{"title":"ನವೀನ್ ಸೂರಿಂಜೆ ಅವರ ಪುಸ್ತಕಗಳು | Naveen Soorinje Books – Beetle Bookshop","description":"\u003cp dir=\"ltr\" data-mce-fragment=\"1\"\u003e\u003cspan data-mce-fragment=\"1\"\u003eಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಮೂಲತಃ ದಕ್ಷಿಣ ಕನ್ನಡದವರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಷಾ ಕಿರಣ, ಕರಾವಳಿ ಅಲೆ, ಕಸ್ತೂರಿ ನ್ಯೂಸ್ 24@7 ನಲ್ಲಿ ಕೆಲಸ ಮಾಡುತ್ತ. ನಂತರ ಬೆಂಗಳೂರಿಗೆ ಬಂದ ನವೀನ್ ಸೂರಿಂಜೆ ಸಧ್ಯ ಬಿಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಷಾಕಿರಣ ಮತ್ತು ಕರಾವಳಿ ಅಲೆ ಪತ್ರಿಕೆಯ ಸುರತ್ಕಲ್ ವಿಭಾಗದ ಬಿಡಿ ವರದಿಗಾರರಾಗಿ ಕೆಲಸ ಮಾಡಿರುವ ನವೀನ್ ಪರಿಸರ ಪರವಾದ ಸುದ್ದಿಗಳು, ಮಾನವತೆಯ ವಿರುದ್ಧದ ನಿಲುವುಗಳಿರೋ ಸಂಘಟನೆಗಳ ವಿರುದ್ಧದ ಸುದ್ದಿಗಳ ಮೂಲಕ ಸುದ್ದಿಯಾದರು. ಕೋಮುಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್‍ನಲ್ಲಿ ನಡೆದ ಕೋಮುಗಲಭೆಗಳ ಸಚಿತ್ರ ವರದಿ ಮಾಡಿದರು. ಬಿಡಿ ವರದಿಗಾರರಾಗಿದ್ದಾಗಲೇ ಅವರು ಮಾಡಿದ ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.\u003c\/span\u003e\u003c\/p\u003e\n\u003cp dir=\"ltr\" data-mce-fragment=\"1\"\u003e\u003cspan data-mce-fragment=\"1\"\u003eನವೀನ್ ಸೂರಿಂಜೆಯವರ ಆಸಕ್ತಿಯ ಕ್ಷೇತ್ರ ಮಕ್ಕಳು ಮತ್ತು ಮಕ್ಕಳ ಹಕ್ಕುಗಳು. ಮಕ್ಕಳ ಮಾರಾಟ ಜಾಲದ ಬಗ್ಗೆ ಅಪಾರ ಕೆಲಸವನ್ನು ಮಾಡಿರುವ ನವೀನ್ ಸೂರಿಂಜೆ, ಸುಮಾರು ನೂರಕ್ಕೂ ಹೆಚ್ಚು ಮಕ್ಕಳನ್ನು ಪ್ರಾಣಾಪಾಯ\/ಮಾರಾಟ\/ಜೀತದಿಂದ ಮುಕ್ತಗೊಳಿಸಿದ್ದಾರೆ. ಪತ್ರಿಕಾ ರಂಗದಲ್ಲಿ ಸಧ್ಯ ಕ್ರೀಯಾಶೀಲವಾಗಿರುವ ಸಂಘಟನೆಗಳು ಆಡಳಿತಗಾರರ ಪರ ಇರುವ ಹಿನ್ನೆಲೆಯಲ್ಲಿ ಪ್ರಗತಿಪರ ಪತ್ರಕರ್ತರೆಲ್ಲಾ ಸೇರಿಕೊಂಡು ಪತ್ರಕರ್ತರ ಅಧ್ಯಯನ ಕೇಂದ್ರ ಪ್ರಾರಂಭಿಸಿದರು. ಅದರ ಸ್ಥಾಪಕರಲ್ಲಿ ನವೀನ್ ಸೂರಿಂಜೆ ಕೂಡಾ ಒಬ್ಬರು. \u003c\/span\u003e\u003cspan data-mce-fragment=\"1\"\u003eಸಧ್ಯ ವರದಿಗಾರರಾಗಿರುವ ನವೀನ್ ಸೂರಿಂಜೆಯವರ ಲೇಖನಗಳು ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನವೀನ್ ಸೂರಿಂಜೆ, ಕರ್ನಾಟಕ ಹಲವು ಪ್ರಗತಿಪರ ಚಳುವಳಿಗಳ ಭಾಗವಾಗಿದ್ದಾರೆ.\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಕೃತಿಗಳು : \u003cbr data-mce-fragment=\"1\"\u003e1) ನೇತ್ರಾವತಿಯಲ್ಲಿ ನೆತ್ತರು\u003cbr data-mce-fragment=\"1\"\u003e2) ಸದನದಲ್ಲಿ ಶ್ರೀರಾಮ ರೆಡ್ಡಿ\u003cbr data-mce-fragment=\"1\"\u003e3) ಕುತ್ಲೂರು ಕಥನ\u003cbr data-mce-fragment=\"1\"\u003e4) ನಡುಬಗ್ಗಿಸದ ಎದೆಯ ದನಿ\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಇವರ 'ಕುತ್ಲೂರು ಕಥನ' ಪುಸ್ತಕವು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನ್ಸೋರೆಯವರ ನಿರ್ದೇಶನದಲ್ಲಿ 19.20.21 ಹೆಸರಿನಲ್ಲಿ ಸಿನಿಮವಾಗಿದೆ.\u003c\/span\u003e\u003c\/p\u003e","products":[{"product_id":"kutluru-kathana","title":"ಕುತ್ಲೂರು ಕಥನ | ಕುತ್ಲೂರು ಕಥನ","description":"\u003cp\u003eಲೇಖಕರು : ನವೀನ್ ಸೂರಿಂಜೆ \u003c\/p\u003e\n\u003cp\u003eಕುತ್ತೂರು ಕಥನ ಯಾವುದೋ ಕಾಲ್ಪನಿಕ ಕಥೆಯಲ್ಲ.\u003c\/p\u003e\n\u003cdiv\u003eದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ\u003c\/div\u003e\n\u003cdiv\u003eಕುತ್ತೂರು ಗ್ರಾಮ ಮತ್ತು ಅಲ್ಲಿನ ಪ್ರಕೃತಿಯ ಮಡಿಲಲ್ಲಿ\u003c\/div\u003e\n\u003cdiv\u003eಶಾಂತಿ ನೆಮ್ಮದಿಯಿಂದ ಬದುಕಿರುವ ಆದಿವಾಸಿ\u003c\/div\u003e\n\u003cdiv\u003eಬುಡಕಟ್ಟು ಜನಾಂಗವಾದ ಮಲೆಕುಡಿಯರ\u003c\/div\u003e\n\u003cdiv\u003eಜೀವನಗಾಥೆಯಾಗಿದೆ.\u003c\/div\u003e","brand":"BEETLE BOOK SHOP","offers":[{"title":"Default Title","offer_id":44355187900699,"sku":"","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/kutluru-kathana-8411581.png?v=1767537548"},{"product_id":"nadu-baggisada-edeya-dani","title":"ನಾಡು ಬಗ್ಗಿಸದ ಎದೆಯ ದನಿ","description":"\u003cp\u003eಈ ಬರಹವು, ಯುವಜನತೆಯ ನಡುವೆ ಹೊಸ ಸಂಚಲನವನ್ನು ಆರಂಭಿಸಿದ ಮಹೇಂದ್ರ ಕುಮಾರರವರ ಬದುಕನ್ನು ಕುರಿತದ್ದು. ಅವರ ಮಾತುಗಳೇ ಈ ಬರಹಕ್ಕೆ ಮುನ್ನುಡಿಯಂತಿವೆ. “ಇದು ನನ್ನೊಬ್ಬನ ಆತ್ಮಕತೆಯಲ್ಲ. ಕೋಮುವಾದದ ಅಮಲೇರಿಸಿಕೊಂಡು ಸತ್ತ ಮತ್ತು ನಿತ್ಯ ಸಾಯುತ್ತಿರುವ ಬಡ ಹಿಂದುಳಿದ ವರ್ಗಗಳ ಯುವಕರೆಲ್ಲರ ಆತ್ಮಕತೆ”. ಇಂತಹ ಒಳನೋಟ ಅಷ್ಟು ಸಲೀಸಾಗಿ ಸಿಗುವಂತಹದ್ದಲ್ಲ. ಬದುಕಿಗೆ ತನ್ನನ್ನು ತಾನೇ ಒಡ್ಡಿಕೊಂಡು, ಆ ಸವಾಲುಗಳಿಂದ ಕಂಡುಕೊಂಡಿರುವ ಹೊಸ ಒಳನೋಟವಾಗಿದೆ. ಅಂತಹ ಸವಾಲುಗಳು ಬಹುಜನಕ್ಕೆ ಉಂಟುಮಾಡುತ್ತಿರುವ ಹಿಂಸೆಯನ್ನು ಬಗೆಹರಿಸಿಕೊಳ್ಳಲು, ಕಕ್ಕುಲಾತಿಯಿಂದ ಮತ್ತಷ್ಟು ಮಾರ್ಗೋಪಾಯಗಳನ್ನು ಅನುಸರಿಸಿದ್ದರಿಂದ ಆ ನೋಟ ದೊರೆತಿದೆ.\u003c\/p\u003e\n\u003cp\u003e \u003c\/p\u003e","brand":"Beetle Book Shop","offers":[{"title":"Default Title","offer_id":47820349145371,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nadu-baggisada-edeya-dani-5964105.jpg?v=1767534067"},{"product_id":"netraavatiyalli-nettaru","title":"ನೆತ್ರಾವತಿಯಲ್ಲಿ ನೆತ್ತರು","description":"\u003cspan data-mce-fragment=\"1\"\u003eಲೇಖಕ ನವೀನ್ ಸೂರಿಂಜೆ ಅವರ ಕೃತಿ-ನೇತ್ರಾವತಿಯಲ್ಲಿ ನೆತ್ತರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ವಿವಿಧ ಕೋಮುಗಳ ಮಧ್ಯೆ ನಡೆದ ಘರ್ಷಣೆಗಳು, ಅವು ಸಾಮರಸ್ಯದ ಬದುಕಿನ ಮೇಲೆ ಉಂಟು ಮಾಡಿದ ಮರ್ಮಾಘಾತಗಳು, ಅಮಾನವೀಯ ಕೃತ್ಯಗಳು, ಅನಾಗರಿಕರ ವರ್ತನೆಗಳು ಸೌಜನ್ಯ-ಸಭ್ಯತೆ-ಸಂಸ್ಕೃತಿ-ಸಂಸ್ಕಾರಗಳು ಎಂಬ ಪರಿಕಲ್ಪನೆಗಳಿಗೆ ಆರ್ಥವಿಲ್ಲದಂತೆ ಮಾಡಿದ ಘಟನೆಗಳನ್ನು ಲೇಖಕರು ಕೇವಲ ಯಾಂತ್ರಿಕವಾಗಿ ದಾಖಲಿಸಿಲ್ಲ. ಬದಲಾಗಿ, ಇಂತಹ ಕೃತ್ಯಗಳ ಹಿಂದಿನ ಸಂಚುಗಳನ್ನು ಬಯಲಿಗೆಳೆದಿದ್ದಾರೆ. ಪ್ರಜಾಪ್ರಭುತ್ದ ವ್ಯವಸ್ಥೆಯಲ್ಲಿ ಜಾತ್ಯತೀತ ಮನೋಭಾವಕ್ಕೆ ಮಾಡಿದ ಧಕ್ಕೆಯನ್ನು, ಸಂಕುಚಿತ ಮನಸ್ಸಿನ ಕುತಂತ್ರಗಳನ್ನು ಸಹ ದಾಖಲಿಸಿದ್ದಾರೆ. ಸಂಸ್ಕೃತಿಗಳು ನದಿಯ ದಂಡೆಯ ಮೇಲೆ ವಿಕಾಸಗೊಂಡಿವೆ ಎಂದು ಹೇಳಲಾಗುತ್ತದೆ. ಆದರೆ, ನೇತ್ರಾವತಿಯ ನದಿ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಧರ್ಮದ ಹೆಸರಲ್ಲಿ ನೆತ್ತರು ಹರಿದಿರುವ ಕಪ್ಪು- ಅಮಾನವೀಯ ಘಟನೆಗಳ ಸರಮಾಲೆಯಾಗಿ ಇತಿಹಾಸವನ್ನೂ ಈ ಕೃತಿ ದಾಖಲಿಸಿದೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":48090579271963,"sku":"","price":166.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/netraavatiyalli-nettaru-7242149.jpg?v=1767534067"},{"product_id":"sadanadalli-srirama-reddy","title":"ಸದಾನಂದ ಶ್ರೀರಾಮ ರೆಡ್ಡಿ","description":"\u003cdiv class=\"row\"\u003e\n\u003cdiv class=\"col-lg-12\"\u003e\n\u003ch3 class=\"buy-product-style\"\u003eಸದನದಲ್ಲಿ ಶ್ರೀರಾಮರೆಡ್ಡಿ | Sadanadalli Srirama Reddy\u003c\/h3\u003e\n\u003c\/div\u003e\n\u003c\/div\u003e\n\u003cdiv class=\"row\"\u003e\n\u003cdiv class=\"col-lg-12 text-left\"\u003e\n\u003cp\u003e\u003ca href=\"https:\/\/www.navakarnataka.com\/view\/authors\/eyJpdiI6ImcyMHhNWkc0Ny83b1FSV1JDR1F1Q0E9PSIsInZhbHVlIjoieWY5SlVkRG9veCt5MHhZWnp0V1VJQT09IiwibWFjIjoiOGQ5NmJlYWZjZmZkYjcyZmVjN2RiZmUyMDQzZmJjMGJlYTRmYmIzNmFmZjk0YzEzNWI0MjI4MTQ1ZDM2ZDM4MyIsInRhZyI6IiJ9\"\u003eಲೇಖಕರು: ನವೀನ್ ಸೂರಿಂಜೆ , Naveen Soorinje\u003c\/a\u003e\u003c\/p\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":48090583138587,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sadanadalli-srirama-reddy-6857816.jpg?v=1767534005"},{"product_id":"satyolu","title":"ಸತ್ಯೋಲು","description":"\u003cp\u003eಆರಾಧನಾ ಪರಂಪರೆಯನ್ನು ವೈಭವೀಕರಿಸದೆ ವಸ್ತುಸ್ಥಿತಿಯೊಂದಿಗೆ ಸತ್ಯದ ಹಲವು ಒಳನೋಟಗಳನ್ನು ಈ ಕೃತಿಯಲ್ಲಿ ನವೀನ್ ಸೂರಿಂಜೆ ನೀಡಿದ್ದಾರೆ.\u003c\/p\u003e\n\u003cp\u003eಜನಪದ ಸಂಶೋಧನೆ, ಸಂಸ್ಕೃತಿ ಚಿಂತನೆ ಎನ್ನುವುದು ಕೇವಲ ವಿವರಣೆ ಗಳ ದಾಖಲಾತಿ ಅಲ್ಲ. ಈ ಹಿಂದಿನ ಅಧ್ಯಯನಕಾರರ ಮಿತಿಗಳನ್ನು ಅರ್ಥೈಸಿಕೊಂಡು ಅದನ್ನು ದಾಟಿ, ಇನ್ನಷ್ಟು ವಿಶ್ಲೇಷಣೆ, ಪ್ರಶ್ನೆ ಮತ್ತು ಹಲವು ತರ್ಕಗಳನ್ನು ಮುಂದಿಡುವುದು ಎಂದರ್ಥ. ಈ ಕೆಲಸವನ್ನು 'ಸತ್ಯೋಲು' ಕೃತಿ ಯಶಸ್ವಿಯಾಗಿ ನಿರ್ವಹಿಸಿದೆ. ಕೊರಗರು, ಹಿಂದುಳಿದ ಸಮುದಾಯಗಳು, ಮಲೆಕುಡಿಯರು, ಮುಸ್ಲಿಮರು, ಕ್ರೈಸ್ತರೊಂದಿಗೆ ತುಳಿತಕ್ಕೆ ಒಳಗಾದ ಸಮುದಾಯಗಳ ಆಚರಣೆಯಲ್ಲಿರುವ ಕೆಲವು ಕಟ್ಟುಪಾಡುಗಳನ್ನು ಪ್ರಶ್ನಿಸಿ, ಸಮಾನತೆಯ ಆಶಯವನ್ನು ಅಧ್ಯಯನದಲ್ಲಿ ಪ್ರತಿಪಾದಿಸುತ್ತಾರೆ. ಮಾನವೀಯ ಮೌಲ್ಯಗಳನ್ನು ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲಿ ವಿವರಿಸುವ ಕ್ರಮವು ಮುಖ್ಯವೆನಿಸುತ್ತದೆ. ಯಾರೂ ಗಮನಿಸದ ಹಾದಿ ಯೊಂದನ್ನು ಅಧ್ಯಯನದಿಂದ ಅನ್ವೇಷಿಸಿ ಅವುಗಳನ್ನು ಒಳಗೊಂಡ ಕ್ರಮ ಗಳು, ಆಚರಣೆಗಳು ಮನುಷ್ಯತ್ವವನ್ನು ಒಡೆಯುವಂಥದ್ದಲ್ಲ, ಕಟ್ಟಿ ಜೋಡಿ ಸುವಂಥದ್ದು' ಎಂಬುದನ್ನು ಪ್ರತಿಪಾದಿಸಿವೆ. ಸಮುದಾಯಗಳ ಮಧ್ಯದ ಸೌಹಾರ್ದತೆಯ ಆಶಯವನ್ನು ಪ್ರತಿಪಾದಿಸುವ ಮೂಲಕ ಇಂದಿನ ಕೋಮುವಾದಕ್ಕೆ ಈ ಕೃತಿ ಉತ್ತರವನ್ನು ಒದಗಿಸಿದೆ.\u003c\/p\u003e\n\u003cp\u003e- ಡಾ. ಜ್ಯೋತಿ ಚೇಳ್ಳೆರು\u003c\/p\u003e","brand":"BEETLE BOOK SHOP","offers":[{"title":"Default Title","offer_id":50195341934875,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/satyolu-4113620.jpg?v=1767529506"},{"product_id":"karavaliya-caritreyalli-hyder-ali-mattu-tippu-sultan","title":"ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್","description":"\u003cdiv class=\"col-lg-12\"\u003e\n\u003cp align=\"left\"\u003eA historian has no such relationship with changing politics. His relationship is only with the information he has in his hands. When new information becomes available, the historian changes his previous positions. But communal historians are different. They distort history as they wish for the purpose of establishing power and create false information. Communalism is a narrow sentiment of those belonging to a specific religious community, and it does not tolerate or respect people belonging to other religious communities. A strong belief of communalists is that people of different religions cannot live as equal citizens within one nation. But the history of India neither believes this nor accepts it. We all know what happened to the story of Uri Gowda and Nanje Gowda, which arose during the election. In the present book, the author Naveen Soorinje has reassembled much of the information already available about Hyder and Tipu, and has effectively broken down the history built by communalists. Monarchy employs many tactics to retain its power. It suppresses opponents. It uses communities. All of these are in this small book. Ajilas, Bangas, Chowtas, Hegades, Kodavas, Christians, Muslims, Konkanis, Gowdas, Jains of the coast – everyone clashes with the state or forms friendships. Where did communalism come in here? Scholars like Polali Sheenappa Hegade, Keshava Krishna Kudda, B. A. Saletore, P. Gururaj Bhat, who wrote the history of the coast, never called Hyder and Tipu communalists. Naveen Soorinje has continued such a scholarly tradition through this book. Congratulations to him. Prof. Purushothama Bilimale\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51766343434523,"sku":null,"price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karavaliya-caritreyalli-hyder-ali-mattu-tippu-sultanbeetle-book-shop-7403609.jpg?v=1770818045"}],"thumbnail_url":"\/\/cdn.shopify.com\/s\/files\/1\/0686\/2150\/0699\/collections\/naveen-soorinje-4319702.jpg?v=1767528140","url":"https:\/\/beetlebookshop.com\/kn\/collections\/naveen-soorinje.oembed","provider":"Beetle Book Shop","version":"1.0","type":"link"}