{"product_id":"ennatma-kampamidu","title":"एन्नत्म कम्पमिडु","description":"\u003cp\u003eಒಂದೇ ಹೂವಿನ ಹಲವು ಪಕಳೆಗಳಂತೆ ಇರುವ ಈ ನಿರೂಪಣೆಗಳು ಒಂದು ಹೂವಾಗಿಯೂ, ದಳಗಳಾಗಿಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೂವು ಮತ್ತು ದಳಗಳಂತೆಯೇ 'ಎನ್ನಾತ್ಮ ಕಂಪಮಿದು' ಎನ್ನುವಂತೆ ಕಂಡೂ ಕಾಣದಂತೆ ಕಂಪಿಸುತ್ತವೆ!\u003c\/p\u003e\n\u003cp\u003eಒಂದು ಮೂಲಭೂತ ಪ್ರಶ್ನೆ ಇಲ್ಲಿನ ನಿರೂಪಣೆಗಳನ್ನು ನಿರ್ದೇಶಿಸಿದ ಹಾಗೆ ಕಾಣುತ್ತದೆ. ನಡೆದಂತೆ ದಾರಿಯನು ಬಿಚ್ಚಿ ಬೆಳಸುವುದು, ಇದೇ ಬದುಕು ಎನ್ನುವುದು ಸತ್ಯವೆ ಅಥವಾ ನನಗೆ ಬೇಕಾದ ದಾರಿಯನ್ನು ನಾನೇ ಕಂಡುಕೊಳ್ಳಬೇಕು ಎನ್ನುವುದು ಸತ್ಯವೆ? ಈ ನಿರೂಪಣೆಗಳಲ್ಲಿ ನಾಯಕ ನಾಯಕಿಯರಿಲ್ಲ. ಇಲ್ಲಿ ಯಾರೂ ಮುಖ್ಯರೂ ಅಲ್ಲ. ಅಮುಖ್ಯರೂ ಅಲ್ಲ. ಇದೇ ಈ ನಿರೂಪಣೆಗಳನ್ನು ಭಿನ್ನ ಜಾಗದಲ್ಲಿ ಮತ್ತು ಸ್ವರೂಪದಲ್ಲಿ ನಿಲ್ಲಿಸುತ್ತದೆ.\u003c\/p\u003e\n\u003cp\u003eಕನ್ನಡದ ಅತ್ಯುತ್ತಮ ಕತೆಗಾರ್ತಿಯಾದ ಸುಮಂಗಲಾ ಅವರ ಈ ಕತೆಗಳು - ಇವುಗಳನ್ನು ನಾನು ಉದ್ದಕ್ಕೂ ನಿರೂಪಣೆಗಳೆಂದೇ ಕರೆದಿದ್ದೇನೆ. ಇವು ಸಮಕಾಲೀನ ಸಂದರ್ಭದ ಗಮನಾರ್ಹ ನಿರೂಪಣೆಗಳಾಗಿವೆ -ತೋರಿಕೆಯದಲ್ಲದ, ಕೇವಲ ಬುದ್ಧಿಗತವೂ ಅಲ್ಲದ, ಭಾವುಕತೆಯನ್ನು ಮಾತ್ರ ಆಧರಿಸಿದವು ಎಂದೂ ಅನ್ನಿಸದ ಅಪ್ಪಟ ಮಾನವೀಯ ನಿರೂಪಣೆಗಳಾಗಿವೆ.\u003c\/p\u003e\n\u003cp\u003eಎಂ. ಎಸ್. ಆಶಾದೇವಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":51191109189915,"sku":null,"price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ennatma-kampamidu-7114339.jpg?v=1767528486","url":"https:\/\/beetlebookshop.com\/hi\/products\/ennatma-kampamidu","provider":"Beetle Book Shop","version":"1.0","type":"link"}