Free Shipping Above ₹500 | COD available

Bekke Bekke Muddina Sokke Sale -10%
Rs. 175.00Rs. 195.00
Vendor: BEETLE BOOK SHOP
Type: PRINTED BOOKS
Availability: 20 left in stock

'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಇದು ಪ್ರತಿಭಾ ನಂದಕುಮಾರ್ ಅವರ ಎರಡನೆಯ ಕಥಾಸಂಕಲನ, ಒಂದು ಹುಚ್ಚಿನಂತೆ, ತಪಸ್ಸಿನಂತೆ, ಏರುತ್ತಲೇ ಇರುವ ಜ್ವರದಂತೆ ಅತ್ಯಂತ ತೀವ್ರಭಾವದ ಕವಿತೆಗಳನ್ನು ಬರೆಯುವ ಪ್ರತಿಭಾ ಅವರು ಎರಡನೆಯ ಕಥಾಸಂಕಲನಕ್ಕೆ ಇಷ್ಟು ಸಮಯ ಏಕೆ ತೆಗೆದುಕೊಂಡರೋ ಗೊತ್ತಿಲ್ಲ. ಅವರ ಕವಿತೆಗಳು ಜಳಜಳನೆ ಉರಿಯುವ ಸುರುಸುರು ಬತ್ತಿ ಕಡ್ಡಿಯ ಬೆಳಕಲ್ಲಿ, ಜಗವನ್ನು, ಅವರ ಒಳಜಗತ್ತನ್ನೂ 'ಕಾಣಿಸು'ವಂಥವು. ಇಲ್ಲಿರುವ ಹದಿನೈದು ಕಥೆಗಳೂ ಸಹ ಅವರ ಕವಿತೆಗಳ ವಿಸ್ತರಣೆಯೇ ಆಗಿವೆ. ಅಂದರೆ ಇವೆಲ್ಲವೂ ಪ್ರತಿಭಾರ ಅತ್ಯಂತ ಖಾಸಗಿ ಜಗತ್ತಿಗೆ ಸೇರಿದವುಗಳೇನೋ ಎನ್ನಿಸುವಷ್ಟು ತೀವ್ರ ಸೂಕ್ಷ್ಮ ಸಂವೇದನೆಗಳನ್ನು ಹಿಡಿದಿಟ್ಟಿವೆ. ಮೇಲುನೋಟಕ್ಕೆ ಇವೆಲ್ಲವನ್ನೂ ನಗರ ಪ್ರಜ್ಞೆಯ ಕಥೆಗಳು ಎಂದು ಹೇಳಬಹುದಾದರೂ ಇವು ಅದಷ್ಟೇ ಅಲ್ಲ, ನಗರಗಳು ಕೊಡುವ ಅನಾಮಿಕತೆ ಮತ್ತು ಅನಾಥಪ್ರಜ್ಞೆಯಲ್ಲಿ ಹೆದ್ದೂಬ್ಬಳು ಹೇಗೆ ನಲುಗುತ್ತಾಳೆ. ಹೋರಾಡುತ್ತಾಳೆ, ಖುಷಿಯನ್ನು ಕಿತ್ತುಕೊಳ್ಳುತ್ತಾಳೆ ಮತ್ತು ಎಲ್ಲದರ ನಡುವೆಯೂ, ಎಲ್ಲದರ ನಂತರವೂ ಬತ್ತದ, ಸೋಲೊಪ್ಪದ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಆದ್ರ್ರತೆ ಕಳೆದುಕೊಳ್ಳದ ಹೆಣ್ಣು ಇಲ್ಲಿ ಮತ್ತೆ ಮತ್ತೆ ನಮಗೆ ಎದುರಾಗುತ್ತಾಳೆ. ಆ ಮಟ್ಟಿಗೆ 'ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ' ಎನ್ನುವುದು ಇಲ್ಲಿ ಕೇವಲ ಮುಖಪುಟದ ಸೂಟುಧಾರಿಗಷ್ಟೇ ಅಲ್ಲ, ಕಥಾನಾಯಕಿಯರಿಗೂ ಒಪ್ಪುವ ಮಾತು? ಬೆಕ್ಕಿಗೆ ಒಂಬತ್ತು
ಜೀವಗಳಂತೆ ! ಬೆಕ್ಕು is a  survivor!

ಕಥೆಯ ದೃಷ್ಟಿಯಿಂದ ಓದುಗರು ಮತ್ತು ತಂತ್ರದ ದೃಷ್ಟಿಯಿಂದ ಬರಹಗಾರರು ಸಹ ಓದಬೇಕಾದ ಪುಸ್ತಕ ಇದು. ಈ ಕಥೆಗಳ ಚಿತ್ರಕಶಕ್ತಿ ಅನನ್ಯವಾದದ್ದು ಅದು ಕಥೆಗಳನ್ನು ನೇರವಾಗಿ ಮನದಂಗಳಕ್ಕೆ ತಂದು ನಿಲ್ಲಿಸುತ್ತದೆ. ಈ ಕಥೆಗಳು ನಿಮ್ಮನ್ನೂ ಕಾಡಲಿ.

- ಸಂಧ್ಯಾ ರಾಣಿ

Guaranteed safe checkout

Bekke Bekke Muddina Sokke
- +

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.