ಅಂತರ್ಲಿಂಗಿ/ಗ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ( ಟ್ರಾನ್ಸ್ ಜಂಡರ್ಸ್ ) ವ್ಯಕ್ತಿಗಳು
ನಿಮ್ಮ ಕುಟುಂಬ, ನೆರೆಹೊರೆ, ಸಂಬಂಧಿಕರು,ಶಾಲೆ -ಸಹಪಾಠಿ
ಸ್ನೇಹಿತರು, ಕೆಲಸದ ಸ್ಥಳಗಳು ಇನ್ನಿತರೆ ಸಾಮಾಜಿಕ ಸಂಸ್ಥೆ ಮತ್ತು ಸ್ಥಳಗಳಲ್ಲಿ ನಮ್ಮ ಲಿಂಗತ್ವ ಅಲ್ಪಸಂಖ್ಯಾತರರಿದ್ದರೂ ನಮ್ಮನ್ನು ಯಾರೂ ಗಮನಿಸುದೇ ಇಲ್ಲ. ಯಾರು ಎಷ್ಟೇ ಹಿಂಸೆ, ನೋವು ನಮಗೆ ಕೊಟ್ಟರೂ ನಗಣ್ಯವಾಗಿ ನೋಡುವವರು,ನಮ್ಮಿಂದ ಏನಾದರೂ ತಪ್ಪುಗಳದಾಗ ಮಾತ್ರ ಅದನ್ನು ವೈಭವಿಕರಿಸುತ್ತಾರೆ. ಹೀಗೇಕೆ?
ನಮಗೂ ನೋವು, ದುಃಖ, ಸಮಸ್ಯೆಗಳಿವೆ. ನಿಮ್ಮೊಂದಿಗೆ ಜೀವಿಸುತ್ತಿರುವ ನಮ್ಮ ಬಗ್ಗೆ "ಅಟೆಂಷನ್ ಪ್ಲೀಸ್ ".
ಈ ದೊಡ್ಡ ಸಮಾಜಕ್ಕೆ ನಮ್ಮ ಸಮುದಾಯದ ಕುರಿತು ಹಲವು ತಪ್ಪುಕಲ್ಪನೆಗಳು, ತಮ್ಮದೇಯಾದ ಪೂರ್ವಗ್ರಹಗಳು, ಅರಿವಿನ ಕೊರತೆ ಇರುವಿಕೆಯಿಂದಾಗಿ ಉಂಟಾಗಿರುವ ನಿಮ್ಮ-ನಮ್ಮ ನಡುವಿನ ಕಂದಕವನ್ನು ಮುಚ್ಚಲು "ಅಟೆಂಷನ್ ಪ್ಲೀಸ್ ".
ಹಸಿವು, ನಿದ್ರೆ ಮತ್ತು ಮೈಥುನಗಳು ನಮ್ಮ ದೈಹಿಕ ಬೆಳುವಣಿಗೆ ಮತ್ತು ಮಾನಸಿಕ ವಿಕಾಸಕ್ಕೆ ಅತ್ಯಾವಶ್ಯಕ ಎಂಬುವುದು ಕಟು ಸತ್ಯ. ಆದರೆ ಏಕೆ ಈ "ಮೈಥುನ "ದ ಸುತ್ತ ಮಡಿವಂತಿಕೆಯ ತಡೆಗೋಡೆಗಳು. ಇದು ಸರಿಯೋ ? ಅಥವಾ ತಪ್ಪೋ ?
ಸ್ವಲ್ಪ "ಅಟೆಂಷನ್ ಪ್ಲೀಸ್ ".
ಈ ಸಮಾಜದಲ್ಲಿ ನಾವೂ ಒಬ್ಬರಾಗಿ ಘನತೆ -ಗೌರವಗಳಿಂದ ಬದುಕಲು ನಮ್ಮ ಸಮುದಾಯ ಮಾಡುತ್ತಿರುವ ಅಸ್ತಿತ್ವದ ಪ್ರಯತ್ನಗಳು, ಎದುರಿಸುತ್ತಿರುವ ಸವಾಲುಗಳು, ತಿರಸ್ಕಾರ -ಬಹಿಸ್ಕಾರ -ಪುರಸ್ಕಾರಗಳ ನಡುವಿನ ಸೋಲು - ಗೆಲುವಿನ ಹೋರಾಟಗಳನ್ನು ವಿಮರ್ಶಿಸಲು "ಅಟೆಂಷನ್ ಪ್ಲೀಸ್ ".
ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಕುಟುಂಬಕ್ಕೆ ನಾವೇಕೆ ಬೇಡ? ಕುಟುಂಬದಲ್ಲಿ ಜಡ ವಸ್ತುವಾಗಿ, ಮೆಂಬರ್ ಅಲ್ಲದೇ ಬರೀ ನಂಬರ್ ಆಗಿ ನಾವೇಕೆ ಉಳಿದುಕೊಂಡಿದ್ದೀವಿ? ಕುಟುಂಬದ್ಲಲಿ ದೈಹಿಕ ಹಲ್ಲೆ ಏಕೆ? ಮಾನಸಿಕ ಹಿಂಸೆ ಏಕೆ? ಮರ್ಯಾದಾ ಆತ್ಮಹತ್ಯೆಗಳಿಗೆ ಯಾರ್ಯಾರು ಪ್ರೋತ್ಸಾಹಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳ ಉತ್ತರವೇ "ಅಟೆಂಷನ್ ಪ್ಲೀಸ್ ".
ನಮ್ಮ ಸಮುದಾಯದ ಕುರಿತು ಈ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳ ಇಚ್ಛಾಶಕ್ತಿಯನ್ನು ಒರೆಗಲ್ಲಿಗೆ ಹಚ್ಚಲು ಹಾಗೂ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾಯ್ದೆ -2005 ನಮ್ಮನ್ನು ಏಕೆ ಒಳಗೊಳ್ಳಬೇಕು? ಎಂಬುದರ ಸಮರ್ಥ ಸಂವಾದವೇ ಈ "ಅಟೆಂಷನ್ ಪ್ಲೀಸ್ "(ಲಿಂಗ -ಲಿಂಗತ್ವ -ಲೈಂಗಿಕತೆ )
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.