ನಿರುಪಮಾ ಅವರು ಹುಟ್ಟಿದ ದಿನ ಸೆಪ್ಟೆಂಬರ್ 30 1931. ನಿಧನ 11ನೇ ಜುಲೈ 2013 ಅವರು ಒಟ್ಟು 114 ಕೃತಿಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ 16 ಕಾದಂಬರಿಗಳು, 5 ಕಥಾ ಸಂಕಲನಗಳು, 5 ವಿಮರ್ಶಾಗ್ರಂಥಗಳು, 4 ಸಂಶೋಧನೆ, 10 ಅನುವಾದ ಕೃತಿಗಳು, 8 ನಾಟಕಗಳು, 14 ಜೀವನ ಚರಿತ್ರೆಗಳು, 32 ಮಕ್ಕಳ ಪುಸ್ತಕಗಳು ಜೊತೆಗೆ ವ್ಯಕ್ತಿಚಿತ್ರ, ಮಹಿಳೆ, ಹಾಸ್ಯ, ನವಸಾಕ್ಷರರಿಗಾಗಿ ಮಾರ್ಗದರ್ಶಕ ಕೃತಿಗಳು, ಸಂಪಾದನೆ, ವಿಜ್ಞಾನ, ಹೀಗೆ ನಿರುಪಮಾ ಬರೆದ ವಿಷಯಗಳು ವೈವಿಧ್ಯಮಯ ಅದರ ಜೊತೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಂಸ್ಕೃತಿ ಇಲಾಖೆ, ವಿವಿಗಳು, ಲೇಖಕಿಯರ ಸಂಘಗಳು ಏರ್ಪಡಿಸಿದ್ದ ರಾಜ್ಯ ಹಾಗೂ ಹೊರರಾಜ್ಯಗಳ ವಿಚಾರ ಸಂಕಿರಣ, ಅನುವಾದ, ಕಮ್ಮಟಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.
ನಿರುಪಮಾ ಅವರು ಸ್ಥಾ ಸಿದ ಶ್ರೀಪ್ರಕಾಶನ ಹಾಗೂ ಆರತಿ ಪಬ್ಲಿಕೇಶನ್ ಮೂಲಕ 227ಕ್ಕೂ ಹೆಚ್ಚು ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸಿದ ಸಾಧನೆ ಅವರದು. ಇವರು ಯಾವುದೇ ಬರಹಗಾರರ ಮೊದಲ ಕೃತಿಯನ್ನೆ ಪ್ರಕಟಿಸುತ್ತಿದ್ದರಿಂದ ಮುಂದೆ ಬರಹಗಾರರು. ಬೆಳೆಯಲು ಪ್ರಕಾಶನ ಒತ್ತಾಸೆಯಾಗಿ ನಿಂತು ಸಹಕಾರಿಯಾಯಿತು.
'ಇಂದಿನ ಹಲವಾರು ಹೆಸರಾಂತ ಲೇಖಕಿಯರ ಪುಸ್ತಕಗಳನ್ನು ಈ ಪ್ರಕಟಣಾ ಸಂಸ್ಥೆಯಡಿಯಲ್ಲಿ ಪ್ರಕಾಶಿಸಲಾಯಿತು. ಅವರಿಗೆ ಅತ್ಯುತ್ತಮ ಮಹಿಳಾ ಪ್ರಕಾಶಕಿ ಎಂಬ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಭಾರ ಸರ್ಕಾರವು ನೀಡಿ ಗೌರವಿಸಿರುತ್ತದೆ. ನಿರುಪಮಾ ಅವರು ಹಲವಾರು ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿದ್ದರು. ಡಾ. ಅನುಪಮಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಇತ್ಯಾದಿ ಹಲವಾರು ಪ್ರಶಸ್ತಿಗಳು ಹಾಗೂ ಬಹುಮಾನಗಳು ಬಂದಿವೆ.