{"title":"Arjun Devaladakere | ಅರ್ಜುನ್‌ ದೇವಾಲದಕೆರೆ","description":"\u003cp\u003e\u003cspan\u003eಅರ್ಜುನ್ ದೇವಾಲದಕೆರೆ ಸಕಲೇಶಪುರದ ಮೂಲದ ಜನಪ್ರಿಯ ಕನ್ನಡ ಲೇಖಕ, ಕಾದಂಬರಿಕಾರ ಮತ್ತು ಅಂಕಣಕಾರ. ಇವರು ಮುಖ್ಯವಾಗಿ ಮಲೆನಾಡಿನ ಜೀವನ, ಪ್ರೇಮ ಕಥೆಗಳು ಮತ್ತು ಆಳವಾದ ಚಿಂತನೆಗಳನ್ನೊಳಗೊಂಡ 'ಅತೀತ', 'ಅಭೀರ', ಮತ್ತು 'ಅವಳು-ಬದುಕ ಕಲಿಸಿದವಳು' ಮುಂತಾದ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಯುವಜನತೆಯಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿರುವ ಇವರು, 'ದೇವಾಲದಕೆರೆ ಪ್ರಕಾಶನ'ದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಾರೆ\u003c\/span\u003e\u003c\/p\u003e","products":[{"product_id":"mix-match","title":"ಮಿಕ್ಸ್ ಅಂಡ್ ಮ್ಯಾಚ್ | Mix \u0026 Match","description":"\u003cp\u003e\"ಹೇ ಇದ್ರೇನ್ ಇಲ್ಲಿ..!?” ಆತನನ್ನು ಅಲ್ಲಿ ನೋಡಿದ ಕೂಡಲೇ, ಆ ಸಾವಿನ ಮನೆಯಲೆಲ್ಲ ಸಂಚಲನದ ಜೊತೆಗೆ ಗುಸುಗುಸು ಹಬ್ಬಿತ್ತು. ಅರವತ್ತು ವರ್ಷಗಳ ತುಂಬು ಜೀವನವನ್ನ ನಡೆಸಿದ್ದ ಅನ್ನಪೂರ್ಣ ಅಂದು ಇಹ ಲೋಕ ತ್ಯಜಿಸಿದ್ದರು. ಅವರ ಪಾರ್ಥಿವ ದೇಹವನ್ನ ದರ್ಶನ ಮಾಡಲು ಬರುತ್ತಿದ್ದವರ ಸಾಲಿನಲ್ಲಿ, ಅನ್ನಪೂರ್ಣರವರಷ್ಟೇ ವಯಸ್ಸಾದ, ಆ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಯೊಬ್ಬ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದ ಗುಸು, ಗುಸು ಅನ್ನಪೂರ್ಣರವರ ತಮ್ಮನ ಕಿವಿಗೂ ತಲುಪಿ, ಯಾರೆಂದು ಬಗ್ಗಿ ನೋಡಿದವನ ಕಣ್ಣಲ್ಲಿ ಅರೆಕ್ಷಣ ಅಚ್ಚರಿಯೊಂದು ಹಾದುಹೋಗಿತ್ತು. ಅನ್ನಪೂರ್ಣ ಮನಸಾರೆ ಪ್ರೀತಿಸಿದ ವ್ಯಕ್ತಿಯವನು. ಅವರಿಬ್ಬರೆದು ಅಮರ ಪ್ರೇಮಕತೆ. ಜೀವಕ್ಕೆ ಜೀವವಾಗಿ ಪ್ರೀತಿಸಿ, ಕೊನೆಗೆ ಅಮ್ಮ ಅಪ್ಪನ ಮಾತಿಗೆ, ಬೆದರಿಕೆಗೆ ಹೆದರಿ ಬೇರೆಯವನನ್ನು ಮದುವೆಯಾಗಿದ್ದರು ಅನ್ನಪೂರ್ಣಮ್ಮ, ಆಮೇಲೆ ಎಂದಿಗೂ ಅವರು ಭೇಟಿಯಾಗಿರಲಿಲ್ಲ. ಒಬ್ಬರಿಗೊಬ್ಬರ ಇರುವುಗಳ ಮಾಹಿತಿಯಿದ್ದರೂ ಮುಖತಃ ಎಂದು ಭೇಟಿಯಾಗಲೇ ಇಲ್ಲ. ಅದಾದ ಮೇಲೆ ಬಹುಷಃ ಇದೇ ಅವರ ಮೊದಲ ಭೇಟಿ. ಗುಸುಗುಸು ಮಾತುಗಳ ಪರಿವೆಯೇ ಇಲ್ಲದ ಆತ, ಕಣ್ಣಲ್ಲಿ ಹರಿಯುತ್ತಿದ್ದ ನೀರನ್ನು ಒರೆಸಿಕೊಳ್ಳುವ ಗೋಜಿಗೆ ಬೀಳದೆ \"ಹೇಳಿಲ್ಲ ನಿಂಗೆ, 'ಎಲ್ಲೇ ಇರು, ಯಾರಜೊತೆನಾದ್ರು ಇರು, ಖುಷಿಯಾಗಿರು, ಆದ್ರೆ ನಂಗಿಂತ ಮುಂಚೆ ಈ ಭೂಮಿ ಬಿಟ್ಟೋಗ್ಗೇಡ, ನಿನ್ನ ಭೌತಿಕ ಇರುವಿಲ್ಲದೆ ನಾ ಇರಲ್ಲ ಅಂತ'. ಹೇಳು ಯಾಕ್ ಬಿಟ್ಟೋದೇ 17' ಅನ್ನಪೂರ್ಣರ ಜೀವವಿಲ್ಲದ ದೇಹದೊಡನೆ, ಮನಸ್ಸಲ್ಲೇ ಮಾತನಾಡುತ್ತಿದ್ದನಾತ. #ಕೆಲವೊಂದು ಪ್ರೇಮಕತೆಗಳಿಗೆ ಮೊದಲಷ್ಟೇ ಇರುತ್ತದೆ, ಕೊನೆಯಲ್ಲ. ಒಳಗೆ ಇನ್ನಷ್ಟು ನಮ್ಮ-ನಿಮ್ಮ ಕಥೆಗಳಿವೆ. ಓದಿ ನೋಡಿ. ಹ್ಯಾಪಿ ರೀಡಿಂಗ್... - ಅರ್ಜುನ್ ದೇವಾಲದಕೆರೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50117191368987,"sku":"","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mix-match-3627376.jpg?v=1767529147"},{"product_id":"abheera-idu-raktadalli-bareda-premakathe","title":"ಅಭೀರ | Abheera","description":"\u003cp\u003eಅಭೀರ(ಅತೀತ ಭಾಗ - ೨)\u003c\/p\u003e\n\u003cp\u003e - ಇದು ರಕ್ತದಲ್ಲಿ ಬರೆದ ಪ್ರೇಮ ಕಥೆ  \u003c\/p\u003e\n\u003cp\u003eಹಾಗೆ ಕರ್ನಾಟಕ ಮತ್ತು ಆಂಧ್ರದ ಗಡಿ ಜಿಲ್ಲೆ ಬಳ್ಳಾರಿಯ ನಿಲ್ಲೂರಿನಿಂದ ಅನಾಮತ್ತಾಗಿ ಹೊರಡಿಸಿಕೊಂಡು ಬಂದ ಲೀಲಾಳನ್ನ, ಅದೆಷ್ಟೋ ದಿನಗಳ ಕಾಲ ನಡೆಸಿಕೊಂಡೇ ಹೊರಟಿದ್ದ ಹರಿಣಾಕ್ಷ. ಅವಳು ಕೂಡ ಯಾವುದೋ ಟ್ರಾನ್ಸ್ ಗೆ ಒಳಗಾದವಳಂತೆ, ಅವನ ಹಿಂದೆಯೇ ತಾಯಿಯನ್ನ ಹಿಂಬಾಲಿಸುವ ಮಗುವಿನಂತೆ ಹೆಜ್ಜೆಗೆ ಹೆಜ್ಜೆ ಸೇರಿಸಿ ನಡೆಯುತ್ತಿದ್ದಳು. ಹರಿಣಾಕ್ಷ ಬಿಳಿ ಪಂಚೆ ಬಿಳಿ ಅಂಗಿಯನ್ನ ಧರಿಸಿ, ತನ್ನ ಇಳೆ ಬೀಳುವ ನೀರು ಕಾಣದ ಕೂದಲನ್ನ ಮಡಚಿ ತಲೆಗೆ ಕಟ್ಟಿದ್ದ ಪೇಟದಲ್ಲಿ ಅಡಗಿಸಿದ್ದ. ಉದ್ದ ಗಡ್ಡವನ್ನ ನೀಟಾಗಿ ಅರ್ಧಕ್ಕೆ ಕತ್ತರಿಸಿ ಶಿವಾಜಿ ಮಹಾರಾಜರ ಗಡ್ಡದಂತೆ ಮಾಡಿಕೊಂಡಿದ್ದ. ಜರಿ ಲಂಗ ತೊಟ್ಟಿದ್ದ ಲೀಲಾ ಅವನನ್ನ ಹಿಂಬಾಲಿಸುತ್ತಿದ್ದರೆ, ಗಂಡ ಹೆಂಡತಿ ಯಾವುದೋ ಹಬ್ಬಕ್ಕೋ, ಜಾತ್ರೆಗೋ, ಮದುವೆಗೋ ಹೋಗಿ ಮನೆಗೆ ಹಿಂದುರುಗುತ್ತಿರುವಂತೆ ಭಾಸವಾಗುತಿತ್ತು ನೋಡುಗರಿಗೆ. ಲೀಲಾಳನ್ನ ಹಾಗೆ ಅನಾಮತ್ತು ಹೊರಡಿಸಿಕೊಂಡು ಹೊರಟ ಮೊದಲ ದಿನ, ತಲೆ ಸುಡುವ ಬಿಸಿಲನ್ನೂ ಲೆಕ್ಕಿಸದೆ ಸಂಜೆಯವರೆಗು ಎಲ್ಲಿಯೂ ನಿಲ್ಲದೆ ನಡಿಸಿದ್ದ ಹರಿಣಾಕ್ಷ. ಮಾರ್ಗ ಮಧ್ಯೆ ಒಂದೇ ಒಂದು ಮಾತಿಲ್ಲ. ಮನಸ್ಸು ಟ್ರಾನ್ಸ್ ನಲ್ಲಿದ್ದರು, ಹೊಟ್ಟೆ ಕೇಳಬೇಕಲ್ಲ. ಸಂಜೆಯ ವೇಳೆಗೆ, ಹಸಿದ ಹೊಟ್ಟೆ ನಡಿಗೆಯನ್ನ ಕುಂಠಿತ ಮಾಡಿ, ಕೊನೆಗೊಮ್ಮೆ ದಾರಿಯಲ್ಲಿ ಪ್ರಜ್ಞೆ ತಪ್ಪಿದ್ದಳು ಲೀಲಾ. ಹರಿಣಾಕ್ಷನಿಗೆ ಹಸಿವಿನ ತೊಂದರೆಯಿರಲಿಲ್ಲ. ಅವನು ನೀರಾನ್ನ ತ್ಯಜಿಸಿ ವಾರಗಳೇ ಕಳೆದಿತ್ತು. ಹಸಿವು, ಅವನು 'ಬಾ' ಎಂದರೆ ಮಾತ್ರ ಬರುತಿತ್ತು. ಅಘೋರಿಗಳೇ ಹಾಗೆ, ಅವರು ಎಲ್ಲವನ್ನ ಮೀರಿದವರು. ಬೇಕೆಂದರೆ ಬೇಕು, ಬೇಡವೆಂದರೆ ಬೇಡ. ಸರಳ, ಕ್ಷಣಿಕ ಕಾಮದ ಉತ್ತುಂಗದಲ್ಲಿ ಲೈಂಗಿಕವಾಗಿ ಸಕ್ರಿಯರಾಗಿದ್ದಾಗಲೂ ಗಂಟೆಗಟ್ಟಲೆ ಸ್ಖಲನವನ್ನ ಮುಂದೂಡುವ ತಾಕತ್ತಿರುವ ಸಾಧಕರಿಗೆ, ಹಸಿವೊಂದು ಲೆಕ್ಕವೇ!? ಸಂಜೆಯ ವೇಳೆಗೆ ಹರಿಣಾಕ್ಷನಿಗೆ ‘ಇವಳು ನನ್ನ ಹಾಗೆ ಅಘೋರಿಯಲ್ಲ ಇವಳಿಗೆ ಹಸಿವು, ಬಾಯಾರಿಕೆಗಳಾಗುತ್ತವೆ’ ಎನ್ನುವ ಸತ್ಯದ ನೆನಪಾಗಿ, ರಸ್ತೆ ಬದಿಯ ಅಂಗಡಿಯೊಂದರಲ್ಲಿ ಒಂದಷ್ಟು ಬಿಸ್ಕತ್, ನೀರು ಕೊಡಿಸಿದ್ದ. ಸ್ವಲ್ಪ ಚೇತರಿಸಿಕೊಂಡವಳನ್ನ ಮತ್ತೆ ನಡೆಸಿಕೊಂಡು ಹೊರಟಿದ್ದ. ಮುಂದಿನ ಪೂರ್ಣ ಹುಣ್ಣಿಮೆಯ ದಿನದ ಒಳಗೆ ಗುವಾಹಟಿಯ ಕಾಮಾಕ್ಯ ದೇವಸ್ಥಾನ ತಲುಪುವುದಷ್ಟೇ ಅವನ ಸದ್ಯದ ಗುರಿ...\u003c\/p\u003e\n\u003cp\u003e\u003cbr\u003eಇದು ಅತೀತ ಕಾದಂಬರಿಯ ಮುಂದುವರಿದ ಭಾಗ. ಅತೀತ ಕಾದಂಬರಿಯನ್ನ ಓದಿದ ಮೇಲೆಯೇ ಈ ಕಾದಂಬರಿಯನ್ನ ಓದುವುದು ಉತ್ತಮ.\u003c\/p\u003e\n\u003cp\u003e-ಅರ್ಜುನ್ ದೇವಾಲದಕೆರೆ \u003c\/p\u003e","brand":"BEETLE BOOK SHOP","offers":[{"title":"Default Title","offer_id":51815476166939,"sku":null,"price":292.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/abheera-idu-raktadalli-bareda-premakathebeetle-book-shop-5490081.jpg?v=1771861386"},{"product_id":"avalu-baduku-kalisidavalu","title":"ಅವಳು ಬದುಕು ಕಲಿಸಿದವಳು - Avalu Baduku Kalisidavalu","description":"\u003cdiv class=\"product__description rte quick-add-hidden\"\u003e\n\u003cp\u003eಅದೆಷ್ಟು ಚೆನ್ನಾಗಿ ಬರೆಯುವಿರಿ ಅರ್ಜುನ್ ದೇವಾಲದಕೆರೆ. ಅವಳು ಕಾದಂಬರಿಯನ್ನು ನಾನು ಓದಿದ್ದು ಅರ್ಜುನ್ರ ಇನ್ನೊಂದು ಕಾದಂಬರಿ \"ಆಟಗಾರ\" ನನ್ನು ನನ್ನ ಕೈಯಾರೆ ಬಿಡುಗಡೆಗೊಳಿಸಿದ ನಂತರ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡಿತ್ತು ಅವಳು ಕಾದಂಬರಿ. ಕಾದಂಬರಿಯ ಪ್ರಾರಂಭದಲ್ಲಿ \"ಅವಳನ್ನೋದುವ ಮುನ್ನ\" ಎಂಬ ಪೀಠಿಕೆಯನ್ನು ಓದುತ್ತಿರುವಾಗ ಅರೆಕ್ಷಣ ನನ್ನ ಮಾವನವರಾದ ಕುವೆಂಪುರವರ ನೆನಪಾಗಿದ್ದು ಸುಳ್ಳಲ್ಲ. \"ಅವಳು\" ಎಲ್ಲೂ ಕೂಡ ಕಾಲ್ಪನಿಕವೆನಿಸುವುದಿಲ್ಲ. ನಮ್ಮ ಎದುರಲ್ಲೇ ನಡೆಯುತ್ತಿರುವ ನಮ್ಮ ಪಕ್ಕದ ಮನೆಯ ಹುಡುಗನ ಬದುಕಿನ ಏಳು-ಬೀಳುಗಳನ್ನು ಕಣ್ಣಾರೆ ಕಾಣುತ್ತಿರುವ ಭಾಸವಾಗುತ್ತದೆ. ಅವಳೊಳಗಿರುವ ಪ್ರೇಮ, ಅದನ್ನು ಕಾವ್ಯಾತ್ಮಕವಾಗಿ ಕೆಲವೆಡೆ ಪ್ರಸ್ತುತ ಪಡಿಸಿರುವ ರೀತಿಯಂತೂ ಅತ್ಯದ್ಭುತ. ಕಾದಂಬರಿಯನ್ನು ಸಂಪೂರ್ಣವಾಗಿ ಯುವಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆಯುತ್ತಾ ಹೋಗಿರುವುದು ಅರ್ಜುನ್ರವರ ಬಹುದೊಡ್ಡ ಶಕ್ತಿ. ನನ್ನ ಅಳಿಯ ನಾನೀ ಕಾದಂಬರಿಯನ್ನು ಮನೆಗೆ ತಂದ ಮರುದಿನ ಬೆಂಗಳೂರಿನಿಂದ ಬಂದಿಳಿದಿದ್ದರು. ಬರುವಾಗ \"ಸ್ಟೀಫನ್ ಹಾಕಿನ್ಸ್'ರ ಪುಸ್ತವನ್ನು ಓದಲೆಂದು ಜೊತೆತಂದಿದ್ದರು. ಅದನ್ನು ಬದಿಗೆ ಸರಿಸಿ ಅರ್ಜುನ್ರವರ \"ಅವಳು\" ಮತ್ತು \"ಆಟಗಾರ\"ನನ್ನು ಕೈಗಿಟ್ಟಿದ್ದೆ. ಮುಗಿಸಿ ಎದ್ದವರು ಬಹಳವೇ ಸಂಭ್ರಮಪಟ್ಟರು. ಅರ್ಜುನ್ ದೇವಾಲದಕೆರೆ ಮಲೆನಾಡ ಭಾಗದಲ್ಲಿ ನಾ ಕಂಡ ಯುವಸಾಹಿತಿಗಳಲ್ಲಿ ಮುಂಚೂಣಿಯಲ್ಲಿರುವವರು. ಅವರೀಗ ಕನ್ನಡದ ರೈಸಿಂಗ್ ಸ್ಟಾರ್. ಅವರನ್ನು ಹರಸಿ ಬೆಳೆಸುವ ದೊಡ್ಡ ಜವಬ್ದಾರಿ ಕನ್ನಡಿಗರ ಮೇಲಿದೆ. ಜೊತೆಗೆ ನೀವು ಪುಸ್ತಕಕ್ಕೆ ಕೊಡುವ ದುಡ್ಡಿನ ದುಪ್ಪಟ್ಟು ನೀವೀ ಪುಸ್ತಕದಿಂದ ಪಡೆಯುತ್ತೀರೆಂಬುದು ನನ್ನ ಅಂಬೋಣ. ಇವರ \"ಆಟಗಾರ\" ಕೂಡ ಅದ್ಭುತವಾಗಿದ್ದಾನೆ. ಸಾಧ್ಯವಾದಲ್ಲಿ ಇವರ ಎಲ್ಲಾ ಪುಸ್ತಕಗಳನೊಮ್ಮೆ ಓದಿನೋಡಿ.\u003c\/p\u003e\n\u003cp\u003eಶುಭವಾಗಲಿ ಅರ್ಜುನ್ ದೇವಾಲದಕೆರೆ ನಿಮ್ಮ ಬರಹ ನಾಗಾಲೋಟದಿಂದ ಸಾಗಲಿ. ಕನ್ನಡ ಸಾಹಿತ್ಯಕ್ಕೆ ಬಹಳಷ್ಟು ಕೊಡುಗೆ ನೀಡಲಿ.\u003c\/p\u003e\n\u003cp\u003e- ರಾಜೇಶ್ವರಿ ತೇಜಸ್ವಿ \u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51875657482523,"sku":null,"price":252.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/avalu-baduku-kalisidavalubeetle-book-shop-7588373.jpg?v=1773243728"},{"product_id":"ateeta","title":"ಅತೀತ - Ateeta","description":"\u003cdiv data-expanded=\"true\" class=\"a-expander-content a-expander-partial-collapse-content a-expander-content-expanded\"\u003e\u003cspan\u003eಅರ್ಜುನ್ ದೇವಾಲದಕೆರೆ ಅವರು ಬರೆದಿರುವ ಒಂದು ಅಲೌಕಿಕ ಪ್ರೇಮ ಕಥೆ ಅತೀತ. ಗಿರಿಮನೆ ಶ್ಯಾಮರಾವ್ ಅವರು ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ನಮ್ಮೂರಿನವರು. ಪಶ್ಚಿಮಘಟ್ಟದ ಕಾಡೊಳಗಿಂದ ಎದ್ದು ಬಂದವರು. ಹಾಗಾಗಿ ಅವರಿಗೆ ಮಲೆನಾಡಿನ ಪಟ್ಟು,ವರಸೆಗಳೆಲ್ಲವೂ ಕರಗತ. ಮಲೆನಾಡಿನಲ್ಲೇ ಹುಟ್ಟಿದವರಿಗಲ್ಲದೆ ಬೇರೆಯವರಿಗೆ ಮಲೆನಾಡಿನ ರ್ಣನೆ ಸಾಧ್ಯವಿಲ್ಲ. ಅಲ್ಲಿನ ಬದುಕು, ಹಳ್ಳ, ಗದ್ದೆ, ತೋಟ, ಶಿಕಾರಿ, ಅಲ್ಲಿನ ಬೆರಗು ಅಂಥವರೊಳಗೆ ಹಾಸುಹೊಕ್ಕಾಗಿರುತ್ತದೆ. ಮಲೆನಾಡಿನ ಕಾಡೊಳಗೆ ಭೋರ್ಗಗರೆದು ಸುರಿಯುವ ಮಳೆಗಾಲದ ಮಧ್ಯದ ಮಳೆಯ ವರ್ಣನೆಯನ್ನು ಬಯಲು ಸೀಮೆಯಲ್ಲಿ ಹುಟ್ಟಿದವರು ಎಂದಿಗೂ ವರ್ಣನೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಅದನ್ನು ಕೃತಿಯೊಳಗೆ ತರಲು ಒಳನೋಟ ಬೇಕು. ಬರಹ ತಿಳಿದಿರಬೇಕು. ಅದಕ್ಕೊಂದು ರೂಪ ಕೊಡುವ ಶಕ್ತಿ ಬೇಕು. ಅರ್ಜುನ್ ಅವರಿಗೆ ಇದೆಲ್ಲವೂ ಕರಗತವಾಗಿದೆ. ಇದರಲ್ಲಿ ಮೇಲೆ ಹೇಳಿದ ಎಲ್ಲದರ ಸಾರವೂ ಇದೆ. ಕತೆ, ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಅಲ್ಲಿನ ಆಡುಭಾಷೆಯನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಅದು ಕೃತಿಗೊಂದು ಕಳೆ ತಂದುಕೊಟ್ಟಿದೆ. ಅರ್ಜುನ್ ಅವರಿಗೆ ಬರಹವೂ ಹೊಸತಲ್ಲ. ಈಗಾಗಲೇ ಎರಡು ಕೃತಿಗಳನ್ನು ಹೊರಗೆ ತಂದವರು ಅವರು. ಅತೀತ ಅವರ ಮೂರನೆಯ ಕೃತಿ. ಅವರಿಗೆ ಸಿಟಿಯ ಅನುಭವವೂ ಇದೆ.ಕಾಡು ಬದುಕಿನ ಅನುಭವವೂ ಇದೆ. ಎರಡರ ಸಮ್ಮಿಳನ ಅವರ ಕೃತಿಯಲ್ಲಿ ಮೂಡಿ ಬಂದಿದೆ. ಹಾಗಾಗಿ ಹಳ್ಳಿ ಬದುಕಿನ ತಾಜಾತನದ ಶಿಕಾರಿಯಿಂದ ಹಿಡಿದು ಸಿಟಿ ಬದುಕಿನ ಜೊತೆಗೆ ವಾಮಾಚಾರದ ಭಯಾನಕ ಲೋಕದಲ್ಲೂ ನಿಮ್ಮನ್ನು ಸುತ್ತಾಡಿಸುತ್ತಾರೆ. ಮಲೆನಾಡಿನಲ್ಲೇ ಹುಟ್ಟಿ ಅದರ ಒಳಗೆ ನಿಂತು ನೋಡುತ್ತಾ ಬರೆಯುವವರು ಬೆರಳೆಣಿಕೆಯಷ್ಟು. ಇತ್ತೀಚೆಗೆ ಅವರ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚುತ್ತಿದೆ. ಮಲೆನಾಡಿನ ಪರಿಚಯವೂ ಹೊರಜಗತ್ತಿಗೆ ಆಗುತ್ತಿದೆ. ಪಶ್ಚಿಮಘಟ್ಟ ಎಂದಿಗೂ ನಿಗೂಢವೇ. ಎಷ್ಟು ಜನ ಬರೆದರೂ ಅಲ್ಲಿರುವ ಸರಕು ಖಾಲಿಯಾಗುವುದಿಲ್ಲ. ಯುವ ಪೀಳಿಗೆಯ ಬರಹಗಾರರಲ್ಲಿ ಅರ್ಜುನ್ದೇವಾಲದ ಕೆರೆಯವರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಬಹುದು ಎಂಬುದಾಗಿ ಹೇಳಿದ್ದಾರೆ.\u003c\/span\u003e\u003c\/div\u003e\n\u003cdiv class=\"a-expander-header a-expander-partial-collapse-header\"\u003e\u003c\/div\u003e","brand":"BEETLE BOOK SHOP","offers":[{"title":"Default Title","offer_id":51875673702683,"sku":null,"price":261.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ateetabeetle-book-shop-9325963.jpg?v=1773243727"},{"product_id":"aatagara","title":"ಆಟಗಾರ- Aatagara","description":"\u003cp\u003e\u003cimg\u003e\u003cimg\u003e\u003c\/p\u003e\n\u003cdiv class=\"product__description rte quick-add-hidden\"\u003e\n\u003cp\u003eಕನ್ನಡದ ಯುವಕ-ಯುವತಿಯರು ಕನ್ನಡ ಕಾದಂಬರಿಗಳನ್ನು ಓದುವುದಿಲ್ಲ, ಅದರಲ್ಲೂ ಈ ಕಾರ್ಪೋರೇಟ್ ಕನ್ನಡಿಗರು ಕೇವಲ ಇಂಗ್ಲೀಷ್ ಕಾದಂಬರಿಗಳನ್ನು ಮಾತ್ರ ಓದುತ್ತಾರೆ ಎಂಬ ಆರೋಪವನ್ನು ಸುಳ್ಳಾಗಿಸಿದ್ದು, \"ಅವಳು... ಬದುಕ ಕಲಿಸಿದವಳು' ಕಾದಂಬರಿ. ಜನಸಾಮಾನ್ಯನ ದೃಷ್ಟಿಯಲ್ಲಿ ಯೋಚಿಸಿ, ಜನಸಾಮಾನ್ಯನ ಭಾಷೆಯಲ್ಲಿ ಬರೆದರೆ. ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಪುಸ್ತಕಗಳನ್ನು ಓದುತ್ತಾನೆ ಎಂಬುದನ್ನು ನನ್ನಂತಹ ಚೊಚ್ಚಲ ಕಾದಂಬರಿಕಾರನ ಪುಸ್ತಕವನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಋಜುವಾತುಪಡಿಸಿದ್ದಾನೆ ಕನ್ನಡಿಗ. ಕಾದಂಬರಿಯನ್ನು ಓದಿದದವರಲ್ಲಿ ಬಹಳಷ್ಟು ಜನ \"ಸರ್ ಇದು ನನ್ನ ಮೊದಲ ಕನ್ನಡ ಕಾದಂಬರಿ, ಕನ್ನಡದಲ್ಲೂ ಈ ತರಹದ ಕಾದಂಬರಿಗಳಿವೆ ಎಂಬುದು ತಿಳಿದಿರಲಿಲ್ಲ. ಇನ್ನಷ್ಟೂ ಕನ್ನಡ ಪುಸ್ತಕಗಳನ್ನು ಓದುತ್ತೇವೆ\" ಎಂಬ ಅನಿಸಿಕೆಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದನ್ನು ನೀವುಗಳ ಸಹ ಓದಿದ್ದೀರಿ. ಜೊತೆಗೆ ಹಲವಷ್ಟು ಪ್ರೇಮಿಗಳಿಗೆ ಪಾಠವಾಗಿದ್ದು, ಬದುಕಲ್ಲಿ ಬಸವಳಿದವರಿಗೆ, ಬದುಕ ಹೋರಾಟದಲ್ಲಿ ಸ್ಫೂರ್ತಿಯಾಗಿದ್ದು ಇದೇ \"ಅವಳು. ಆ ಮಟ್ಟಿಗೆ ಅವಳು ಕೇವಲ ಮಾರಟಕ್ಕಷ್ಟೇ ಸೀಮಿತವಾಗದೆ ಜನರ ಮನಸನ್ನು ತಟ್ಟುವಲ್ಲಿ, ಬದುಕಿನ ಪಾಠ ಹೇಳುವಲ್ಲಿ ಯಶಸ್ವಿಯಾಗಿತ್ತು. ಈಗ ಬದುಕಿನ ಪಾಠ ಹೇಳುವ ಮತ್ತೊಂದು ಕಾದಂಬರಿಯನ್ನು ನಿಮ್ಮ ಕೈಯಲ್ಲಿಟ್ಟಿದ್ದೇನೆ ಅದೇ \"ಆಟಗಾರ ಕಾಲಾಯೇ ತಸ್ಯೆ ನಮಃ\". \"ಅವಳು\" ವಸ್ತುಭೂತವಾದ ನನ್ನ ಆತ್ಮಕಥೆ. ಅಲ್ಲಿ ಕಲ್ಪನೆಗೆ ಮತ್ತು ಸೃಜನಶೀಲತೆಗೆ ಅವಕಾಶವಿರಲಿಲ್ಲ. ನಡೆದದ್ದನ್ನು ನಡೆದ ಹಾಗೆಯೇ ಅಕ್ಷರ ರೂಪಕ್ಕಿಳಿಸಿದ್ದೆ. ಆದರೆ ಆಟಗಾರ ಹಾಗಲ್ಲ. ಇಲ್ಲಿ ಎಲ್ಲವೂ ಇದೆ. ನನ್ನ ಸುತ್ತ ನಡೆದ ಹಲವು ಸತ್ಯ ಘಟನೆಗಳನ್ನು ಒಂದು ಸೃಜನಶೀಲ ಚೌಕಟ್ಟಿನಲ್ಲಿಟ್ಟು, ಕಲ್ಪನೆಯ ಕುಂಚದಲಿ ಕಾದಂಬರಿಯಾಗಿಸಿದ್ದೇನೆ. ಕಾರ್ಪೋರೇಟ್ ನಿಂದ ಕಾನನದವರೆಗೂ ಕಥೆಯ ವಿಸ್ತಾರವಿದೆ. ಒಂದು ನವಿರು ಪ್ರೇಮದೆಳೆಯ ಜೊತೆ, ಕುತೂಹಲಕಾರಿ ಕಥಾಹಂದರವನ್ನು ಹೆಣೆಯಲು ಪ್ರಯತ್ನಿಸಿದ್ದೇನೆ. ಯುವ ಮನಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹೆಣೆದಿರುವ ಹಂದರ ಪ್ರಬುದ್ಧ ಓದುಗರನ್ನು ಕಾಡುವಂತಿದೆ. ಆಟಗಾರನ ಬಗ್ಗೆ ಹೆಚ್ಚೇನು ಹೇಳಲಾರೆ. ಕಾದಂಬರಿ ನಿಮ್ಮ ಕೈಯಲ್ಲಿದೆ ನೀವು ಓದಿ ಹೇಳಿ ಆಟಗಾರ ಹೇಗಿದ್ದಾನೆಂದು. ಶುಭವಾಗಲಿ, \"ಅವಳು\"\u003c\/p\u003e\n\u003cp\u003eತುಂಬು ಪ್ರೀತಿಯೊಂದಿಗೆ,\u003cbr\u003e-ಅರ್ಜುನ್ ದೇವಾಲದಕೆರೆ\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51875683991835,"sku":null,"price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/aatagarabeetle-book-shop-7166379.jpg?v=1773243728"},{"product_id":"ಅರ್ಜುನ್‌-ದೇವಾಲದಕೆರೆ-4-ಕಾದಂಬರಿಗಳ-ಸೆಟ್-arjun-devaladakere-novels","title":"ಅರ್ಜುನ್‌ ದೇವಾಲದಕೆರೆ 4 ಕಾದಂಬರಿಗಳ ಸೆಟ್ | Arjun Devaladakere Novels","description":"\u003cp\u003eಅರ್ಜುನ್ ದೇವಾಲದಕೆರೆ ಅವರ ಜನಪ್ರಿಯ 4 ಕಾದಂಬರಿಗಳ ವಿಶೇಷ ಸೆಟ್ ಈಗ Beetle Bookshop ನಲ್ಲಿ ಲಭ್ಯ. ಇಂದೇ ಆರ್ಡರ್ ಮಾಡಿ. \u003cb data-path-to-node=\"3,3,0\" data-index-in-node=\"121\"\u003eCash on Delivery ಮತ್ತು Pan India Shipping ಸೌಲಭ್ಯವಿದೆ.\u003c\/b\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":52126569529627,"sku":null,"price":985.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/BlueandWhiteModernInitialXBusinessLogo_4.jpg?v=1777297000"},{"product_id":"ateetha-abheera-series-novels","title":"ಅತೀತ + ಅಭೀರ ಸರಣಿ ಕಾದಂಬರಿಗಳು | Ateetha + Abheera Series Novels","description":"\u003cp data-path-to-node=\"3,1,0\"\u003eಕನ್ನಡದ ಯುವ ಓದುಗರನ್ನು ಸೆಳೆದಿರುವ ಅರ್ಜುನ್ ದೇವಾಲದಕೆರೆ ಅವರ ಸರಣಿಗಳಾದ 'ಅತೀತ' ಮತ್ತು 'ಅಭೀರ'.\u003c\/p\u003e\n\u003cul data-path-to-node=\"3,1,1\"\u003e\n\u003cli\u003e\n\u003cp data-path-to-node=\"3,1,1,0,0\"\u003e\u003cb data-path-to-node=\"3,1,1,0,0\" data-index-in-node=\"0\"\u003eಅತೀತ (Ateetha):\u003c\/b\u003e ನಿಗೂಢತೆ, ಸಾಹಸ ಮತ್ತು ಕಲ್ಪನಾ ಲೋಕದ ಅದ್ಭುತ ಪಯಣ. ಓದುಗರನ್ನು ಬೆರಗುಗೊಳಿಸುವ ತಿರುವುಗಳಿರುವ ವಿಶಿಷ್ಟ ಕಾದಂಬರಿ.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"3,1,1,1,0\"\u003e\u003cb data-path-to-node=\"3,1,1,1,0\" data-index-in-node=\"0\"\u003eಅಭೀರ (Abheera):\u003c\/b\u003e ಐತಿಹಾಸಿಕ ಅಥವಾ ಸಾಹಸಮಯ ಹಿನ್ನೆಲೆಯ ಮೈನಡುಗಿಸುವ ಕಥಾಹಂದರ. ಈ ಎರಡೂ ಸರಣಿಗಳು ಕನ್ನಡ ಸಾಹಿತ್ಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿವೆ. ರಹಸ್ಯ ಮತ್ತು ಸಸ್ಪೆನ್ಸ್ ಪ್ರಿಯರು ಓದಲೇಬೇಕಾದ ಕೃತಿಗಳಿವು.\u003c\/p\u003e\n\u003c\/li\u003e\n\u003c\/ul\u003e","brand":"BEETLE BOOK SHOP","offers":[{"title":"Default Title","offer_id":52126580048155,"sku":null,"price":553.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/BlueandWhiteModernInitialXBusinessLogo_5.jpg?v=1777297641"}],"url":"https:\/\/beetlebookshop.com\/collections\/arjun-devaladakere.oembed","provider":"Beetle Book Shop","version":"1.0","type":"link"}