{"title":"ವಿವೇಕ ಶಾನಭಾಗ್‌ ಪುಸ್ತಕಗಳು | Vivek Shanbhag Books","description":"\u003cp\u003e\u003cb\u003eಜಾಗತಿಕ ಮಟ್ಟದಲ್ಲಿ ಗಮನಸೆಳೆದ ಆಧುನಿಕ ಸಾಹಿತ್ಯ: ವಿವೇಕ ಶಾನಭಾಗ್ ಪುಸ್ತಕಗಳ ಸಂಗ್ರಹ\u003c\/b\u003e\u003c\/p\u003e\n\u003cp\u003eಸಮಕಾಲೀನ ಕನ್ನಡ ಸಾಹಿತ್ಯದ ಅತ್ಯಂತ ಪ್ರಭಾವಿ ಹಾಗೂ ವಿಶಿಷ್ಟ ಬರಹಗಾರರಲ್ಲಿ ಒಬ್ಬರಾದ ವಿವೇಕ ಶಾನಭಾಗ್ ಅವರ ಕೃತಿಗಳ ಅನನ್ಯ ಸಂಗ್ರಹ ಇಲ್ಲಿದೆ. ಮಧ್ಯಮ ವರ್ಗದ ಬದುಕಿನ ಸಂಕೀರ್ಣತೆ, ಮಾನವ ಸಂಬಂಧಗಳ ಸೂಕ್ಷ್ಮತೆ ಮತ್ತು ಸಮಾಜದ ಬದಲಾಗುತ್ತಿರುವ ಮುಖಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಚಿತ್ರಿಸುವ ಶಾನಭಾಗ್ ಅವರ ಬರಹಗಳು ವಿಶ್ವದಾದ್ಯಂತ ಓದುಗರ ಗಮನಸೆಳೆದಿವೆ. 'ಘಾಚರ್ ಘೋಚರ್', 'ಸಾಕೇತ', 'ಊರು ಭಂಗ'ದಂತಹ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಗಳು ಹಾಗೂ ಕಥಾಸಂಕಲನಗಳ ಈ ಸಮಗ್ರ ಸಂಗ್ರಹವನ್ನು ಇಂದೇ ನಿಮ್ಮದಾಗಿಸಿಕೊಳ್ಳಿ.\u003c\/p\u003e","products":[{"product_id":"sakina-s-kiss","title":"Sakina’s Kiss","description":"\u003cp data-mce-fragment=\"1\"\u003eVenkat answers urgent knocks on the door to his flat one evening to find two insolent young men claiming to have business with his daughter Rekha. He deals with them shortly, only to find his quiet, middle-class life upended by a bewildering set of events over the next few days.\u003c\/p\u003e\n\u003cp data-mce-fragment=\"1\"\u003eEven as Venkat is hurled into a world of street gangs and murky journalism, we see a parallel narrative unfold of a betrayal and disappearance from long ago. Could there be a connection? Set over four mostly sleepless days, we see Venkat lose grasp of the narrative even as he loses grasp of his wife and daughter.\u003c\/p\u003e\n\u003cp data-mce-fragment=\"1\"\u003eExquisitely translated from the Kannada by Srinath Perur,\u003cspan data-mce-fragment=\"1\"\u003e \u003c\/span\u003e\u003ci data-mce-fragment=\"1\"\u003eSakina’s Kiss\u003c\/i\u003e\u003cspan data-mce-fragment=\"1\"\u003e \u003c\/span\u003eis a delicate, precise meditation on the persistence of old biases—and a rattled masculinity—in India’s changing social and political landscape. Ingeniously crafted, Vivek Shanbhag interrogates the space between truth and perception in this unforgettable foray into the minefield of family life.\u003c\/p\u003e","brand":"BEETLE BOOK SHOP","offers":[{"title":"Default Title","offer_id":47019760320795,"sku":"","price":424.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sakinas-kiss-4491954.jpg?v=1767535087"},{"product_id":"ghachar-ghochar","title":"ಘಾಚರ್ ಘೋಚರ್  Ghachar Ghochar - Vivek Shanbhag)","description":"\u003cp\u003e\u003cspan\u003eಆಧುನಿಕ ಬೆಂಗಳೂರು ನಗರದ ಜೀವನವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ.\u003c\/span\u003e\u003cbr\u003e\u003cstrong\u003eಗಿರೀಶ ಕಾರ್ನಾಡ\u003c\/strong\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49611622809883,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ghachar-ghocharbeetle-book-shop-5969793.jpg?v=1772974505"},{"product_id":"ooru-bhanga","title":"Ooru Bhanga","description":"\u003cp\u003e`ಅರ್ಥದ ಗೊಡವೆಯೂ ಬೇಡ, ಎಲ್ಲವನ್ನೂ ಒಂದು ಸೂತ್ರಕ್ಕೆ ಕಟ್ಟುವ ಹಟವೂ ಬೇಡ. ಒಂದಕ್ಕೊಂದು ಸಂಬಂಧ ಕಲ್ಪಿಸಿ ನಾವು ನಂಬಿದ ಅರ್ಥ ಹೊರಡಿಸುವುದರಲ್ಲೊಂದು ಬಗೆಯ ಅನ್ಯಾಯವಿದೆ. ಹಿಂಸೆಯಿದೆ.’\u003c\/p\u003e\n\u003cp\u003e`ಅವಳ ಬೆನ್ನನ್ನು ಸವರಲೆಂದು ಎತ್ತಿದ ಕೈಯನ್ನು ಹಾಗೆ ಅಲ್ಲಿಯೇ ಇರಗೊಟ್ಟರು. ತಾನು ಜೊತೆಗಿದ್ದೇನೆನ್ನುವುದು ಹೇಳದೆಯೂ ಅವಳಿಗೆ ತಿಳಿಯಲಿ ದೇವರೇ ಎಂದು ಒಳಗೇ ಬೇಡಿಕೊಂಡರು. ಒಂದು ದಾಂಪತ್ಯದಲ್ಲಿ ಬಾಯಿಬಿಟ್ಟು ಹೇಳದೆಯೂ ಪರಸ್ಪರ ಜೀವಕ್ಕೆ ಅರಿವಾಗುವ ಎಷ್ಟೊಂದು ಸಂಗತಿಗಳಿರುತ್ತಾವಲ್ಲ ಎಂಬುದು ಅವರಿಗೆ ಆಗ ಮೊದಲ ಬಾರಿಗೆ ಹೊಳೆಯಿತು.’\u003c\/p\u003e","brand":"BEETLE BOOK SHOP","offers":[{"title":"Default Title","offer_id":49611628708123,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ooru-bhanga-1380486.jpg?v=1767536406"},{"product_id":"ghachar-ghochar-by-vivek-shanbhag","title":"Ghachar Ghochar by Vivek Shanbhag","description":"\u003cp\u003eಆಧುನಿಕ ಬೆಂಗಳೂರು ನಗರದ ಜೀವನವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ.\u003cbr\u003e\u003cstrong\u003eಗಿರೀಶ ಕಾರ್ನಾಡ\u003c\/strong\u003e\u003c\/p\u003e\n\u003cp\u003eA great Indian novel.\u003cbr\u003e\u003cstrong\u003eThe New York Times\u003c\/strong\u003e\u003c\/p\u003e\n\u003cp\u003eGhachar Ghochar introduces us to a master.\u003cbr\u003e\u003cstrong\u003eThe Paris Review\u003c\/strong\u003e\u003c\/p\u003e\n\u003cp\u003eGhachar Ghochar provides a master class in crafting, particularly on the power of leaving things unsaid.\u003cbr\u003e\u003cstrong\u003eThe Guardian, UK\u003c\/strong\u003e\u003c\/p\u003e\n\u003cp\u003eVivek Shanbhag is an Indian Chekhov.\u003cbr\u003e\u003cstrong\u003eSuketu Mehta, author of Maximum City\u003c\/strong\u003e\u003c\/p\u003e\n\u003cp\u003eಕೇವಲ ಸಾಂಸಾರಿಕ ರಗಳೆ ಅಥವಾ ಗೋಳುಕರೆಯಾಗಬಹುದಾಗಿದ್ದ ಕಥನವೊಂದು ಮನುಷ್ಯ ಸ್ವಭಾವ ಮತ್ತು ವರ್ತನೆಗಳ ಹಿಂದಿನ ನಿಗೂಢತೆಗೆ ಹಿಡಿದ ಕನ್ನಡಿಯಾಗಿಬಿಡುತ್ತದೆ.\u003cbr\u003e\u003cstrong\u003eಟಿ.ಪಿ. ಅಶೋಕ\u003c\/strong\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51861511930139,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ghachar-ghochar-by-vivek-shanbhagbeetle-book-shop-8920879.jpg?v=1772961795"},{"product_id":"sakeenala-muttu","title":"Sakeenala Muttu","description":"\u003cp\u003eವಿವೇಕರು ಸಮೃದ್ಧ ದೃಶ್ಯವೊಂದರ ಒಂದೊಂದೇ ಪಾರ್ಶ್ವವನ್ನು ತೋರಿಸುತ್ತ, ಆ ಒಂದೊಂದೇ ಪಾರ್ಶ್ವಗಳು ಕ್ರಮೇಣ ಬಹುಸ್ತರದ ಒಂದೇ ಸಂಪೂರ್ಣ ಚಿತ್ರವಾಗುವಂತೆ ಮಾಡಬಲ್ಲ ಕ್ಯೂಬಿಸ್ಟ್ ಕಲಾವಿದನ ಹಾಗೆ. ಅವರು ಕಲ್ಪಕತೆಯ ದೂರ ಸರಹದ್ದುಗಳಲ್ಲಿ ನಿಂತು, ಇದುವರೆಗೂ ನಮ್ಮ ಭಾಷೆಯಿಂದ ನುಣುಚಿಕೊಂಡಂತಿದ್ದ ಅನುಭವವನ್ನು ಸಾಕಾರಗೊಳಿಸುತ್ತಿರುವ ಲೇಖಕರೆನಿಸುತ್ತದೆ. ಇವತ್ತು ಬದುಕುತ್ತಿರುವ ಅನೇಕರ ಬದುಕಿನ ವಿಸ್ತೃತ ದರ್ಶನವಾಗಿರುವ ಈ ಕೃತಿ ಜನರನ್ನು ಅವರಿರುವ ಹಾಗೆಯೇ ತೋರಿಸುತ್ತಿರುವ, ಯಾವುದೇ ವಿರೂಪವಿಲ್ಲದ ಕನ್ನಡಿ. ಈ ಕನ್ನಡಿ ನಾವು ಬಹುಮಟ್ಟಿಗೆ ಅಡಗಿಸಿಡುವ ಅಥವಾ ನಿಗ್ರಹಿಸುವ ನಮ್ಮ ಬದುಕಿನ ದೈನಿಕಗಳನ್ನು ಪಡಿಮೂಡಿಸುವ ಹೊತ್ತಿಗೇ, ನಮ್ಮ ಜೀವನವೆಂದರೆ ನಮ್ಮ ಅತೃಪ್ತಿ, ಬಳಲಿಕೆ, ಇರುಸುಮುರುಸು, ಭಯಭೀತಿ, ಇವೇ ಮುಂತಾದವು ಎಂಬುದನ್ನು ಹಠಾತ್ತಾಗಿ ನಾವೇ ಅರಿತುಕೊಳ್ಳುವಂತೆಯೂ ಮಾಡುತ್ತದೆ.\u003c\/p\u003e\n\u003cp\u003e\u003cstrong\u003e– ಎಸ್ ದಿವಾಕರ್ (ಪ್ರಜಾವಾಣಿ ಪುಸ್ತಕ ವಿಮರ್ಶೆಯಲ್ಲಿ)\u003c\/strong\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51861529100571,"sku":null,"price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sakeenala-muttubeetle-book-shop-5106023.jpg?v=1772961786"},{"product_id":"innu-ondu-by-vivek-shanbhag","title":"Innu Ondu by Vivek Shanbhag","description":"\u003cp\u003eಇನ್ನೂ ಒಂದು ಕಾದಂಬರಿಯ ವೈಶಿಷ್ಟ್ಯ ಹಲವು ರೀತಿಯದು. ಹೊಸ ಕಥಾ ವಸ್ತು, ಹೊಸ ಕಥನವಿಧಾನ, ಲೇಖಕರ ವಿಶ್ಲೇಷಣಾ ಸಾಮರ್ಥ್ಯ – ಎಲ್ಲವೂ ಇದನ್ನೊಂದು ಮುಂಚೂಣಿಯ ಕೃತಿಯನ್ನಾಗಿ ಮಾಡಿವೆ. ಪ್ರತಿಯೊಂದು ಪ್ರಬುದ್ಧ ಕೃತಿಯೂ ತನ್ನ ಶೈಲಿಯನ್ನು ವಸ್ತುವಿನ ಜತೆ ಸಮನ್ವಯಗೊಳಿಸುವುದರ ಮೂಲಕ ಕಲಾತ್ಮಕವಾಗುತ್ತದೆ. ಇದನ್ನೇ ಸಾಮಾನ್ಯವಾದ ಭಾಷೆಯಲ್ಲಿ ಕಥನಕಲೆಯೆಂದು ಹೇಳುವುದು. ವಿವೇಕ ಶಾನಭಾಗರಿಗೆ ಇದು ಆರಂಭದ ಕಾದಂಬರಿಯಲ್ಲೇ ಸಿದ್ಧಿಸಿರುವುದು ಮಹತ್ವದ ಸಂಗತಿ. ಅವರು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಮತ್ತು ವಿಚಾರಗಳನ್ನು ತಮ್ಮ ಕಥನಕ್ಕೆ ಒಳಪಡಿಸುವ ಬಗೆ ಅನನ್ಯವಾದುದೇ ಸರಿ.\u003c\/p\u003e\n\u003cp\u003e– ಕೆ.ವಿ. ತಿರುಮಲೇಶ್\u003c\/p\u003e","brand":"BEETLE BOOK SHOP","offers":[{"title":"Default Title","offer_id":51861564522779,"sku":null,"price":104.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/innu-ondu-by-vivek-shanbhagbeetle-book-shop-5393831.jpg?v=1772961797"},{"product_id":"ondu-badi-kadalu-by-vivek-shanbhag","title":"Ondu Badi Kadalu by Vivek Shanbhag","description":"\u003cp\u003eಈ ಕಥನವು ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಕರಾವಳಿಯ ಈ ಜಿಲ್ಲೆಯಲ್ಲಿ ಹಲವು ನದಿಗಳು ಹರಿದು ಸಮುದ್ರ ಸೇರುತ್ತವೆ. ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ.\u003c\/p\u003e\n\u003cp\u003eಈ ಕಥನದಲ್ಲಿ ಎಷ್ಟೊಂದು ವಿವರಗಳು, ಎಷ್ಟೊಂದು ಪಾತ್ರಗಳು ಮತ್ತು ಸಂಬಂಧಗಳು ಹಾಗೂ ಇವಕ್ಕೆ ಯೋಗ್ಯವಾದ ಪದಸಂಪತ್ತು ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ತಾನು ಹುಟ್ಟಿ ಬೆಳೆದ ಪರಿಸರವನ್ನು ಗಾಢವಾಗಿ ಪ್ರೀತಿಸುವ ಲೇಖಕನಿಗೆ ಮಾತ್ರವೇ ಇದು ಸಾಧ್ಯವಾಗುವುದು. ಜೇಡ ತನ್ನ ಜಾಲವನ್ನು ತನ್ನೊಳಗಿನ ನೂಲಿನಿಂದಲೇ ನೇಯ್ದಂತೆ ನೇಯ್ದ ಕೃತಿ ಇದು.\u003cbr\u003e\u003cstrong\u003eಕೆ.ವಿ. ತಿರುಮಲೇಶ\u003c\/strong\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51861576515867,"sku":null,"price":252.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ondu-badi-kadalu-by-vivek-shanbhagbeetle-book-shop-3957483.jpg?v=1772961797"},{"product_id":"langaru-by-vivek-shanbhag","title":"Langaru by Vivek Shanbhag","description":"\u003cp\u003e\u003cspan\u003eತಾನು ಕಂಡ, ಗ್ರಹಿಸಿದ ಸಂಗತಿಗಳಿಗೆಲ್ಲ ತನ್ನ ಮಾರ್ದವತೆಯ ಸ್ಪರ್ಶ ಕೊಡುವ, ಯಾರನ್ನೂ ಯಾವುದನ್ನೂ ಬಿಡಿಯಾಗಿ ಎಳೆದು ಹರಿದು ನೋಯಿಸದೆ, ಬದುಕಿನ ನೇಯ್ಗೆಯನ್ನೆ ಇಡಿಯಾಗಿ ಅಕ್ಕರೆ ಆದರದಿಂದ ನೋಡುವ, ಭಾಷೆಯೆಂಬ ಇಂದ್ರಿಯಕ್ಕೂ ನಿಲುಕದ ನಾದಗಳಿಗೆ ತನ್ನ ಚೇತನವನ್ನು ಸದಾ ಹುರಿಗೋಳಿಸಿಕೋಂಡಿರುವ ಹುರುಪಿನ ಜೀವಿ ವಿವೇಕ ಶಾನಭಾಗ ಬರೆದ ವಿಶಿಷ್ಟ ಕತೆಗಳು ಇಲ್ಲಿವೆ. ತೀವ್ರ ಸಂಯಮ ಮತ್ತು ಅಷ್ಟೇ ಸಂಭ್ರಮಗಳಿಂದ ವಿವೇಕ್ ಬರೆದಿರುವ ಈ ವೈವಿಧ್ಯಪೂರ್ಣ ಕತೆಗಳು ಸಹಜೀವಿಯ ಅಂತರಂಗವನ್ನು ಬೆಚ್ಚಗಾಗಿಸುತ್ತಲೇ ಸಂವೇದನೆಯನ್ನು ಹಿಗ್ಗಿಸುವ ಶಕ್ತಿ, ನಮ್ರತೆ ಮತ್ತು ತನ್ಮಯತೆಯನ್ನು ಪಡೆನಿವೆ.\u003c\/span\u003e\u003cbr\u003e\u003cstrong\u003e– ಜಯಂತ ಕಾಯ್ಕಿಣಿ\u003c\/strong\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51861584118043,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/langaru-by-vivek-shanbhagbeetle-book-shop-5658746.jpg?v=1772961798"},{"product_id":"ghachar-ghochar-by-vivek-shanbhag-beetle-bookshop","title":"Ghachar Ghochar By Vivek Shanbhag | Translated by Srinath Perur","description":"\u003cp data-path-to-node=\"4\"\u003e\u003cb data-path-to-node=\"4\" data-index-in-node=\"0\"\u003eSTEP INTO A SUSPENSEFUL, PLAYFUL, AND ULTIMATELY MENACING TALE ABOUT THE DESTRUCTIVE SHIFTING CONSEQUENCES OF SUDDEN SUCCESS.\u003c\/b\u003e\u003c\/p\u003e\n\u003cp data-path-to-node=\"5\"\u003eFrom a cramped, ant-infested family home to a sprawling, spacious bungalow, an ordinary family finds itself undergoing a dizzying transition in wealth, status, and morality. The narrator, a sensitive young man adrift in the chaos, escapes the mounting pressure every day by fleeing to a quiet old-world cafe to seek solace from an oracular waiter.\u003c\/p\u003e\n\u003cp data-path-to-node=\"6\"\u003eAs the family members rapidly realign their equations, ambitions, and desires with their newfound prosperity, new strands are tightly knotted while others violently come apart. Masterfully translated from the Kannada by Srinath Perur, \u003ci data-path-to-node=\"6\" data-index-in-node=\"235\"\u003eGhachar Ghochar\u003c\/i\u003e is a razor-sharp modern masterpiece that explores how easily money can untangle the human soul.\u003c\/p\u003e\n\u003cp data-path-to-node=\"7\"\u003e\u003cb data-path-to-node=\"7\" data-index-in-node=\"0\"\u003eWhy this book is a must-have:\u003c\/b\u003e\u003c\/p\u003e\n\u003cul data-path-to-node=\"8\"\u003e\n\u003cli\u003e\n\u003cp data-path-to-node=\"8,0,0\"\u003e\u003cb data-path-to-node=\"8,0,0\" data-index-in-node=\"0\"\u003eAcclaimed Contemporary Masterpiece:\u003c\/b\u003e Written by acclaimed author Vivek Shanbhag and brilliantly translated by Srinath Perur, earning global literary praise.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"8,1,0\"\u003e\u003cb data-path-to-node=\"8,1,0\" data-index-in-node=\"0\"\u003eCompelling \u0026amp; Menacing Plot:\u003c\/b\u003e A gripping, fast-paced novella that packs immense psychological and emotional depth into its brief pages.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"8,2,0\"\u003e\u003cb data-path-to-node=\"8,2,0\" data-index-in-node=\"0\"\u003eBrilliant Social Commentary:\u003c\/b\u003e Offers a searing, unforgettable look at modern ambition, familial greed, and the human cost of rising fortunes.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"8,3,0\"\u003e\u003cb data-path-to-node=\"8,3,0\" data-index-in-node=\"0\"\u003eEssential Modern Fiction:\u003c\/b\u003e A mandatory addition for every bookshelf, perfect for readers of translated literature, contemporary drama, and literary fiction.\u003c\/p\u003e\n\u003c\/li\u003e\n\u003c\/ul\u003e\n\u003cp data-path-to-node=\"9\"\u003eWitness the chilling transformation of wealth and family. Add \u003ci data-path-to-node=\"9\" data-index-in-node=\"62\"\u003eGhachar Ghochar\u003c\/i\u003e to your collection at \u003cb data-path-to-node=\"9\" data-index-in-node=\"100\"\u003eBeetle Bookshop\u003c\/b\u003e today—enjoy \u003cb data-path-to-node=\"9\" data-index-in-node=\"128\"\u003e10–14% off\u003c\/b\u003e and \u003cb data-path-to-node=\"9\" data-index-in-node=\"143\"\u003eFree Shipping on orders above ₹500\u003c\/b\u003e!\u003c\/p\u003e","brand":"BEETLE BOOK SHOP","offers":[{"title":"Default Title","offer_id":52645714067739,"sku":null,"price":298.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/71YOoDxiLqL._SL1400.jpg?v=1784787537"},{"product_id":"mattobbana-samsara","title":"Mattobbana Samsara (ಮತ್ತೊಬ್ಬನ ಸಂಸಾರ)","description":"\u003cp\u003e\"ಕನ್ನಡದ ಜಾಗತಿಕ ಮಟ್ಟದ ಖ್ಯಾತ ಕಥೆಗಾರ ವಿವೇಕ ಶಾನಭಾಗ ಅವರ ಪ್ರಬುದ್ಧ ಬರವಣಿಗೆ ಹಾಗೂ ತಾತ್ತ್ವಿಕ ಹುಡುಕಾಟದ ಅಪೂರ್ವ ಕಥಾಸಂಕಲನ!\"\u003c\/p\u003e\n\u003cp\u003eಕನ್ನಡ ಸಾಹಿತ್ಯ ಲೋಕದ ಪ್ರಮುಖ ಲೇಖಕರಲ್ಲೊಬ್ಬರಾದ \u003cb\u003eವಿವೇಕ ಶಾನಭಾಗ (Vivek Shanbhag)\u003c\/b\u003e ಅವರ \u003cb\u003eಮತ್ತೊಬ್ಬನ ಸಂಸಾರ\u003c\/b\u003e ಕಥಾಸಂಕಲನವು ಒಂದೇ ಕಥನದಲ್ಲಿ ಹಲವು ಕಥಾಸಾಧ್ಯತೆಗಳನ್ನು ಒಳಗೊಂಡಿರುವ ಅತ್ಯಂತ ವಿಶಿಷ್ಟ ಕೃತಿಯಾಗಿದೆ.\u003c\/p\u003e\n\u003cp\u003eಈ ಸಂಕಲನದ ಕಥೆಗಳಲ್ಲಿ ನಮಗೆ ನಿತ್ಯ ಪರಿಚಿತವೆನಿಸುವ ಸಾದಾ ಬದುಕು, ಹಠಾತ್ತನೆ ಅಪರಿಚಿತವೂ ನಿಗೂಢವೂ ಆಗಿ ರೂಪಾಂತರಗೊಳ್ಳುತ್ತದೆ. ಶಿರಸಿ, ಕುಮಟಾ, ಅಂಕೋಲಾದ ಸುತ್ತಮುತ್ತ ಚಿಗುರುವ ಈ ಕಥನಗಳು ತಮ್ಮ ಅದೃಶ್ಯ ಬೇರುಗಳನ್ನು ದೂರದ ಪುಣೆ ಹಾಗೂ ರಂಗೂನಿನವರೆಗೂ ಹಬ್ಬಿಸಿಕೊಳ್ಳುತ್ತವೆ. ಮೇಲ್ನೋಟಕ್ಕೆ ಒಂದಾಗಿ ಕಾಣುವ ಗ್ರಹೀತ-ವಾಸ್ತವದೊಳಗೆ ಹುದುಗಿರುವ ಜಾಗತಿಕ ವ್ಯವಸ್ಥೆ, ಸ್ಮೃತಿಸಂಶ್ಲೇಷಣೆ ಮತ್ತು ಬದುಕಿನ ಸಾಧ್ಯತೆಗಳನ್ನು ಲೇಖಕರು ಪ್ರಬುದ್ಧವಾಗಿ ಹುಡುಕಿದ್ದಾರೆ.\u003c\/p\u003e\n\u003cp\u003eಈ ಕಥಾಸಂಕಲನಕ್ಕೆ ರಂಗಕರ್ಮಿ ಹಾಗೂ ಚಿಂತಕ \u003cb\u003eಅಕ್ಷರ ಕೆ.ವಿ.\u003c\/b\u003e ಅವರು ಬರೆದಿರುವ ವಿಮರ್ಶಾತ್ಮಕ ಸಾಲುಗಳು ಕೃತಿಯ ಅಂತರಂಗದ ತಾತ್ತ್ವಿಕ ಪ್ರಶ್ನೆಗಳನ್ನು ಓದುಗರ ಮುಂದೆ ಇಡುತ್ತವೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":53837685850395,"sku":null,"price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/Mattobbana-Samsara-COVER-2022.jpg?v=1787972342"}],"thumbnail_url":"\/\/cdn.shopify.com\/s\/files\/1\/0686\/2150\/0699\/collections\/speaker_696d4ec9ad272.jpg?v=1787972994","url":"https:\/\/beetlebookshop.com\/collections\/vivek-shanbhag-books.oembed","provider":"Beetle Book Shop","version":"1.0","type":"link"}