Your cart is empty now.
ಸಣ್ಣಕತೆಗಳನ್ನು ಬರೆಯುವ, ಓದುವ, ಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ, ಅತ್ಯುತ್ತಮ ಸಣ್ಣಕತೆಗಳನ್ನು ಬರೆದಿದ್ದಾರೆ. ಅನೇಕ ಓದುಗರು ಕತೆಗಳ ಕುರಿತ ಒಳನೋಟಗಳನ್ನು ಪಡೆದುಕೊಂಡಿದ್ದಾರೆ.
ದೊಡ್ಡವರು, ಸಣ್ಣವರು, ಹೊಸ ಕತೆಗಾರ, ಹಳೆಯ ಕತೆಗಾರ, ಜನಪ್ರಿಯ, ಮೊದಲಿಗ ಎಂಬ ಯಾವ ಭೇದವೂ ಇಲ್ಲದೇ ಕತೆಗಾರರಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿರುವ ಕಥೆಕೂಟ ಮಾಡಿರುವ ಮೌನಕ್ರಾಂತಿ ಅದರ ಫಲಾನುಭವಿಗಳಿಗೆ ಮಾತ್ರ ಗೊತ್ತು.
ಹತ್ತು ವರ್ಷಗಳ ಕಾಲ ಕಥೆಗಳನ್ನೇ ಉಸಿರಾಗಿಸಿಕೊಂಡ ಕಥೆಕೂಟ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದೆ. ಕನ್ನಡದ ಅತ್ಯುತ್ತಮ ಕತೆಗಳಿರುವ `ಮಳೆಯಲ್ಲಿ ನೆನೆದ ಕತೆಗಳು', `ಒಲವು ತುಂಬುವುದಿಲ್ಲ' ಮತ್ತು `ಲೈಫ್ ಈಸ್ ಶಾರ್ಟ್' ಓದುಗರ ಮೆಚ್ಚುಗೆ ಮತ್ತು ಮನ್ನಣೆ ಗಳಿಸಿವೆ.
ಇದೀಗ ಕಥೆಕೂಟಕ್ಕೆ ಹತ್ತು ವರ್ಷ ತುಂಬುತ್ತಿರುವ ಹೊತ್ತಲ್ಲಿ ಹಲವು ಲೇಖಕರ ಸೊಗಸಾದ 26 ಕತೆಗಳಿರುವ ಈ ಕಥಾ ಸಂಕಲನ ಹೊರಬರುತ್ತಿದೆ. ಇದು ಹೊಸತಾಗಿ ಬರೆಯುವವರಿಗೆ ಕೈಪಿಡಿ, ಓದುಗರಿಗೆ ರಸದೌತಣ ಮತ್ತು ಕತೆಗಳು ನಡೆದು ಬಂದ ಹಾದಿಯನ್ನು ಅಧ್ಯಯನ ಮಾಡುವವರಿಗೆ ಕೈಪಿಡಿ.
ಇಲ್ಲಿರುವ ಕತೆಗಳನ್ನು ಓದಿದ ನಂತರ ನೀವು ಕತೆಗಳನ್ನು ನೋಡುವ, ಓದುವ, ಗ್ರಹಿಸುವ ರೀತಿ ಬದಲಾಗುತ್ತದೆ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.