Your cart is empty now.
ಅಕ್ಕಮಹಾದೇವಿಯ ಆಯ್ದ ವಚನಗಳ ವಿವರಣೆ
ಧರೆಯ ಮೇಗಣ ಹುಲ್ಲೆ
ಚಂದ್ರನೊಳಗಣ ಎರಳೆ
ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ ಇಂಬನರಿಯದ ಠಾವಿನಲ್ಲಿ ಕಣ್ಣೀಟವ ಮಾಡಿದಡೆ ತುಂಬಿದ ತೊರೆಯ ನಡುವೆ ಮಾಮರ ಕಾತಂತೆ ಚೆನ್ನಮಲ್ಲಿಕಾರ್ಜುನದೇವಾ
ದೂರದ ಸ್ನೇಹವ ಮಾಡಲು ಬಾರದ ಭವಕ್ಕೆ ಬಂದೆ
ಭೂಮಿಯ ಮೇಲಿರುವ ಹುಲ್ಲೆ ಚಂದ್ರನೊಳಗಿರುವ ಜಿಂಕೆಯನ್ನು ಪ್ರೀತಿಸಿದರೆ ಕೂಟವು ಅಸಾಧ್ಯ. ಅಂಥ ಪ್ರೀತಿಯಿಂದ ಫಲವೇನು? ಪ್ರೀತಿಗೆ ಅವಕಾಶವಿರದ ಜಾಗದಲ್ಲಿ ಕಣ್ಣ ನೋಟದಲ್ಲೇ ಪರಸ್ಪರ ಮಿಲನವಾಯಿತು ಅಂದುಕೊಂಡ ಹಾಗೆ ಅಷ್ಟೇ. ತುಂಬಿ ಹರಿಯುವ ತೊರೆಯ ಮಧ್ಯದಲ್ಲಿ ಮಾವಿನಮರವೊಂದು ಬಿಟ್ಟ ಹಣ್ಣು ಕೈಗೆಟುಕದ ಹಾಗೆ ಅದು. ದೂರದ ಸ್ನೇಹ ಅಸಾಧ್ಯವಾಗಿರುವ ಈ ಲೋಕಕ್ಕೆ ಬಂದಿದ್ದೇನೆ ನಾನು.
ಒಲುಮೆಯನ್ನು, ಆತ್ಮಸಂಗಾತವನ್ನು ಸಾಧಿಸುವುದು ಎಂಥ ಸಾಧನೆ ಅನ್ನುವುದನ್ನು ಮಹದೇವಿ ಅಕ್ಕ ಮನದಟ್ಟು ಮಾಡುತ್ತಾಳೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.