Your cart is empty now.
ಶರತ್ ರಿಗೆ ಪದವೊಂದನ್ನು ಕೊಟ್ಟರೆ, ಅದರ ಮೂಲ, ಮೂಲಾರ್ಥ, ದ್ವಂದ್ವಾರ್ಥ, ಉತ್ಪತ್ತಿಯ ಸಂದರ್ಭ, ಆಪಭ್ರಂಶ, ಎಲ್ಲೆಲ್ಲಿ ಯಾರ್ಯಾರು ಹೇಗೆಲ್ಲಾ ಬಳಸಿದ್ದಾರೆ. ಯಾವ್ಯಾವ ಭಾಷೆಯಲ್ಲದು ಯಾವ ಸ್ವರೂಪದಲ್ಲಿದೆ. ಈ ಪದವನ್ನು ಅಲಂಕರಿಸಿದವರು. 'ಅನರ್ಥಕೋಶ'ಕ್ಕೆ ಸೇರಿಸಿದವರ ಬಗ್ಗೆಯೂ, ಮತ್ತದರ ಈಗಿನ ಸ್ವರೂಪದ ಬಗ್ಗೆಯೂ ಸ್ವಾರಸ್ಯಕರವಾಗಿ, ಮಾಹಿತಿಪೂರ್ಣವಾಗಿ ಬರೆಯಬಲ್ಲರು.
ಈ ಲಲಿತ ಪ್ರಬಂಧಗಳಲ್ಲಿ ಸಂಗತಿಯೊಂದರ ಮಾಹಿತಿಯ ಜೊತೆಗೆ ಅದಕ್ಕೆ ಅಂಟಿಕೊಂಡಿರುವ ಸ್ವಾರಸ್ಯಕರವಾದ ವಿಷಯಗಳನ್ನು ಹಾಗೂ ವೈರುಧ್ಯಗಳನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಹುಡುಕಿ ತೆಗೆದು ಓದುಗನ ಮುಂದಿಡುವ ಪರಿಯು ಅನನ್ಯ ಸಂದರ್ಭ ಸಹಿತ ವಿವರಿಸಿ' ಎಂದರೆ. ಒಂದಲ್ಲ. ಕೇಳಿದಷ್ಟು ಸಂದರ್ಭಗಳನ್ನು ಕೊಟ್ಟು ವಿವರಿಸುವ ಜಾಣೆ ಮತ್ತು ಸರ್ಜನಶೀಲತೆ ಈ ಪ್ರಬಂಧಗಳಲ್ಲಿವೆ. ಇದು ಲೇಖಕನ ಶಕ್ತಿ ಎಂದರೆ ಶರತ್ ಅದನ್ನೂ ಸಂದರ್ಭ ಸಹಿತ ವಿವರಿಸಿಯಾರು!
ಸ್ವಾರಸ್ಯಕರ ಸಂಗತಿಗಳೊಂದಿಗೆ ಜಗತ್ತನ್ನೇ ಸುತ್ತಿಸುವ ಈ ಸಂಕಲನವು ಜಗದ ಅಪರಿಚಿತ ಕೌತುಕಗಳನ್ನು ಹಿಡಿದಿಟ್ಟ ಪುಸ್ತಕ. ಜ್ಞಾನವನ್ನೂ ಕೊಡುತ್ತಾ, ಸಂಕೀರ್ಣವಾದುವನ್ನು ಸರಳವಾಗಿ ಹೇಳುತ್ತಾ, ಸಂದರ್ಭಾನುಸಾರ ಸೊಗಸಾಗಿ ವಿವರಗಳನ್ನು ಜೋಡಿಸುತ್ತಾ, ತಿಳಿ ಹಾಸ್ಯದೊಂದಿಗೆ ಓದಿನ ಖುಷಿಯನ್ನೂ ನೀಡುವಂತೆ ಬರೆಯಲು ಬೇಕಾದಷ್ಟು ಸರಕುಗಳು ಶರತ್ರ ಬತ್ತಳಿಕೆಯಲ್ಲಿ ಯುದ್ಧಕ್ಕೆ ಅಣಿಗೊಂಡ ಬಾಣಗಳಂತೆ ತುಂಬಿಕೊಂಡಿವೆ. ನಾವು ನೋಡಿಯೂ ನೋಡದ್ದನ್ನು, ಸಾಧಾರಣ ಅಂದುಕೊಂಡದ್ದನ್ನು, "ಇವುಗಳಲ್ಲಿ ಏನೆಲ್ಲಾ ಇವೆ ನೋಡಿ" ಎನ್ನುತ್ತವೆ ಬರೆಹಗಳು. ಈ ಪುಸ್ತಕದ ಓದು ಒಂದು ಅಪೂರ್ವ ಅನುಭವವನ್ನೂ ದೈನಂದಿನ ಒತ್ತಡದಿಂದ ಬಿಡುಗಡೆಯನ್ನೂ ಕೊಟ್ಟು ನಗಿಸುತ್ತದೆ. ನಿಮ್ಮ ಪುಸ್ತಕದ ಜೋಳಿಗೆಯಲ್ಲಿ ಇದೂ ಸೇರಿಕೊಳ್ಳಲಿ.
- ವಿಷ್ಣು ಭಟ್ ಹೊಸ್ಮನೆ
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.