ಡ್‌.' ಎಷ್ಟು ಸಾಧ್ಯವೋ ಅಷ್ಟೂ ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಎಲ್ಲವೂ ನಮ್ಮಲ್ಲೆ ಅಡಕವಾಗಿದೆ.\u003c\/p\u003e\n\u003cp\u003e#ಬದುಕುಸುಂದರ ಇಂತಹ ಹತ್ತಾರು ಗುಟ್ಟುಗಳನ್ನು ರಟ್ಟು ಮಾಡಿದೆ.\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":46875435303195,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/badukusundara-a-book-on-inspirational-thoughts-on-life-4071954.png?v=1767534910"},{"product_id":"sirivantikege-sarala-sutragalu","title":"ಸಿರಿವಂತಿಕೆಗೆ ಸರಳ ಸೂತ್ರಗಳು | Wealth Building Kannada Book","description":"\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003e\u003cstrong data-mce-fragment=\"1\"\u003eಲೇಖಕರು: \u003c\/strong\u003e\u003cstrong data-mce-fragment=\"1\"\u003eರಂಗಸ್ವಾಮಿ ಮೂಕನಹಳ್ಳಿ\u003c\/strong\u003e\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eಭಾಷೆ: ಕನ್ನಡ\u003cbr\u003e\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eISBN 978-93-93224-87-3\u003cbr\u003e\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003e\u003cbr data-mce-fragment=\"1\"\u003eಬೆಲೆ: ರೂ.180\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eಪುಟಗಳ ಸಂಖ್ಯೆ: 152\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eಬೈಂಡಿಂಗ್: ಸಾಫ್ಟ್ ಪೇಪರ್‌ಬ್ಯಾಕ್\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003eಪ್ರಕಾಶಕರು: ಸಾವನ್ನ ಎಂಟರ್‌ಪ್ರೈಸಸ್\u003cbr data-mce-fragment=\"1\"\u003e\u003cbr data-mce-fragment=\"1\"\u003eಬೈಂಡಿಂಗ್ ಪ್ರಕಾರ: ಪೇಪರ್‌ಬ್ಯಾಕ್\u003c\/p\u003e\n\u003cp style=\"font-weight: 400;\" data-mce-fragment=\"1\" data-mce-style=\"font-weight: 400;\"\u003e\u003cstrong data-mce-fragment=\"1\"\u003eಸಿರಿವಂತಿಕೆಗೆ ಸರಳ ಸೂತ್ರಗಳು\u003c\/strong\u003e\u003cbr data-mce-fragment=\"1\"\u003e\u003cbr data-mce-fragment=\"1\"\u003eನಾನು ಅತ್ಯಂತ ಇಷ್ಟಪಡುವ ವ್ಯಕ್ತಿ ಲೀ ಕ ಶಿಂಗ್‌ ಹೇಳುತ್ತಾರೆ: ಬದುಕು, ಭವಿಷ್ಯ, ಸಂತೋಷ, ಶ್ರೀಮಂತಿಕೆ ಎಲ್ಲವನ್ನೂ ಪ್ಲಾನ್‌ ಮಾಡಬಹುದು! ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಇವರು. ಅವರ ಪ್ರಕಾರ, Life can be designed. Careers can be planned. Happiness can be prepared. ಅಬ್ಬಾ ಅದೆಂತಹ ಸಾಲುಗಳು! ಅದೆಂತಹ ಆತ್ಮಶಕ್ತಿ! ಅದೆಂತಹ ವಿಶ್ವಾಸ! ಅದೆಷ್ಟು ನಂಬಿಕೆ ಅಲ್ವಾ? ಇಂದಿಗೆ 95ರ ಲೀ ಕ ಶಿಂಗ್‌ 15ನೇ ವಯಸ್ಸಿಗೆ ಶಾಲೆ ಬಿಟ್ಟು ದಿನಕ್ಕೆ 16 ತಾಸು ದುಡಿಯಲು ಶುರು ಮಾಡಿದವರು. ನಿಮಗೆಲ್ಲಾ ಗೊತ್ತಿರಲಿ ಜಗತ್ತಿನ ಮಿಲಿಯನೇರ್‌ ಮತ್ತು ಬಿಲಿಯನೇರ್‌ಗಳಲ್ಲಿ 85 ಪ್ರತಿಶತ ಸೆಲ್ಫ್  ಮೇಡ್‌. ಅವರಿಗೂ ನಿಮ್ಮಂತೆ, ನನ್ನಂತೆ ಫ್ಯಾಮಿಲಿ, ಸಂಪತ್ತು ಅಥವಾ ಗಾಡ್‌ಫಾದರ್‌ ಇರಲಿಲ್ಲ. ಇಂದಿಗೆ ಅವರು ಹಾಂಗ್‌ ಕಾಂಗ್‌ನ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು! ಜಾಗತಿಕ ಮಟ್ಟದಲ್ಲೂ ಅತಿ ದೊಡ್ಡ ಶ್ರೀಮಂತರ ಸಾಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ಸಾಧ್ಯವಾದರೆ ಅದು ನಮಗೂ ಸಾಧ್ಯ. ಇಂದಿಗೆ ಶ್ರೀಮಂತಿಕೆಗೆ ಲೀ ಕ ಶಿಂಗ್‌ ಮಾಡೆಲ್‌ ಅತ್ಯಂತ ಸೂಕ್ತವಾಗಿದೆ. ಏನಿದು ಲೀ ಕ ಶಿಂಗ್‌ ಮಾಡೆಲ್‌ ಎನ್ನುವುದರ ಬಗ್ಗೆ ಪುಸ್ತಕದಲ್ಲಿ ವಿವರವಿದೆ.\u003cbr data-mce-fragment=\"1\"\u003eಈ ಪುಸ್ತಕದಲ್ಲಿರುವ ಅಧ್ಯಾಯಗಳನ್ನು ಅನುಭವಿಸಿ ಬರೆದದ್ದು. ಅಲ್ಲಲ್ಲಿ ನನ್ನ ಬದುಕಿನ ಸನ್ನಿವೇಶಗಳ ಉಲ್ಲೇಖವನ್ನೂ ಮಾಡಿದ್ದೇನೆ. ಶ್ರದ್ಧೆ, ಬತ್ತದ ಉತ್ಸಾಹ, ಹಂಬಲದ ಬೆಂಬಲವದ್ದಿರೆ ನಾವಂದುಕೊಂಡ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಸಿರಿವಂತಿಕೆಗೆ ಸರಳ ಸೂತ್ರಗಳಿವೆ, ಅವುಗಳನ್ನು ಕೇವಲ ಓದಿ ಮುಂದಕ್ಕೆ ಹೋದರೆ ಪ್ರಯೋಜನವಿಲ್ಲ. ಇಲ್ಲಿನ ಸೂತ್ರಗಳನ್ನು ಅಳವಡಿಸಿಕೊಂಡರೆ ಎಲ್ಲರೂ ಶ್ರೀಮಂತರಾಗಬಹುದು! - Good Luck.\u003cbr data-mce-fragment=\"1\"\u003e\u003cbr data-mce-fragment=\"1\"\u003e- ರಂಗಸ್ವಾಮಿ ಮೂಕನಹಳ್ಳಿ \u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":47570029216027,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sirivantikege-sarala-sutragalu-4430787.jpg?v=1767534913"},{"product_id":"sheru-maarukatte","title":"ಷೇರು ಮಾರುಕಟ್ಟೆ | Stock Market Kannada Book","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\n\u003ch1\u003eಷೇರು ಮಾರುಕಟ್ಟೆ\u003c\/h1\u003e\n\u003c\/div\u003e\n\u003cdiv width=\"1\" class=\"sc-AxhCb gKVXDt\"\u003e\n\u003cdiv width=\"1\" class=\"sc-AxhCb ewPPi\"\u003eby;ರಂಗಸ್ವಾಮಿ ಮೂಕಾನಹಳ್ಳಿ \u003cbr\u003e\n\u003c\/div\u003e\n\u003cdiv width=\"1\" class=\"sc-AxhCb ewPPi\"\u003eಸಾವಣ್ಣ ಎಂಟರ್‌ಪ್ರೈಸಸ್\u003c\/div\u003e\n\u003cdiv width=\"1\" class=\"sc-AxhCb ewPPi\"\u003e\u003c\/div\u003e\n\u003cdiv width=\"1\" class=\"sc-AxhCb ewPPi\"\u003eಷೇರು ಮಾರುಕಟ್ಟೆ ಎಂದ ತಕ್ಷಣ ಬಹುತೇಕರದು ತೆನಾಲಿ ರಾಮನ ಬೆಕ್ಕಿನ ಕಥೆ! ಹಾಲು ತಣ್ಣಗಿದ್ದರೂ ಬೆಕ್ಕು ಬಟ್ಟಲನ್ನ ಮುಟ್ಟಲು ಹೆದರುವ ಹಾಗೆ, ಲಾಭ ತಂದುಕೊಡುವ ಸಾಧ್ಯತೆ ಹೆಚ್ಚಿದ್ದರೂ ‘ಅಯ್ಯೋ ಅದು ನನಗಲ್ಲಪ್ಪ’ ಎನ್ನುವ ಮನೋಭಾವ. ಹೀಗೇಕಾಗುತ್ತದೆ? ಎನ್ನುವುದನ್ನ ನಾವು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಸ್ವಲ್ಪ ಈ ಬಗ್ಗೆ ಯೋಚಿಸಿದರೆ ಢಾಳವಾಗಿ ಕಣ್ಣಿಗೆ ರಾಚುವ ಸತ್ಯವೇನು ಗೊತ್ತೇ? ಕಲಿಕೆಯ ಕೊರತೆ, ಮಾಹಿತಿಯ ಕೊರತೆ. ನೀವೊಂದು ಆಟದಲ್ಲಿ ಭಾಗಿಯಾಗಿರುತ್ತೀರಿ ಎಂದುಕೊಳ್ಳಿ, ಆ ಆಟಕ್ಕೆ ಸಂಬಂಽಸಿದ ನಿಯಮಾವಳಿಗಳನ್ನ ತಿಳಿದುಕೊಳ್ಳದೆ ನೀವು ಆಟದಲ್ಲಿ ಪಾಲ್ಗೊಂಡರೆ ಗೆಲ್ಲುವ ಮಾತು ಬಹುದೂರ, ಸೋಲು ಶತಸ್ಸಿದ್ಧ. ಹೀಗಾಗಿ ಈ ಪುಸ್ತಕದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಪ್ರಮುಖ ಅಂಶಗಳಾದ ಫಂಡಮೆಂಟಲ್ ಅನಾಲಿಸಿಸ್, ಟೆಕ್ನಿಕಲ್ ಅನಾಲಿಸಿಸ್ ಜೊತೆಗೆ ಹೆಚ್ಚಾಗಿ ಪ್ರಸ್ತಾಪವಾಗದೆ ಇರುವ ಆದರೆ ಬಹುಮುಖ್ಯವಾದ ಸೆಂಟಿಮೆಂಟ್ ಅನಾಲಿಸಿಸ್ ಬಗ್ಗೆ ಕೂಡ ಮಾಹಿತಿಯನ್ನ ನೀಡಲಾಗಿದೆ. ಇದರ ಜೊತೆಗೆ ಪ್ರೈಮರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಸೆಕೆಂಡರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಡಿರೈವೆಟಿವ್ಸ್ ಮಾರುಕಟ್ಟೆಯ -ಚರ್ ಮತ್ತು ಆಪ್ಷನ್ ಮಾರುಕಟ್ಟೆ ಬಗ್ಗೆ ಕೂಡ ಒಂದಷ್ಟು ತಿಳಿಸುವ ಪ್ರಯತ್ನವಿದೆ. ಹೂಡಿಕೆಯಿಂದ ಬರುವ ಅಪಾಯಗಳೇನು? ಷೇರುದಾರನ ಹಕ್ಕುಗಳೇನು? ಷೇರಿನ ಮೇಲಿನ ತೆರಿಗೆ ನೀತಿಯೇನಿದೆ? ಅಲ್ಗೊ ಟ್ರೇಡಿಂಗ್, ಪಿಎಂಎಸ್, ಸೆಕ್ಯುರಿಟೀಸ್, ಷೇರು ಮಾರುಕಟ್ಟೆ ಟರ್ಮಿನಾಲಜಿಗಳು, ಹೂಡಿಕೆದಾರನ ರಕ್ಷಣೆ, ಅಹವಾಲು, ಪರಿಹಾರದ ತನಕ ಷೇರು ಮಾರುಕಟ್ಟೆಯಲ್ಲಿ ನೆಲೆ ನಿಲ್ಲಲು ಬೇಕಾದ ಸಂಪೂರ್ಣ ಮಾಹಿತಿಯನ್ನ ಕಟ್ಟಿಕೊಡುವ ಪುಟ್ಟ ಪ್ರಯತ್ನ ಇಲ್ಲಿದೆ.\u003c\/div\u003e\n\u003c\/div\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":47753592537371,"sku":"","price":293.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sheru-maarukatte-5195165.jpg?v=1767534366"},{"product_id":"appana-haadi","title":"ಅಪ್ಪನ ಹಾದಿ | Appana Haadi Kannada Book","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\n\u003ch1\u003eಅಪ್ಪನ ಹಾಡಿ\u003c\/h1\u003e\n\u003c\/div\u003e\n\u003cdiv width=\"1\" class=\"sc-AxhCb gKVXDt\"\u003e\n\u003cdiv width=\"1\" class=\"sc-AxhCb ewPPi\"\u003e\n\u003cdiv font-size=\"12,14\" class=\"sc-Axmtr ProductImageDetailCard__AboutText-xxaxm9-0 cRtGku\"\u003e\n\u003cdiv class=\"product__description rte quick-add-hidden\"\u003e''ಸಾರ್, ನಾನು ಪಾರ್ಟನರ್ ಶಿಪ್ ವ್ಯವಹಾರ ಮಾಡಿ ಕೈ ಸುಟ್ಟುಕೊಂಡಿದ್ದೆ. ನನ್ನ ಬಳಿ ಕೇವಲ 80 ಸಾವಿರ ರೂಪಾಯಿ ಹಣವಿತ್ತು. ಅದರಲ್ಲಿ ಉಳಿದ ಜೀವನವನ್ನ ಕಟ್ಟಿಕೊಳ್ಳಬೇಕಾದ ಸವಾಲು ನನ್ನ ಮುಂದಿತ್ತು. ಏನು ಮಾಡುವುದು? ಎಲ್ಲಿ ಹೋಗುವುದು? ಬಾಡಿಗೆಗೆಂದು ಬಹಳಷ್ಟು ಮನೆಗಳನ್ನ ಸುತ್ತಾಡಿ ನೋಡಿದೆ. ಎಲ್ಲರೂ 80 ಸಾವಿರದಿಂದ 1 ಲಕ್ಷದ ತನಕ ಅಡ್ಡಾನ್ ಕೇಳುತ್ತಿದ್ದರು. ಇರುವ ದುಡ್ಡು ಮನೆಯ ಅಡ್ವಾನ್ಸ್ ಗೆ ಕೊಟ್ಟರೆ ಮುಂದಿನ ಒಂದೆರಡು ತಿಂಗಳು ಕೆಲಸ ಹುಡುಕಲು ಸಮಯ ಬೇಕು. ಬಾಡಿಗೆ... ಬದುಕು... ಹಣ ತರುವುದು ಎಲ್ಲಿಂದ?? ಕೊನೆಗೆ ಸಿಕ್ಕವರು ನಿಮ್ಮ ಅಪ್ಪ. ಅವರ ಬಳಿ ನನ್ನ ಕಥೆ ಹೇಳಿಕೊಂಡೆ. ಒಂದು ಚಾನ್ಸ್ ಕೊಡಿ ಸಾರ್ ಜೀವನವನ್ನ ಮತ್ತೆ ಹಳಿಗೆ ತರಬೇಕಿದೆ ಎಂದು ಮನವಿ ಮಾಡಿಕೊಂಡೆ. ನಿಮ್ಮ ತಂದೆ 80ರ ಬದಲು 40 ಸಾವಿರ ಅಡ್ವಾನ್ಸ್ ತೆಗೆದುಕೊಂಡು ಅಂದು ನನಗೆ ಮನೆ ಬಾಡಿಗೆಗೆ ಕೊಟ್ಟರು. ಮುಂದಿನ ಒಂದು ತಿಂಗಳಲ್ಲಿ ಕೆಲಸ ಹುಡುಕಿಕೊಂಡೆ, ಬದುಕು ಈಗ ಹಸನಾಗಿದೆ. ಬುಲೆಟ್ ಆಯ್ತು, ಕಾರು ಕೊಂಡೆ, ಮದುವೆ ಆಯ್ತು, ಪುಟಾಣಿ ಗೌರಿ ಕೂಡ ನಮ್ಮ ಬಾಳಿಗೆ ಬಂದಿದ್ದಾಳೆ. ಇನ್ನು ಸ್ವಂತ ಮನೆ ಮಾಡುವುದು ಒಂದು ಬಾಕಿ ಇದೆ. ಭಗವಂತನ ದಯೆಯಿಂದ ಇನ್ನೊ೦ದೆರಡು ವರ್ಷದಲ್ಲಿ, ಅದೂ ಈಡೇರುವ ಲಕ್ಷಣಗಳು ಕಾಣುತ್ತಿವೆ.'' ಅಪ್ಪನ ಅಂತಿಮ ದರ್ಶನ ಪಡೆಯಲು ಬಂದ ನಮ್ಮ ಒಬ್ಬ ಟೆನೆಂಟ್ ಹೇಳಿಕೊಂಡ ಕಥೆ ಮೇಲಿನದು.\u003cbr\u003e\u003cbr\u003eಅಣ್ಣ (ಅಪ್ಪ) ಬದುಕಲ್ಲಿ ಒಂದಲ್ಲ ಹಲವು ಪ್ರಯತ್ನಗಳನ್ನ ಮಾಡಿದ್ದರು. ಅವೆಲ್ಲದರಲ್ಲೂ ಸೋತಿದ್ದರು. ಪಾರ್ಟನರ್ ಶಿಪ್ ವ್ಯವಹಾರದಲ್ಲಿ ಕೂಡ ಅಣ್ಣ ಸಾಕಷ್ಟು ಪೆಟ್ಟು ತಿಂದವರು. ಹೀಗಾಗಿ ಅಣ್ಣನಿಗೆ ಸಿಂಪಥಿ ಜಾಗದಲ್ಲಿ ಎಂಪಥಿ ಇತ್ತು ಅನ್ನಿಸುತ್ತೆ. ವ್ಯವಹಾರದಲ್ಲಿ ಭಾವನೆಗೆ ಜಾಗವಿಲ್ಲ ಎನ್ನುವುದು ನನ್ನ ಫಿಲಾಸಫಿ, ಅಣ್ಣ ಅದಕ್ಕೆ ತದ್ವಿರುದ್ಧವಾಗಿ ಭಾವನೆಯೇ ಬದುಕು ಎಂದು ಬದುಕಿದವರು. ಯಾವುದು ಸರಿ? ಯಾವುದು ತಪ್ಪು? ಅಣ್ಣ ಪ್ರತಿ ಬಿಸಿನೆಸ್ನಲ್ಲಿ ಸೋತಾಗ ಆತನ ಕೈ ಹಿಡಿಯಲು ಯಾರೂ ಇರಲಿಲ್ಲ. ಆಗ ಆತನ ಮನಸ್ಥಿತಿ ಹೇಗಿದ್ದಿರಬಹುದು? ಎಂದು ಈಗ ಯೋಚಿಸಿದಾಗೆಲ್ಲ ಅಯ್ಯೋ ಎನ್ನಿಸುತ್ತೆ. ಅಗೈನ್ ಸಿಂಪಥಿ ಅಷ್ಟೇ... ಎಂಪಥಿ ಬದುಕಲ್ಲಿ ಬರಲು ನಾವು ಆ ಹಾದಿಯಲ್ಲಿ ನಡೆದಿರಬೇಕು.\u003c\/div\u003e\n\u003c\/div\u003e\n\u003c\/div\u003e\n\u003c\/div\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":47753598566683,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/appana-haadi-1428312.jpg?v=1767534785"},{"product_id":"108-daily-money","title":"108 ಡೈಲಿ ಮನಿ | 108 Daily Money Kannada Book","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\" data-mce-fragment=\"1\"\u003e\n\u003ch1 data-mce-fragment=\"1\"\u003e108 ದೈನಂದಿನ ಹಣ\u003c\/h1\u003e\n\u003c\/div\u003e\n\u003cdiv width=\"1\" class=\"sc-AxhCb gKVXDt\" data-mce-fragment=\"1\"\u003e\n\u003cdiv width=\"1\" class=\"sc-AxhCb ewPPi\" data-mce-fragment=\"1\"\u003e\n\u003cdiv font-size=\"12,14\" class=\"sc-Axmtr ProductImageDetailCard__AboutText-xxaxm9-0 cRtGku\" data-mce-fragment=\"1\"\u003eby\u003cspan data-mce-fragment=\"1\"\u003e ರಂಗಸ್ವಾಮಿ ಮೂಕನಹಳ್ಳಿ\u003c\/span\u003e\u003ca href=\"https:\/\/www.sapnaonline.com\/shop\/author\/rangaswamy-mookanahalli\" data-mce-fragment=\"1\"\u003e\u003cspan data-mce-fragment=\"1\"\u003e \u003c\/span\u003e\u003c\/a\u003e(ಲೇಖಕ),\u003c\/div\u003e\n\u003cdiv font-size=\"12,14\" class=\"sc-Axmtr ProductImageDetailCard__AboutText-xxaxm9-0 flZGeh\" data-mce-fragment=\"1\"\u003eಸವನ್ನಾ ಎಂಟರ್‌ಪ್ರೈಸಸ್ (ಪ್ರಕಾಶಕರು)\u003c\/div\u003e\n\u003c\/div\u003e\n\u003c\/div\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":47753617441051,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/108-daily-money-5789875.jpg?v=1767534125"},{"product_id":"badukigondu-bharavase","title":"ಬದುಕಿಗೊಂದು ಭರವಸೆ | ಸ್ಪೂರ್ತಿದಾಯಕ ಕನ್ನಡ ಪುಸ್ತಕ","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\n\u003ch1\u003eBadukigondu Bharavase ಬದುಕಿಗೊಂದು ಭರವಸೆ\u003c\/h1\u003e\n\u003c\/div\u003e\n\u003cdiv class=\"sc-AxhCb gKVXDt\" width=\"1\"\u003e\n\u003cdiv class=\"sc-AxhCb ewPPi\" width=\"1\"\u003eby;ರಂಗಸ್ವಾಮಿ ಮೂಕನಹಳ್ಳಿ;(ಲೇಖಕರು), ಸವಣ್ಣ ಎಂಟರ್‌ಪ್ರೈಸಸ್ (ಪ್ರಕಾಶಕರು);\u003c\/div\u003e\n\u003c\/div\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":47753634218267,"sku":"","price":203.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/badukigondu-bharavase-4315829.jpg?v=1767534665"},{"product_id":"sheru-saamrajya-kalitavane-adhipati","title":"ಷೇರು ಸಾಮ್ರಾಜ್ಯ ಕಲಿತವನೇ ಅಧಿಪತಿ | Stock Market Kannada Book","description":"\u003cdiv class=\"sc-Axmtr ProductImageDetailCard__TitleText-xxaxm9-1 dJMXcH\"\u003e\n\u003ch1\u003eಶೇರು ಸಾಮ್ರಾಜ್ಯ ಕಲಿತವನೆ ಅಧಿಪತಿ\u003c\/h1\u003e\n\u003c\/div\u003e\n\u003cdiv class=\"sc-AxhCb gKVXDt\" width=\"1\"\u003e\n\u003cdiv class=\"sc-AxhCb ewPPi\" width=\"1\"\u003e\n\u003cdiv data-expanded=\"false\" class=\"a-expander-content a-expander-partial-collapse-content\"\u003e\u003cspan\u003eರಂಗಸ್ವಾಮಿ ಮೂಕಾನಹಳ್ಳಿ ಅವರ ಸ್ಟಾಕ್ ಮಾರುಕಟ್ಟೆಗೆ ಒಂದು ಹರಿಕಾರರ ಮಾರ್ಗದರ್ಶಿ\u003c\/span\u003e\u003c\/div\u003e\n\u003c\/div\u003e\n\u003c\/div\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":47753647358235,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sheru-saamrajya-kalitavane-adhipati-2786683.jpg?v=1767535265"},{"product_id":"hana-hani-madilininda-manninavarege","title":"ಹಣ ಹಣಿ | ವೈಯಕ್ತಿಕ ಹಣಕಾಸು ಕನ್ನಡ ಪುಸ್ತಕ","description":"\u003cp\u003eತೊಟ್ಟಿಲಿನಿಂದ ಸಮಾಧಿಯವರೆಗಿನ ಎಲ್ಲಾ ಆರ್ಥಿಕ ನಿರ್ಧಾರಗಳ ಬಗ್ಗೆ ಒಂದು ಪುಸ್ತಕ\u003cbr\u003eರಚನೆ: ರಂಗಸ್ವಾಮಿ ಮೂಕಾನಹಳ್ಳಿ\u003c\/p\u003e\n\u003cp\u003eನಾವು ಕ್ರಿಕೆಟ್, ಚೆಸ್, ಕಬಡ್ಡಿ: ಹೀಗೆ ಹಲವಾರು ಆಟಗಳನ್ನು ನೋಡಿದ್ದೇವೆ, ಆಡಿದ್ದೇವೆ.\u003c\/p\u003e\n\u003cp\u003eಆ ಆಟಗಳಿಗೆ ನಿಯಮಾವಳಿಗಳಿವೆ. ನಿಯಮವನ್ನು ಸರಿಯಾಗಿ ತಿಳಿದುಕೊಂಡವರು, ಶ್ರದ್ಧೆಯಿಂದ ಆಟವನ್ನು ಪ್ರಾಕ್ಟಿಸ್ ಮಾಡಿದವರು ಆಟದಲ್ಲಿ ಮೇಲುಗೈ ಸಾಧಿಸುವುದು ಸಹಜ. ಬದುಕು ಕೂಡ ಥೇಟ್ ಹೀಗೇ ಕಣ್ರೀ, ಇಲ್ಲೂ ನಿಯಮಾವಳಿಗಳಿವೆ. ಅದನ್ನು ಎಷ್ಟು ಬೇಗ ಅರಿತುಕೊಳ್ಳುತ್ತೇವೆಯೋ ಅಷ್ಟು ನಮಗೆ ಒಳ್ಳೆಯದು. ಈ ರೀತಿಯ ಹುಟ್ಟಿನಿಂದ-ಸಾವಿನವರೆಗೆ ಮನುಷ್ಯನ ಜೀವನದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳಿಗೆ ಒಂದು ಔಟ್‌ಲೈನ್ ಅಥವಾ ಒಂದು ಸ್ಟ್ಯಾಂಡರ್ಡ್ ಪ್ಯಾರಾಮೀಟರ್, ಪರಿಧಿಯನ್ನು ಇಲ್ಲಿಯವರೆಗೆ ಯಾರೂ ಹೇಳಿಲ್ಲ. ಏಕೆಂದರೆ ಬದುಕು ಎರಡು ಪ್ಲಸ್ ಎರಡು ನಾಲ್ಕಕ್ಕೆ ಸಮ ಎನ್ನುವಷ್ಟು ಸರಳವಲ್ಲ. ಆದರೆ ಬಹುಪಾಲು ಸಮಯ ನಾವು ಎಲ್ಲಕ್ಕೂ ಪ್ಯಾರಾಮೀಟರ್ ಸೆಟ್ ಮಾಡಬಹುದು. ವೈದ್ಯಕೀಯ ವಿಜ್ಞಾನದಲ್ಲಿ ಬಿಪಿ, ಶುಗರ್, ಪ್ಲೇಟ್‌ಲೆಟ್ ಇಷ್ಟಿರಬೇಕು ಎನ್ನುವ ಪ್ಯಾರಾಮೀಟರ್ ಇದೆ. ಅದೇ ರೀತಿ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದು ಪ್ಯಾರಾಮೀಟರ್ ಸೃಷ್ಟಿಸುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಿದ್ದೇನೆ. ಹೇಗೆ ಬಿಪಿ, ಶುಗರ್ ಅವರು ಹೇಳಿದಷ್ಟು ಎಲ್ಲರಲ್ಲೂ ಇರುವುದಿಲ್ಲವೋ ಹಾಗೆಯೇ ಇಲ್ಲಿ ನಾನು ಹೇಳಿರುವ ಪ್ಯಾರಾಮೀಟರ್ ಕೂಡ ನಿಮ್ಮ ಬದುಕಿನ ಲೆಕ್ಕಾಚಾರಕ್ಕಿಂತ ಭಿನ್ನವಾಗಿರಬಹುದು. ಇಲ್ಲಿ ಹೇಳಿರುವುದು ಒಂದು ಸ್ಟ್ಯಾಂಡರ್ಡ್ ಪರಿಧಿ. ಇದರ ಸುತ್ತಮುತ್ತವಿದ್ದರೆ ಅಷ್ಟರಮಟ್ಟಿಗೆ ನಮ್ಮ ಬದುಕು ಸರಾಗ.\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":48659103678747,"sku":"","price":243.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hana-hani-madilininda-manninavarege-8219770.jpg?v=1767533346"},{"product_id":"nanendigu-soluvudilla-sotaradu-nanalla","title":"I never lose, if I lose it's not me.","description":"\u003cp\u003eOne must learn to relish defeat, for only defeat reveals the true meaning of life. Victory teaches no lessons. The moment we win, we start enjoying it. Thus, it prepares us for defeat from the very next moment. Defeat is not like that; it creates room for self-reflection. Hence, it always pushes us towards victory. Now tell me, should we love victory or defeat? Isn't it surprising? If we just change the way we look at life, it will change our lives. If the pain caused by defeat is extremely high, it means that success is waiting to embrace us just a foot or two away. We don't realize this because the immense pain caused by defeat sometimes lasts for years!\u003c\/p\u003e\n\u003cp\u003eThe philosophy mentioned in the above lines was born from life's experiences! The title of this book, 'I Never Lose, It's Not Me Who Lost!', is not a statement born of arrogance. It is a title born from seeing the 18 great personalities in this book! It is the name of a personality! The name of determination! The name of self-confidence!\u003c\/p\u003e\n\u003c!----\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":49290650124571,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nanendigu-soluvudilla-sotaradu-nanalla-9529977.jpg?v=1767532747"},{"product_id":"galike-ulike-hoodike","title":"ಗಳಿಕೆ ಉಳಿಕೆ ಹೂಡಿಕೆ | Money Management Kannada Book","description":"\u003cp\u003eಹಣಕಾಸು ವ್ಯವಸ್ಥೆಯನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಎಲ್ಲಕ್ಕೂ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ನಿಮಗೆಲ್ಲಾ ಗೊತ್ತಿರಲಿ, ಹಣಕಾಸು ವ್ಯವಸ್ಥೆಯಲ್ಲಿ ದೈಹಿಕ ಶ್ರಮದಿಂದ ಸ್ಥಿತಿವಂತರಾಗಲು ಸಾಧ್ಯವಿಲ್ಲ. ಬೆಳಿಗ್ಗೆಯಿಂದ ರಾತ್ರಿ ನಿಷ್ಠೆಯಿಂದ ದುಡಿಯುವುದರಿಂದ ಕೂಡ ಇದು ಸಾಧ್ಯವಿಲ್ಲ. ಇನ್ನು ವಾಮ ಮಾರ್ಗಗಳ ಮೂಲಕ ಇದನ್ನು ಸಾಧಿಸಿಕೊಳ್ಳುವುದು ಸುಲಭದ ಮಾತಲ್ಲ. ಹೀಗಾಗಿ ನಮ ಮುಂದಿರುವ ಏಕೈಕ ಮಾರ್ಗ ಹೂಡಿಕೆ! ಹೌದು ನಮ ಇಂದಿನ ಹಣಕಾಸು ವ್ಯವಸ್ಥೆಯಲ್ಲಿನ ಮೇಲಿನ ಮೆಟ್ಟಿಲುಗಳನ್ನು ಹತ್ತಲು ಹೂಡಿಕೆಯ ಸಹಾಯ ಪಡೆಯದೆ ಅನ್ಯ ಮಾರ್ಗವಿಲ್ಲ. ನಿಮಗೆಲ್ಲಾ ಗೊತ್ತಿರಲಿ ಗಳಿಕೆ ಬಹಳ ಮುಖ್ಯ, ಅದಿಲ್ಲದೆ ಉಳಿಕೆ ಮತ್ತು ಹೂಡಿಕೆಗಳ ಪ್ರಸ್ತಾಪ ಮಾಡಲು ಕೂಡ ಸಾಧ್ಯವಿಲ್ಲ. ಇಂದಿನ ದಿನದಲ್ಲಿ ಉಳಿಕೆ ಮತ್ತು ಹೂಡಿಕೆಯ ನಡುವೆ ಅಗಾಧ ಅಂತರವಿದೆ. ಅದೇನು? ಉಳಿಕೆಯ ಮಾರ್ಗಗಳು, ಹೂಡಿಕೆಯ ಮಾರ್ಗಗಳು ಅಲ್ಲಿ ಎದುರಾಗುವ ಅವಕಾಶ, ಸವಾಲುಗಳೇನು?-ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವಿಲ್ಲಿದೆ. ಅಪಾಯವೆಂದು ಹೂಡಿಕೆ ಮಾಡದೆ ಹಣವನ್ನು ನಿಮ ಬಳಿ ಇಟ್ಟುಕೊಂಡರೂ ಹಣದುಬ್ಬರ ಅದನ್ನು ಕರಗಿಸಿ ಬಿಡುವುದು ಗ್ಯಾರಂಟಿ. ಕೊನೆಪಕ್ಷ ಹೂಡಿಕೆಯಲ್ಲಿ ಹಣವನ್ನು ವೃದ್ಧಿಸಿಕೊಳ್ಳುವ ಸಂಭಾವ್ಯತೆ ಇದೆ.\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":49710816133403,"sku":"","price":243.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/galike-ulike-hoodike-9192581.jpg?v=1767531846"},{"product_id":"japaninalli-ranga","title":"ಜಪಾನಿನಲ್ಲಿ ರಂಗ | ಜಪಾನ್ ಪ್ರಯಾಣ ಕನ್ನಡ ಪುಸ್ತಕ","description":"\u003cp class=\"MsoNormal\" style=\"margin: 0mm; color: rgb(34, 34, 34); font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: start; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(255, 255, 255); text-decoration-thickness: initial; text-decoration-style: initial; text-decoration-color: initial; line-height: 22px; background-image: initial; background-position: initial; background-size: initial; background-repeat: initial; background-origin: initial; background-clip: initial; font-size: 11pt; font-family: Calibri, sans-serif;\"\u003e\u003cspan lang=\"EN-IN\" style=\"font-size: 14pt; line-height: 28px; font-family: Arial, sans-serif;\"\u003eIf we change the way we look at life, many things become tolerable for us. The sorrow and worries in our minds disappear. I have never sought perfection in life. Because who certifies something as perfect? What proof is there that it is perfect? Moreover, this \"perfect\" is a time-sensitive matter. What seems perfect today, now, might have changed the very next moment, right? In creation, nothing is entirely complete, and nothing is entirely incomplete. A part of the whole is incomplete, yet it is also complete within its scope! In creation, \"imperfect, impermanent and incomplete\" is the only truth. The Japanese call this practice of seeing things in nature as they are 'Wabi Sabi'. My trip to Japan has reinforced several of my beliefs. Life is an Endless Discovery!\u003c\/span\u003e\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":49920988676379,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/japaninalli-ranga-9357976.jpg?v=1767531246"},{"product_id":"lakshadhipatiya-gunalakshanagalu","title":"ಲಕ್ಷಾಧಿಪತಿಯ ಗುಣಲಕ್ಷಣಗಳು | Millionaire Mindset Kannada Book","description":"\u003cp\u003eಅಸಾಮಾನ್ಯರು ಎನ್ನಿಸಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೆ! ಹೌದಲ್ವಾ? ನೀವೇ ಯೋಚಿಸಿ ನೋಡಿ, ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೆ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಕೆಲವೊಂದು ಹುಟ್ಟಿನಿಂದ ಬಂದಿರುತ್ತದೆ ಎನ್ನುವುದು ನಿಜವಾದರೂ, ಬಹುತೇಕ ಗುಣಗಳನ್ನು ಕಲಿಕೆಯಿಂದ, ಸ್ವ-ಪ್ರಯತ್ನದಿಂದ ಅಳವಡಿಸಿಕೊಳ್ಳಬಹುದು. ಜಗತ್ತಿನ ಮುಕ್ಕಾಲು ಪಾಲು ಶೀಮಂತರು ಸೆಲ್ಫ್ ಮೇಡ್‌. ಅವರಿಗೂ ಯಾವ ಗಾಡ್‌ಫಾದರ್‌ ಇರಲಿಲ್ಲ ಎನ್ನುವುದು ಗೊತ್ತಿರಲಿ.\u003c\/p\u003e\n\u003cp\u003e \u003c\/p\u003e\n\u003cp\u003eನಿಮಗೆಲ್ಲಾ ಒಂದು ಅಚ್ಚರಿಯ ವಿಷಯವನ್ನು ಹೇಳುವೆ. ಅಚಾನಕ್ಕಾಗಿ ಅಂದರೆ ಲಾಟರಿ ಮೂಲಕ ಹಣ ಗಳಿಸಿದವರಲ್ಲಿ 70ಕ್ಕೂ ಹೆಚ್ಚು ಪ್ರತಿಶತ ಜನ ಒಂದೆರಡು ವರ್ಷಗಳಲ್ಲಿ ದಿವಾಳಿ ಎದ್ದು ಹೋಗುತ್ತಾರೆ ಎನ್ನುತ್ತದೆ ಸಂಶೋಧನೆ. ಅಮೆರಿಕನ್‌ ಬಾಂಕ್ರಾಫ್ಟ್ಸಿ ಇನ್ಸ್ಟಿಟ್ಯೂಟ್‌ ನಡೆಸಿದ ಸಂಶೋಧನೆಯಲ್ಲಿ ಲಾಟರಿ ಗೆದ್ದವರಲ್ಲಿ ಮೆಜಾರಿಟಿ 2ರಿಂದ 5 ವರ್ಷಗಳಲ್ಲಿ ದಿವಾಳಿ ಘೋಷಿಸಿಕೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿದೆ. ಇದರರ್ಥ ಸುಲಭವಾಗಿ ಬಂದದ್ದು ಸುಲಭವಾಗಿ ಹೋಗುತ್ತದೆ. ನಮಗ್ಯಾವುದೂ ಪುಕ್ಕಟೆ ಬೇಡ. ಸುಲಭವಾಗುವುದೂ ಬೇಡ. ಕ್ಷಮತೆ ಹೆಚ್ಚಿಸಿಕೊಳ್ಳೋಣ, ಇಲ್ಲಿನ ಗುಣಗಳನ್ನು ಅಳವಡಿಸಿಕೊಳ್ಳೋಣ. ಅವು ನಿಜಕ್ಕೂ ನಮ್ಮೊಂದಿಗೆ ಕೊನೆಯವರೆಗೂ ಬರುತ್ತವೆ.\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":50166262432027,"sku":null,"price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/lakshadhipatiya-gunalakshanagalu-2181214.jpg?v=1767528667"},{"product_id":"sanna-uddimegalannu-kattuvudu-hege","title":"ಸಣ್ಣ ಉದ್ಯಮಗಳನ್ನು ಕಟ್ಟುವುದು ಹೇಗೆ | How to build small businesses?","description":"\u003cp\u003e\u003cbr\u003eಸಣ್ಣ ಉದ್ದಿಮೆಗಳನ್ನು ಕಟ್ಟುವುದು ಹೇಗೆ?\u003c\/p\u003e\n\u003cp\u003eನಿಮ್ಮ ಕೊನೆ ವೇತನವನ್ನು ನಿಮ್ಮ ಮಗಳು ಅಥವಾ ಮಗ ಮೊದಲ ತಿಂಗಳ ವೇತನವನ್ನಾಗಿ ಪಡೆಯುವ ಸಾಧ್ಯತೆ ಎಷ್ಟು? ಆ ಮಟ್ಟದ ಸಂಬಳ ಪಡೆಯಲು ಅವರೆಷ್ಟು ಸೈಕಲ್ ಹೊಡೆಯಬೇಕು ಗೊತ್ತಲ್ವಾ?\u003c\/p\u003e\n\u003cp\u003eಅದೇ ಉದ್ದಿಮೆ ಕಟ್ಟಿದವನು ನಿವೃತ್ತಿ ಹೊಂದಿದ ತಿಂಗಳು ಪಡೆದುಕೊಂಡ ಲಾಭ ಆತನ ಮಗಳು ಅಥವಾ ಮಗ ಮುಂದಿನ ತಿಂಗಳು ಪಡೆದು ಕೊಳ್ಳಬಹುದು. ಅದಕ್ಕಿಂತ ಹೆಚ್ಚು ಆಗಬಹುದು. ಕಡಿಮೆಯಾದರೂ ತುಂಬಾ ಕುಸಿತವಂತೂ ಇರುವುದಿಲ್ಲ.\u003c\/p\u003e\n\u003cp\u003eಅರ್ಥವಿಷ್ಟೇ ನೀವೇಷ್ಟೇ ವರ್ಷ ಕೆಲಸ ಮಾಡಿ ನೀವು ಆ ಲೆಗೆಸಿಯ ಕಂಟಿನ್ಯೂಟಿ ನಿಮ್ಮ ಮಕ್ಕಳಿಗೆ ಬಿಟ್ಟು ಹೋಗಲಾರಿರಿ. ಅಂದರೆ ನೀವೇಷ್ಟೆ ಮೆಟ್ಟಿಲು ಹತ್ತಿದ್ದರೂ ನಿಮ್ಮ ಮಕ್ಕಳು ಮತ್ತೆ ಮೊದಲ ಮೆಟ್ಟಿಲಿಂದ ಶುರು ಮಾಡಬೇಕು! ಉದ್ದಿಮೆಯಲ್ಲಿ ನೀವು ಎಷ್ಟು ಮೆಟ್ಟಿಲು ಏರಿರುತ್ತೀರಿ ನಿಮ್ಮ ಮಕ್ಕಳು ಅಲ್ಲಿಂದ ಶುರು ಮಾಡುತ್ತಾರೆ. ಅವರಿಗೆ ಒಂದು ತಲೆಮಾರಿನ ಕಷ್ಟದ ಲಾಭ ಸಿಗುತ್ತೆ. ಅಂದರೆ ಕಂಟಿನ್ಯೂಟಿ ಸಿಗುತ್ತದೆ. ಇದರ ಜೊತೆಗೆ Al ಬರುತ್ತಿದೆ. ಅದು ಸಣ್ಣ ಉದ್ದಿಮೆ ಕಟ್ಟುವುದನ್ನು ಆಯ್ಕೆಯಾಗಿ ಉಳಿಸುವುದಿಲ್ಲ. ಅನಿವಾರ್ಯವಾಗಿಸಲಿದೆ.\u003c\/p\u003e\n\u003cp\u003eಈ ನಿಟ್ಟಿನಲ್ಲಿ:\u003c\/p\u003e\n\u003cp\u003eಸಣ್ಣ ಉದ್ದಿಮೆ ಕಟ್ಟುವುದು ಹೇಗೆ? ಅದಕ್ಕೆ ಬೇಕಾದ ಮನಸ್ಥಿತಿಯೇನು? ಯಾವ ಫಾರ್ಮ್ಯಾಟ್ ಆಯ್ಕೆ ಮಾಡಿಕೊಳ್ಳಬೇಕು? ಉದ್ದಿಮೆ ತೆರೆಯಲು ಬೇಕಾಗುವ ಅನುಮತಿ ಪತ್ರಗಳು ಯಾವುವು? ಅವುಗಳನ್ನು ಪಡೆಯುವುದು ಹೇಗೆ? ಫಂಡ್ ರೈಸಿಂಗ್ ಹೇಗೆ? ಒಟ್ಟಾರೆ ಸಣ್ಣ ಉದ್ದಿಮೆ ಕಟ್ಟಲು ಬೇಕಾಗುವ ಎಲ್ಲಾ ಅವಶ್ಯ ಮಾಹಿತಿ ಇಲ್ಲಿದೆ.\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":50508811501851,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sanna-uddimegalannu-kattuvudu-hege-1671109.jpg?v=1767528785"},{"product_id":"ee-hanakasu-tappugalannu-neevu-madabedi","title":"ಈ ಹಣಕಾಸು ತಪ್ಪುಗಳನ್ನು ನೀವು ಮಾಡಬೇಡಿ | Financial Mistakes Kannada Book","description":"\u003cp\u003e* ಸೈಕಲಾಜಿಕಲ್ ತಪ್ಪುಗಳು\u003cbr\u003e* ಬ್ಯಾಂಕಿಂಗ್ ಮತ್ತು ನಗದು ಹರಿವಿನ ತಪ್ಪುಗಳು\u003cbr\u003e* ಬಜೆಟ್ ಮಾಡುವಲ್ಲಿ ಮತ್ತು ಖರ್ಚು ಮಾಡುವಲ್ಲಿನ ತಪ್ಪುಗಳು\u003cbr\u003e* ಹೂಡಿಕೆ ತಪ್ಪುಗಳು\u003cbr\u003e* ತೆರಿಗೆ ಮತ್ತು ಕಾನೂನು ತಪ್ಪುಗಳು\u003cbr\u003e* ಸಾಲಕ್ಕೆ ಸಂಬಂಧಿಸಿದ ತಪ್ಪುಗಳು\u003cbr\u003e* ವಿಮೆಗೆ ಸಂಬಂಧಿಸಿದ ತಪ್ಪುಗಳು\u003cbr\u003e* ಜೀವನಶೈಲಿ ತಪ್ಪುಗಳು\u003cbr\u003e* ಯೋಜನೆಯಲ್ಲಿನ ತಪ್ಪುಗಳು\u003cbr\u003e* ಭಾವನಾತ್ಮಕ ತಪ್ಪುಗಳು\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":51278116782363,"sku":null,"price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ee-hanakasu-tappugalannu-neevu-madabedi-a-book-on-common-financial-mistakes-2208744.jpg?v=1767528546"},{"product_id":"collection-of-rangaswamy-mookanahalli-set-of-5-books","title":"ರಂಗಸ್ವಾಮಿ ಮೂಕನಹಳ್ಳಿ ಕೃತಿಗಳು (5 ಪುಸ್ತಕಗಳ ಸೆಟ್) | Kannada Books Combo","description":"\u003cp\u003e\u003cstrong\u003eಈ ಕಾಂಬೋದಲ್ಲಿ ಸೇರಿಸಲಾದ ಪುಸ್ತಕಗಳು:\u003c\/strong\u003e\u003c\/p\u003e\n\u003cul\u003e\n\u003cli\u003eಶೆರು ಸಾಮ್ರಾಜ್ಯ ಕಲಿತವನೆ ಅಧಿಪತಿ\u003c\/li\u003e\n\u003cli\u003eಗಳಿಕೆ ಉಳಿಖೆ ಹೂಡಿಕೆ - ಹಣಕಾಸು ಆರೋಗ್ಯಕ್ಕೆ ಮಂತ್ರಗಳು\u003c\/li\u003e\n\u003cli\u003eಸಿರಿವಂತಿಕೆಗೆ ಸರಳ ಸೂತ್ರಗಳು\u003c\/li\u003e\n\u003cli\u003eಲಕ್ಷಾಧಿಪತಿಯ ಗುಣಲಕ್ಷಣಗಳು\u003c\/li\u003e\n\u003cli\u003eಹಣ ಹನಿ : ಮಡಿಲಿನಿಂದ ಮಣ್ಣಿನವರೆಗೆ\u003c\/li\u003e\n\u003c\/ul\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":51294122737947,"sku":null,"price":999.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/collection-of-rangaswamy-mookanahalli-set-of-5-books-5391874.jpg?v=1767528307"},{"product_id":"death-folder-by-rangaswamy-mookanahalli","title":"ಡೆತ್ ಫೋಲ್ಡರ್ | Death Folder ಕನ್ನಡ ಪುಸ್ತಕ","description":"\u003cp\u003eಇಲ್ಲಿ ಬದುಕಿನುದ್ದಕ್ಕೂ ನಾವು ಕಟ್ಟಿಕೊಂಡು ಬಂದ ಎಲ್ಲವನ್ನೂ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಅಥವಾ ಯಾರನ್ನು ನಾವು ಮುಂದಿನ ವಾರಸುದಾರ ಅಥವಾ ವಾರಸುದಾರಳು ಎಂದುಕೊಳ್ಳುತ್ತೇವೋ ಅವರ ಬದುಕು ಸರಾಗವಾಗುತ್ತದೆ. ನಿಮಗೆಲ್ಲಾ ಗೊತ್ತಿರಲಿ ಬ್ಯಾಂಕುಗಳಲ್ಲಿ, ಇನ್ಸೂರೆನ್ಸ್ ಕಂಪೆನಿಗಳಲ್ಲಿ ವಾಪಸ್ಸು ಪಡೆಯದ ಕೋಟ್ಯಂತರ ಹಣವಿದೆ. ಬ್ಯಾಂಕುಗಳಲ್ಲಿ ಒಟ್ಟಾರೆ 78 ಸಾವಿರ ಕೋಟಿ ರೂಪಾಯಿ ಹಣವನ್ನು ಅಂದರೆ ಡೆಪಾಸಿಟ್ ಹಣವನ್ನು ಯಾರೂ ಕ್ಷೇಮ್ ಮಾಡಿಲ್ಲ; ಇನ್ನು 14 ಸಾವಿರ ಕೋಟಿ ರೂಪಾಯಿ ಇನ್ಸೂರೆನ್ಸ್ ಕಂಪೆನಿಗಳಲ್ಲಿ ಕ್ಷೇಮ ಮಾಡದೆ ಉಳಿದಿರುವ ಹಣ! ಅಂದರೆ ಈ ರೀತಿಯ 'ಡೆತ್ ಫೋಲ್ಡರ್' ಸಿದ್ಧಪಡಿಸದ ಕಾರಣ ಮುಂದಿನ ಪೀಳಿಗೆಗೆ ಮಾಹಿತಿ ಕೊರತೆ ಇರುವ ಕಾರಣ ಈ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಲೆಕ್ಕಕ್ಕೆ ಸಿಗದ ಮೊತ್ತದ ಆಸ್ತಿಗಳು ಸರಿಯಾದ ವಾರಸುದಾರರಿಗೆ ತಲುಪುತ್ತಿಲ್ಲ. ನಾವೇಕೆ ಇದನ್ನು ಸಿದ್ಧಪಡಿಸಬೇಕು ಎನ್ನುವುದಕ್ಕೆ ಇಷ್ಟು ಕಾರಣ ಸಾಕು. ನಾವು ಸಿದ್ಧಪಡಿಸುವ ಈ 'ಡೆತ್ ಫೋಲ್ಡರ್' ನಮ್ಮನ್ನು ನಂಬಿದವರಿಗೆ ನಾವು ನೀಡುವ ನಿಜವಾದ ಉಡುಗೊರೆ.\u003c\/p\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":51709332455707,"sku":null,"price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/death-folder-by-rangaswamy-mookanahallibeetle-book-shop-1204754.jpg?v=1769775845"},{"product_id":"egypt-unlocked-unlocked","title":"Egypt Unlocked | ಈಜಿಪ್ಟ್  ಅನ್ಲಾಕ್ಡ್‌","description":"\u003cdiv class=\"ii gt\" id=\":mr\"\u003e\n\u003cdiv class=\"a3s aiL\" id=\":mq\"\u003e\n\u003cdiv id=\"avWBGd-20\"\u003e\n\u003cdiv dir=\"ltr\"\u003e\n\u003cspan lang=\"KN\"\u003eಈಜಿಪ್ಟ್ ಗೆ ಹೋಗಬೇಕು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಪಿರಮಿಡ್ಡುಗಳನ್ನು ಕಾಣಬೇಕು ಎನ್ನುವುದು ಪ್ಲಾನ್ ಮಾಡಿ ಆದದ್ದಲ್ಲ. ಈಜಿಪ್ಟ್ ನನ್ನ ಪವಾಸದ\u003cspan\u003e \u003c\/span\u003e\u003c\/span\u003e\u003cspan\u003e69\u003c\/span\u003e\u003cspan lang=\"KN\"\u003eನೇ ದೇಶ. ಈಜಿಪ್ಟ್ ಅಂತಲ್ಲ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಉಳಿದ\u003cspan\u003e \u003c\/span\u003e\u003c\/span\u003e\u003cspan\u003e68\u003c\/span\u003e\u003cspan lang=\"KN\"\u003e\u003cspan\u003e \u003c\/span\u003eದೇಶಗಳು ಕೂಡ ಪ್ಲಾನ್ ಮಾಡಿ ಆದದ್ದಲ್ಲ. ನಾನು ಯಾವತ್ತೂ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಯಾವುದನ್ನೂ ಬಯಸಿದವನಲ್ಲ. ಬಯಸಿದ ಮಾತ್ರಕ್ಕೆ ಸಿಗುವ ಬದುಕು ನನ್ನದು ಆಗಿರಲಿಲ್ಲ. ಹಾಸಿ ಹೊದ್ದುಕೊಳ್ಳುವ ಬಡತನ ಅಡ್ಜಸ್ಟ್  ಮಾಡುವುದನ್ನು ಚೆನ್ನಾಗಿ ಕಲಿಸಿ ಬಿಟ್ಟಿತ್ತು. ಹೀಗಾಗಿ ಹಿಂದಿ ಭಾಷಿಕರು ಹೇಳುವಂತೆ\u003cspan\u003e \u003c\/span\u003e\u003c\/span\u003e\u003cspan\u003e`\u003c\/span\u003e\u003cspan lang=\"KN\"\u003eಔಕಾತ್ ಮೇ ರಹೇ\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಎಂದು ಮನಸ್ಸಿಗೆ ಹೇಳಿಬಿಟ್ಟಿದ್ದೆ. ಅಟ್ಟಕ್ಕೆ ಏಣಿ ಹಾಕಬಹುದು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಆಕಾಶಕ್ಕೆ ಏಣಿ ಹಾಕಿದರೆ ಹೇಗೆ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಆಕಾಶಕ್ಕೆ ಏಣಿ ಹಾಕಲು ಸಾಧ್ಯವೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಒಪ್ಪತ್ತಿನ ಊಟಕ್ಕೇ ತಡಕಾಡುವ ಸಮಯದಲ್ಲಿ ವಿದೇಶ ಪ್ರವಾಸದ ಕನಸು ಕಾಣುವುದು ಅಪರಾಧ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಆಕಾಶಕ್ಕೆ ಏಣಿ ಹಾಕಿದಂತೆ ಎನ್ನುವುದು ಗೊತ್ತಾಗಿತ್ತು. ಹೀಗಾಗಿ ಪ್ರಾಕ್ಟಿಕಲ್ ಆಗಿರುವುದು ಕಲಿತು ಬಿಟ್ಟಿದ್ದೆ. ಈ ಎಲ್ಲಾ ಕಾರಣದಿಂದ ನಾನೊಬ್ಬ ಡೆಸ್ಟಿನಿ ಕಿಡ್. ಸ್ಲಂ ಹುಡುಗನೊಬ್ಬ ಗಾಡ್ ಫಾದರ್ಗಳಿಲ್ಲದೆ ಕೇವಲ ದೈವ ಅನುಗ್ರಹ ಮತ್ತು ಶ್ರಮದ ಫಲದಿಂದ\u003cspan\u003e \u003c\/span\u003e\u003c\/span\u003e\u003cspan\u003e69\u003c\/span\u003e\u003cspan lang=\"KN\"\u003e\u003cspan\u003e \u003c\/span\u003eದೇಶಗಳನ್ನು ಸುತ್ತಿದ ಎಂದು ಬಾಲಿವುಡ್ನವರು ಚಿತ್ರ ಮಾಡದ್ದಿರೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಎಲ್ಲರಿಗಿಂತ ಮುಂಚೆ ಇವೆಲ್ಲಾ ರೀಲ್ ಎಂದು ನಕ್ಕಿರುತ್ತಿದ್ದೆ. ಯಾವ ಕೋನದಿಂದ ನೋಡಿದರೂ ಬೆಂಗಳೂರು ನಗರದಲ್ಲಿ ಸ್ವಂತ ಮನೆ ಕಟ್ಟುವುದು ದೂರದ ಮಾತು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಮೂರು ಹೊತ್ತು ಅನ್ನಕ್ಕೆ ಅಡ್ಡಿಯಿಲ್ಲದ ಬದುಕು ಇವರು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ಬದುಕು ನನ್ನದಾಗಿತ್ತು. ಮುಂದಿನ ಹೊತ್ತಿನ ಊಟ ಗ್ಯಾರಂಟಿ ಇಲ್ಲದ ಬದುಕಿನಲ್ಲಿ ಇನ್ನೇನು ತಾನೇ ಪ್ಲಾನ್ ಮಾಡಲು ಸಾಧ್ಯ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಹೀಗಾಗಿ ಈಜಿಪ್ಟ್ ಜೊತೆಗೆ ಯಾವುದೂ ಪ್ಲಾನ್ಡ್ ಅಲ್ಲ. ಬದುಕು ಕರೆದತ್ತ ಮುಖ ಮಾಡಿ ನಡೆಯುತ್ತಾ ಬಂದಿದ್ದೇನೆ.\u003c\/span\u003e\n\u003c\/div\u003e\n\u003cdiv class=\"yj6qo\"\u003e\u003cbr\u003e\u003c\/div\u003e\n\u003cdiv class=\"adL\"\u003e\u003cbr\u003e\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cdiv class=\"hq gt\" id=\":n3\"\u003e\u003c\/div\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":52156596060443,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/1_EgyptFinalCoverpageve.jpg?v=1777867998"},{"product_id":"8-hanakasu-niyamagalu","title":"8 Hanakasu Niyamagalu | 8 ಹಣಕಾಸು ನಿಯಮಗಳು","description":"\u003cdiv\u003e\n\u003cspan lang=\"KN\"\u003eಟೈಮ್ ಇಲ್ಲ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹಣವಿಲ್ಲ ಎನ್ನುವ ಗೊಣಗಾಟ ಜಗತ್ತಿನ 90 ಪ್ರತಿಶತ ಜನರದ್ದು! ಉಳಿದ ಹತ್ತು ಪ್ರತಿಶತ ಜನರಲ್ಲಿ ಕೂಡ ಏಳು ಪ್ರತಿಶತ ಜನ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಈ ವೇಳೆಯನ್ನು ಮತ್ತು ಹಣವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ಉಳಿದವರ ಕಥೆಯೇನು\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಅದನ್ನು ಮೊದಲಿನ ಸಾಲಿನಲ್ಲಿ ಹೇಳಿದ್ದೇನೆ. ಅವರದು ನಿಲ್ಲದ ಗೊಣಗಾಟ. ಈ ಗೊಣಗಾಟ ನಿಲ್ಲಬೇಕೆಂದರೆ ಒಂದಷ್ಟು ನಿಯಮಗಳನ್ನು ತಿಳಿದುಕೊಳ್ಳಬೇಕು. ಇವು ಮೂಲಭೂತ ನಿಯಮಗಳು. ಇವು ತಪ್ಪಿದರೆ 90 ಪ್ರತಿಶತ ಪಟ್ಟಿಯಲ್ಲಿ ಒಬ್ಬರಾಗುವುದು ಸುಲಭ. ಒಂದು ವಿಷಯ ನೆನಪಿರಲಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಜಗತ್ತು ಮುಂಬರುವ ದಿನಗಳಲ್ಲಿ ಬಹಳ ಬದಲಾಗಲಿದೆ. ನಮ್ಮ ಟಾರ್ಗೆಟ್ ಜಗತ್ತಿನ ಪ್ರಥಮ ಒಂದು ಪ್ರತಿಶತದಲ್ಲಿ ಸ್ಥಾನ ಗಳಿಸುವುದು ಆಗಿರಬೇಕಿಲ್ಲ. ಅದು ಅಷ್ಟೊಂದು ಸುಲಭವೂ ಅಲ್ಲ. ನಾವು ಸಾಧಿಸಲು ಸಾಧ್ಯವಾಗುವ ಟಾರ್ಗೆಟ್ ಇಟ್ಟುಕೊಳ್ಳೋಣ. ಅದನ್ನು ಸಾಧಿಸುತ್ತ ಹೋಗೋಣ. ಎಲ್ಲವೂ ಸರಿಯಾದರೆ ಒಂದು ಪ್ರತಿಶತದಲ್ಲೂ ನಾವು ಸ್ಥಾನ ಪಡೆಯಬಹುದು. ನಾವು ಜಗತ್ತಿನ ಪ್ರಥಮ 10ರಿಂದ 15 ಪ್ರತಿಶತದಲ್ಲಿ ಸ್ಥಾನ ಪಡೆದುಕೊಂಡರೆ ಇಲ್ಲಾಗುವ ಬದಲಾವಣೆಗಳು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅಸ್ಥಿರತೆಗಳ ನೋವು ತಟ್ಟುವುದಿಲ್ಲ. ತಟ್ಟಿದರೂ ಅದನ್ನು ತಡೆದುಕೊಳ್ಳುವ ಕ್ಷಮತೆ ನಮ್ಮಲ್ಲಿ ಉತ್ಪನ್ನವಾಗಿರುತ್ತದೆ.\u003c\/span\u003e\n\u003c\/div\u003e\n\u003cdiv\u003e\u003c\/div\u003e","brand":"Rangaswamy Mookanahalli | ರಂಗಸ್ವಾಮಿ ಮೂಕನಹಳ್ಳಿ","offers":[{"title":"Default Title","offer_id":52156641280283,"sku":null,"price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/1_8HanakasuNiyamagaluve.jpg?v=1777868372"}],"thumbnail_url":"\/\/cdn.shopify.com\/s\/files\/1\/0686\/2150\/0699\/collections\/rangaswamy-mookanahalli-2144085.jpg?v=1767528142","url":"https:\/\/beetlebookshop.com\/kn\/collections\/rangaswamy-mookanahalli-books.oembed","provider":"Beetle Book Shop","version":"1.0","type":"link"}